ಪುಟ:ಅರಮನೆ.pdf/೩೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೨೯೭ ಮ್ಯಾಲ ಬಾರದ ಜಾಬಿನ ಮ್ಯಾಲಣ ಸಿಟ್ಟನ್ನು ಹೇರುತಲಿತ್ತು.. ನೂರಾವಂದು ಬೇತಾಳಗಳನ್ನು ಯರಕ ಹೊಯ್ದರ ವಂದು ಭೂತಬಿಲ್ಲೆ ವುಂಟಾತದೆ ಯಂದು ಮುಂತಾಗಿ.... ಹಿಂಗss ಭೂತಬಿಲ್ಲೆಯ ಚೂರುವಾಪರ ಬೆದಕುತ ಕುಂತರ ತಮ್ಮ ಕುತೂಹಲ ತಮಣಿಗೊಳ್ಳುವ ಬಗೆ ಯಂತು? ನಾನೊಲ್ಲೆ ತಾನೊಲ್ಲೆ ಯಂದು ಮೊದಮೊದಲಿಗೆ ಹಿಂಜರಿಕೇನ ಯಕ್ತಪಡಿಸುತಲಿದ್ದ ಮಂದಿ ವಬ್ಬೊಬ್ಬರಾಗಿ ಥಳಗೇರಿಗೆ ಹೋಗೋದು ತಮ್ಮ ತಮ್ಮ ಯೋಗ್ಯತಾನುಸಾರ ದೂರ ದೂರದಲ್ಲಿ ನಿಂತು ಭೂತಬಿಲ್ಲೆಯೂ, ಜಗಲೂರವೇನೂ ಪರಸ್ಪರ ಅನ್ನೋನ್ಯತೆಯಿಂದ ಯಿರುವುದನ್ನು ನೋಡುವುದು.. ಹೊಳ್ಳಿ ಬರುವುದನ್ನು ಮಾಡತೊಡಗಿದರು.. ಕ್ರಮೇಣ ದೂರ ಕಿರಿದಾಗಲಾರಂಭಿಸಿತು.. ವಬ್ಬೊಬ್ಬರ ವಂದೊಂದು ಯಿಧದ ಆಹಾರವನ್ನು ವಯ್ದು ಬೇಯಿನ ಮರದ ಬುಡದಲ್ಲಿಡುವುದೋ? ನಿನ್ನನುಗ್ರಹ ತಮ್ಮ ಮ್ಯಾಲ ಅನುಗಾಲ ಯಿರಲೆಂದು ಬೇಡಿಕೊಳ್ಳುವುದೋ? ಕ್ರಮೇಣ ತುಸು ಹೊತ್ತು ಕಳೆವುದೋ.. ಆ ಅಂತರ ಬೆಂತರ ಮಕ್ಕಳ ಸಿದುಗಾಟವನ್ನು ಕಣ್ಣುಂಬ ನೋಡುವುದೋ? ಮಾತುಗಳನ್ನು ಕಣ್ಣುಂಬ ಕೇಳುವುದೋ, ಲೆಕ್ಕಾಚಾರದಲ್ಲಿ ಸ್ಪರುಶ ಮಾಡುವುದೋ? ಮಾಡತೊಡಗಿದರೆಂಬಲ್ಲಿಗೆ ಸಿವಸಂಕರ ಮಾದೇವಃ... ಅತ್ತ ಬಳ್ಳಾರಿ ಪಟ್ಟಣದ ಕ್ಯಾಂಪಬೆಲ್ಲು, ಹೆನ್ರಿ, ಸ್ಫೋನ, ಹ್ಯಾರೀಸು ಯಂಬಿವೇ ಮೊದಲಾದ ಅಧಿಕಾರಿಗಳ ಕಿವಿಯೊಳಗ ಅನಬಾರದ ಮಾತುಗಳನ್ನು ಪಿಸುಗುಟ್ಟಿದ ಥಾಮಸು ಮನ್ನೋ ಸಾಹೇಬನು ಗುತ್ತಿ ತಾಡಪತ್ರಿ ಚಾಗಲ ಮರಿ.. ಪುಲಿಯಂದುಲ, ಕವುಕುಂಟಲ ಯವೇ ಮೊದಲಾದ ಸಮುಸ್ಥಾನ ಪಾಳೇಪಟ್ಟು ಜಾಗೀರುಗಳನ್ನು ಹಾದೂss ಹಾದು ಕಡಪಾ ಯಂಬ ಮೂರು ಸರಳಾಕ್ಕರಗಳ ಹೆಸರಿನ ಪಟ್ಟಣವನ್ನು ಸೇರಿಕೊಂಡು ಯವತ್ತಿಗೆ ಯೇಸು ದಿವಸಗಳಾಗಿದ್ದವೆಂದರೆ ಫಲಾನ ಆಸು ದಿವಸಗಳಾಗಿದ್ದವು. ತಾನು ಅಧಿಕಾರಿಗಳಿಗೆ ಹೇಳಿದ್ದ ಮಾತುಗಳು ಯಷ್ಟರ ಮಟ್ಟಿಗೆ ಸರಿ? ಆ ಮಾತುಗಳು ತನ್ನ ಘನಂದಾರಿಗೆ ತಕ್ಕದಾಗಿ ಯಿದ್ದವಾ? ಯಿಲ್ಲವಾ? ತಾನಾ ಸಂಚಿನ ರೂವಾರಿಯಾಗದಿದ್ದಲ್ಲಿ ತನ್ನ ಅಧಿಕಾರಿಗಳೇ ತನ್ನ ಸರಕಾರ ನಿಷೆಯ ಬಗ್ಗೆ ಅನುಮಾನ ತಾಳುತ್ತಿರಲಿಲ್ಲವಾ? ತನ್ನ ನೆಮ್ಮದಿಗೆ ಭಂಗ ಬರುತ್ತಿರಲಿಲ್ಲವಾ? ನಾಗಿರೆಡ್ಡಿಯಿಂದ ಹಲವರು ಸೂರಿ ಪಡೆಯುತ್ತಿರಲಿಲ್ಲವಾ? ಯಂಬಿವೇ