ಪುಟ:ಅರಮನೆ.pdf/೩೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೧೪ ಅರಮನೆ ಸವಾಲು ಪಾಟಿಸವಾಲು ನಡೆಯಿತು. ಮುನುಸೋಬಯ್ಯನು ಜಗ್ಗಲಿಲ್ಲ, ಬಗ್ಗಲಿಲ್ಲ... ಅಸಂಪೂಕ್ತವಾಗಿ ಮಿಷನರಿ ಭವನವನ್ನೇ ಸೆರೆಮನೆಯನ್ನಾಗಿ ಪರಿವರಿಸಿ ಅವಯ್ಯನನ್ನು ಕೆಲ ದಿವಸಗಳ ಕಾಲ ಗುಹಬಂಧನದಲ್ಲಿರಿಸ ಲಾಯಿತು. ಮಂದಿ ಗಲಾಟೆ ಮಾಡಿದ್ದಕ್ಕೆ ಹೆದರಿ ಸಿಪಾಯಿಗಳನ್ನು ಹಿಂದಕ್ಕೆ ಪಡೆಯಲಾಯಿತು.. ಮಿಷನರಿಯನ್ನು ಮೂಸಿವೆಸಿದ ಆ ಮಾಜಿ ನ್ಯಾಯಾಧೀಸನು ಅಕ್ಕಪಕ್ಕದ ಗ್ರಾಮಗಳಲ್ಲಿ ಪ್ರವಾಸ ಕಮ್ಮಿಕೊಂಡನು. ಜನರ ಕೋಪವನ್ನು ತಮಣಿ ಮಾಡುವ ಯತ್ನ, ಪ್ರಯತ್ನ ಮಾಡಿದನು. ಆದರ ಮಂದಿಯ ಪಂಚೇಂದ್ರಿಯಂಗಳು ಡಬಾಕಿಕೊಂಡು ಬಿಟ್ಟಿದ್ದವು.... ನಾಗಿರೆಡ್ಡಿಯವರು ಕುಂಪಣಿ ಸರಕಾರದ ಅತಿಥಿಗಳು.. ಅವರು ಕ್ಷೇಮವಾಗಿರುವರು. ಕೆಲ ದಿನಗಳಲ್ಲಿ ಸರಕಾರವೇ ಅವರನ್ನು ಗವುರವಪೂರುವಕವಾಗಿ ಬಿಡುಗಡೆ ಮಾಡುವುದು ಯಂದು ಮುಂತಾಗಿ ಪ್ರಚಾರ ಮಾಡಲೆಂದು ಬಂದ ಸಿಪಾಯಿಗಳನ್ನು ಹಿಡಿದು ಹಿಗ್ಗಾಮುಗ್ಗಾ ತದಕಿ ಮೋಡಿಸಲಾರಂಭಿಸಿತು ಕ್ರುದ್ದಮಂದಿಯು ರೆಡ್ಡಿ ಬಿಡುಗಡೆಗೊಂಡು ಬರದಃ ಹೊರತು ತಾವ್ಯಾರು ವಂದಗುಳು ಬಾನ ಮುಟ್ಟುವುದಿಲ್ಲವೆಂದು ಸಪಥ ಮಾಡಿ ವುಪಾಸ ಯಿದ್ದು ಬಿಟ್ಟವರೆಷ್ಟೋ? ದುಕ್ಕದ ಸೆಳವಿಗೆ ಸಿಕ್ಕು ಆತುಮಾಹುತಿ ಮಾಡಿಕೊಂಡವರೆಷ್ಟೋ? ಅರೆ ಹುಚ್ಚರಾದವರೆಷ್ಟೋ? ಸರಕಾರದ ಆಸ್ತಿಪಾಸ್ತಿಗೆ ಹಾನಿ ಮಾಡಲಾರಂಭಿಸಿದವರೆಷ್ಟೋ? ಅವರಿವರನ್ನು ನಾಗಿರೆಡ್ಡಿಯಂದು ಭ್ರಮಾ ಮಾಡಲಾರಂಭಿಸಿದವರೆಷ್ಟೋ? ಸರಕಾರದ ಮ್ಯಾಲಣ ಕೋಪವನ್ನು ಅವರಿವರ ಮ್ಯಾಲ ತೋರಿಸಲಾರಂಭಿಸಿದವರೆಷ್ಟೋ? ಅತ್ತ ಗಡೇಕಲ್ಲಿನೊಳಗ ಘಟಿಸಲಿರುವ ಪರಿಸೆಗೆ ಸಂಭ್ರಮ ಯಿರಲಿಲ್ಲ. ನಡೆಯೋದನು ನಡೆಸಬೇಕು.. ಮಾಡೋದನು ಮಾಡಿಸಬೇಕು... ಬಂಧನಕ್ಕೊಳಗಾಗಿರುವಾತನು ದಯವಾಮುಸ ಸಂಭೂತನು.. ಸಾಕ್ಷಾತ್ ಭೀಮಲಿಂಗೇಶ್ವರ ಸ್ವಾಮಿಯ ವರಪುತ್ರನು.. ಜೀವತ ಯಿರುವಾಗಲೇ ಪವುರಾಣಿಕ ನಾಯಕಪಟ್ಟವನ್ನು ಅಧಿಗಮನ ಮಾಡಿರುವಂಥಾತನು.. ತನ್ನದು ಯಷ್ಟೇ ಪೀಕಲಾಟ ಯಿದ್ದರೂ ಪರಿಸೆಂದ ಚುಕ್ಕಾಣಿಯನ್ನು ಸಮರವಾಗಿ ಹಿಡಕೊಂಡು ಯಿರುತಿದ್ದಂಥಾತನು. ಬಡಬಗ್ಗರ ಬದುಕಿಗೆ ಮಮ್ಮಲನ ಮರುಗುತ್ತಿದ್ದಂಥಾತನು... ಸರಕಾರದ ಚರಸಾಲದೊಳಗ ಯೇನು ಪಡಿಪಾಟಲನು ಅನುಭವಿಸುತ್ತಿರುವನೋ? ಯಂಬ ಚಿಂತೆಯೊಳಗ ಬೇಯುತ್ತಲೇ.....