ಪುಟ:ಅರಮನೆ.pdf/೩೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೧೭ ಬಳ್ಳಾರಿ ಪಟ್ಟಣದ ಸರಹದ್ದಿನೊಳಗೆ ಕಾಲಿರಿಸಿದ್ದೇ ತಡ ಮನೋಗೆ ಬಿಕ್ಕಳಿಕೆ ಸುರುವಾಗಿದ್ದವು. ದಾರಿವುದ್ದಕ್ಕೂ ಬಾಯಿ ಪಸೆ ಆರುತ್ತಲೇ ಯಿತ್ತು. ತನ್ನಂತರಂಗದಲ್ಲೋ ತಪ್ಪು ಸರಿಗಳ ಗೊಂದಲ.. ಯದುರಿಗೋ ಯಿತಿಹಾಸಕ್ಕೆ ಸೇರಲೆಂದು ಹಾತೊರೆಯುತ್ತಿರುವ ಮುಂಬರುವ ದಿನಗಳು... ಆ ದಿನಗಳಲ್ಲಿ ತಾನು... ದೇವರೇ... ನಾಗಿರೆಡ್ಡಿ ಯಂಬ ಸಬುಧವು ಕೆಲಕಾಲ ಕಿವಿಗೆ ಬೀಳದಂತೆ ನಿಗಾ ವಹಿಸು ಯಂದು ಬೇಡಿಕೊಂಡೇ ತಾನು ಸರಹದ್ದು ಪ್ರವೇಶ ಮಾಡಿದ್ದು... ಆದರೆ ಥತ್! ಆ ಥ್ಯಾಕರೆ ಜಾಯಮಾನದ ಹೆವದರಿ ಬಿಟ್ಟನಲ್ಲ... ಅವನು ವುಚ್ಚರಿಸಿದ ಯರಡು ವಾಕ್ಯಗಳಲ್ಲಿ ನಾಗಿರೆಡ್ಡಿಯಂಬ ಅಯ್ದು ಭಯಾನಕ ಸಬುಧಗಳಿದ್ದವು ಯಂದರೆ.. ಯಿನ್ನು ವುಳಿದವರು.. ಮನೋ ಸರಸರ ಬಂದವನೆ ಅತಿಥಿಗ್ರಹ ಪ್ರವೇಶಿಸಿ ತನ್ನನ್ನು ತಾನೇ ಗ್ರುಹ ಬಂಧನದಲ್ಲಿ ಯಿರಿಸಿಕೊಂಡುಬಿಟ್ಟಿದ್ದನು.ತನಗೂ ಅಂತಃಕರಣಯಿರುವುದೆಂಬ ಸುಳಿವು ಯಿತರರಿಗೆ ತಿಳಿಯದಿರಲೆಂದು.... ಪಯಣದ ದಣುವು ಯಂಬುದನ್ನು ಮುಂದೆ ಬಿಟ್ಟಿದ್ದನು.. ಆತನೆಂಜಲನು ವುಂಡಿರುವ ನನ್ನೊಳಗ ಆತನೋ, ನನ್ನೆಂಜಲನು ವುಂಡಿರುವ ಆತನೊಳಗ ನಾನೋ! ವಂದಗ್ಗದಲ್ಲಿ ನಾನೇ ಸೆರೆಮನೆಯೊಳಗ ಯಿರುವುದು.. ಯಿನ್ನೊಂದರದಲ್ಲಿ ಅವನೇ ಯಲ್ಲಿರುವುದು. ಮೋ ಮಮ್ ಗಾಡ್.. ಕುಂಪಣಿ ಸರಕಾರದ ಸೇವೆಯಲ್ಲಿರುವವರ ಚರುವ ದಪ್ಪಯಿರಬೇಕೆಂದೂ, ತನ್ನ ಮನದೊಳಗ ಸೂಕ್ಷ್ಮ ಭಾವನೆಗಳನು ಬಿಟ್ಟುಕೊಳ್ಳಕೂಡದು ಯಂದೂ ಮೊದಲಾಗಿ ಗ್ರಹಾಂ ಹೇಳಿದ್ದ ಮಾತುಗಳನ್ನು ನೆನಪಿಸಿಕೊಳ್ಳುತ್ತ.. ಯಾಕೆ ತಾನಿಷ್ಟು ಸೆಂಟಿಮೆಂಟಾಗುತ್ತಿರುವೆನು ತಂದೆಯೇ..? ವಂದು ಹಗಲು, ವಂದು ರಾತ್ರಿ ಕಳೆದು ಯರಡನೇ ಹಗಲು ಮೂಡಿತು.. ತಾನೀಗ ನಿನ್ನೆ ದಿವಸದ ಭಾವನೆಗಳನ್ನು ಅನುಭೋಗಿಸಕೂಡದು. ನಿನ್ನದು ನಿನ್ನೆಗೇ.. ಯವತ್ತಿಂದು ಯವತ್ತಿಗೇ, ತನ್ನೊಳಗ ಮಾನವನು ಪಾವಲಿ ಭಾಗ ಅದಾನ, ಯಂತ್ರಮೂರು ಪಾವಲಿ ಭಾಗ ಅದ.. ತಾನು ಹೇಳಿ, ಕೇಳಿ ಕುಂಪಣಿ ಗವರುಮೆಂಟಿನ ಸರವಂಟನು.... ಯಿಡೀ ರಾತಿರಿ ಪಲ್ಯಂತ ನಿದುರೆಯಿಲ್ಲದೆ ಕನವರಿಸಿದ.. ಮಗ್ಗುಲು ಮ್ಯಾಲ ಮಗ್ಗುಲು ಬದಲಾಯಿಸುತ್ತ ವುರುಳಾಡಿದ.. ಮನೋ ಸಾಹೇಬನು ಯದ್ದು ಕುರುಬರ ಲೆಕ್ಕಾಚಾರದಲ್ಲಿ ಮೂಡಲ ಕಡೇಕ ನೋಡಿದ.. ಬೆಳ್ಳಿ ಚುಕ್ಕಿ