ಪುಟ:ಅರಮನೆ.pdf/೩೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೧೬ ಅರಮನೆ ಸಾಹೇಬನನ್ನು ಕಂಡು ಯಿಚಾರ ಯಿನಿಮಯ ಮಾಡಿಕೊಳ್ಳಬೇಕೆಂದೂ, ಯಾವುದೇ ಕ್ರುತ್ಯ ಕುಂಪಣಿ ಸರಕಾರದ ಯಿರುದ್ಧ ಅಲ್ಲವೆಂಬುದನು ಆತಗೆ ಮನವರಿಕೆ ಮಾಡಿಕೊಡಬೇಕೆಂದು ಗೆಳೆಯನಂತೆ ಸಲಹೆ ನೀಡಿದನು.. ಹಂಪರಸಪ್ಪಯ್ಯನೊಂದಿಗೆ ಗವುಡ ಪ್ರತ್ಯೇಕವಾಗಿ ಸಮಾಲೋಚನೆ ಮಾಡಿದನು. ಸ್ಕೂವರನ ಮರ್ಮ ತಮ್ಮಿಲ್ವರಿಗೆ ಗೊತ್ತಿಲ್ಲದಿಲ್ಲ. ತಾನೋಲ್ಡನೆ ಹೋಗುವುದಾಗಿ ದಿವಾನನೂ, ತಾನೋವ್ವನೇ ಹೋಗುವುದಾಗಿ ಗವುಡನೂ ವಾದಿಸಿದರು. ಬುದ್ದಿಬಲದಲ್ಲಿ ದಿವಾಣಜಿ ಮುಂದಿದ್ದರೆ, ಬಾಹುಬಲದಲ್ಲಿ ಗವುಡನು ಮುಂದಿದ್ದನು. ಬಾಹುಬಲ ಅಂಗಸಾಧನೆಯಿಂದ ಲಭ್ಯವಾಗುವಂಥಾದ್ದು.. ಆದರೆ ಬುದ್ದಿಬಲ!.. ತನ್ನಂಥ ನೂರಾರು ಮಂದಿ ಶೂರರನ್ನು ರೂಪಿಸುವ, ಸಂಘಟಿಸುವ ತಾಕತ್ತು ಯಿರುವ ಹಂಪರಸಪ್ಪಯ್ಯನನ್ನು ಬಲಿಪೀಠದ ಕಡೆ ಕಳುವಲಕ ಗವುಡ ಸುತಾರಾಂ ಸಮ್ಮತಿಸಲಿಲ್ಲ.. ಸಾವುರಾರು ಮಂದಿ ತರುಣರೊಳಗ ಸಮರೋತ್ಸಾಹವನ್ನು ತುಂಬಬಲ್ಲಂಥ ಗವುಡನನ್ನು ಕಳುವಲಕ ದಿವಾಣಜಿ ಸುತಾರಾಂ ಸಮ್ಮತಿಸಲಿಲ್ಲ.. ಯಿಬ್ಬರೂ ಹೋಗಬೇಕಂದರ ಬುದ್ದಿಬಲ, ಬಾಹುಬಲ ಯರಡೂ ನಷ್ಟ ಹೊಂದುವವು.. ಮತ್ತೆ ಅವರ ನಡುವೆ ಯಾವ ಮಾತುಕತೆ ನಡೆಯಿತೋ ಯೇನೋ.. ಗವುಡನನ್ನು ಹರಪನಹಳ್ಳಿಗೆ ಫಲಾನ ದಿವಸದಂದು ಕಳುವಲು.. ಅತ್ತ ನಿನ್ನೆ ದಿವಸವೇ ಥಾಮಸು ಮನೋ ಬಳ್ಳಾರಿ ಪಟ್ಟಣವನ್ನು ತಲುಪಿದ್ದು... ಮಿನ್ನೇನು ಬಂದ ನಾಗಿರೆಡ್ಡಿಯ ಯಿಚಾರಣೆ ಮಾಡಲು ಪ್ರತ್ಯೇಕ ನ್ಯಾಯಾಲಯ ಸ್ಥಾಪನೆಗೆ ಹುಕುಂ ಮಾಡುವನು, ಗೋಲ್ಡಿಂಗ್ ಹ್ಯಾಂ ಅಥವಾ ಮ್ಯಾಕ್‌ರವರ ಪಯ್ಕೆ ವಬ್ಬರನ್ನು ನ್ಯಾಯಪೀಠದ ಸ್ಥಾನಕ್ಕೆ ಆಯ್ಕೆ ಮಾಡುವನೆಂದೇ ಭಾವಿಸಿದ್ದ ಕ್ಯಾಂಪ್‌ಬೆಲ್ ಮತ್ತಿತರ ಹಿರಿಯ ಅಧಿಕಾರಿಗಳಿಗೆ ಕಲೆಟ್ಟರನ ವರನೆಯಿಂದ ಬಲು ಬ್ಯಾಸರಾತು. ಅವರೆಲ್ಲರ ಮಜುರೆ ಸ್ವೀಕರಿಸಿದ ನಂತರವಾದರೂ ರೆಡ್ಡಿಯನ್ನು ಕಾಣುವ ಕ್ರಿಯಾ ತೋರಿಸಬೇಕಿತ್ತಲ್ಲವೆ? ಯೇನು ಮಾಡಿದಿರಿ? ಯೇನು ಬಿಟ್ಟಿರಿ? ರೆಡ್ಡಿಂರು ಬ೦ಧನಾ ನಂತರದ ಸಾಧಕಬಾಧಕಗಳೇನು? ಯಂದು ಮುಂತಾಗಿ ಯಿಚಾರಿಸಬೇಕಿತ್ತಲ್ಲವೇ? ಯೀ ಕ್ರಿಯಾಕಟ್ಟಳೆಗಳನ್ನೆಲ್ಲ ಬಿಟ್ಟು ತಾನು ಸೀದ ಬಂಗಲೆಯೊಳಗೆ ಸೇರಿಕೊಂಡು ಬಿಡುವುದೆಂದರೇನು? ಮುಚ್ಚಿದ ಬಾಗಿಲು ಮುಚ್ಚಿದಂಗೇ ಯಿರುವುದು, ಮುಚ್ಚಿದ ಕಿಟಕಿ ಮುಚ್ಚಿದಂಗೇ ಯಿರುವುದು? ವಳಗ ತಾನೋಗ್ರನೇ......