ಪುಟ:ಅರಮನೆ.pdf/೩೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೩೨ ಅರಮನೆ ನ್ಯಾಯಾದೀಶನೇ ಕೊಲೆಗಾರನಾಗಬೇಕೆ? ಯಂದು ಸಂದೇಹಿಸಿದ, 'ನೋಡಿ ಹ್ಯಾಂ.. ವಿಚಾರಣೆ ಸಂದಶ್ಚದಲ್ಲಿ ಯಾವ ಕಾರಣಕ್ಕೂ ಬಗ್ಗಲ್ಲನ್ನು ನೆನಪಿಸಿಕೊಳ್ಳಬೇಡಿ... ಯಿದು ಸರಕಾರದ ಯಿಚ್ಛೆಯೂ ಹವುದು' ಯಂದು ಪಿಸುಗುಟ್ಟಿದ್ದು ಯಷ್ಟು ಅರದೂರ? ಆದರೂ ಹ್ಯಾಂನ ಸೋಲುಪ ಅಗಲ ಯನ್ನಬವುದಾದ ಮುಖವು ತಿಳಿಗೊಂಡಿರಲಿಲ್ಲ.. ಪ್ರಾಯಶಃ ಹ್ಯಾಂ ಮಹಾಶಯ ತಾನು ಕಟಕಟೆಯೊಳಗೂ... ನಾಗಿರೆಡ್ಡಿಯು ನ್ಯಾಯಾಧೀಶನ ಪೀಠದ ಮ್ಯಾಲೂ.. ಓಹ್ ಮಮ್ ಗಾಡ್! ಬೆವರೊರೆಸಿಕೊಂಡ ಕರವಸ್ತರದಿಂದ.. ತಾನು ಅನಂತಪುರಕ್ಕೆ ಸಮೀಪಿಸಿರಬಹುದೇ? ಗುತ್ತಿಯ ಚರಸಾಲಕ್ಕೆ ತಾನು ಯೀ ಹಿಂದೆಯೇ ಭೆಟ್ಟಿ ಕೊಡಬೇಕಿತ್ತು. ಯೀಗ ಯಾರನ್ನೂ ನೋಡುವುದು ಸರಿಯಲ್ಲ. ತನ್ನೊಳಗೀಗ ವಿಚಾರಣೆ ನಡೆಯುತ್ತಿದೆ. ಪ್ರೇಕ್ಷಕರ ಮೊಗಸಾಲೆಯಲ್ಲಿ ಯಾರಾರು ಕೂತಿರಬಹುದು...! ಛೇ.. ಮತ್ತೆ ತಾನು!.. ಅಗೋ ಅಲ್ಲಿ ಕವುಕುಂಟ್ಲ.. ಅಲ್ಲಿಗೆ ಹೋಗುವುದು ಬೇಡ.. ಯಿಲ್ಲಿ ಯಾವುದೋ ಹಳ್ಳ ಹರಿಯುತ್ತಿರುವಂತಿದೆ.. ಪಕ್ಕದಲ್ಲಿ ಮೊಸುಂಬಿ ತೋಟ.. ತಾನಲ್ಲಿ ತುಸು ಹೊತ್ತು ಯಿಸ್ರಮಿಸಿಕೊಳ್ಳುವುದೇ ಲೇಸೆಂಬ ನಿಲ್ಲಯಕ್ಕೆ ಬಂದ.. ಹೇಳಿದೊಡನೆ ಪರಿಚಾರಕರು ಬಿಡಾರ ಯವಸ್ಥೆ ಮಾಡಿದರು. ಬಿಡಾರದೊಳಗೆ ಯಂದಿನಂತೆ ಯೇಸುಪ್ರಭುವಿನ ಚಿತ್ರಪಟ ಯಿರಿಸಿದರು. ಮನೋ ಸಮವಸ್ತರ ಕಳಚಿದ.. ಮುಂಬತ್ತಿಯನ್ನು ಪ್ರಭುವಿನೆದುರು ಬೆಳಗಿಸಿ ಮಂಡಮೂರಿ ಕಣ್ಮುಚ್ಚಿ ಕುಳಿತನೆಂಬಲ್ಲಿಗೆ.... ಅತ್ತ ಬಳ್ಳಾರಿಯ ಕೇಂದ್ರ ಕಾರಾಗ್ರಹದೊಳಗೆ ಯಿಶೇಷ ನ್ಯಾಯಾಲಯದ ಏರುಪಾಡಾಗಿತ್ತಷ್ಟೆ. ಕಟಕಟೆಯೊಳಗೆ ನಾಗಿರೆಡ್ಡಿಯ ಧೀರೋದಾತ್ತ ನಿಲುವು.. ಜಾವ ಜಾವಕ್ಕೊಂದೊಂದು ಸಲ ಬೆವರೊರೆಸಿಕೊಳ್ಳುತ್ತಿರುವ ನ್ಯಾಯಾಧೀಶ ಗೋಲ್ಡಿಂಗ್ ಹ್ಯಾಂ ಸಾಹೇಬ.. ತನ್ನೊಳಗೆ ಯಾರೋ ಮಾಡುತ್ತಿರುವ ಬಯಬಲ್ಲಿನ ಪಠಣ, ಕ್ಷಮೆಯನ್ನು ಎತ್ತಿ ಹೇಳುತ್ತಿರುವ ಪ್ರತಿಯೊಂದು ಪುಟಗಳು. ಪ್ರೇಕ್ಷಕರ ಮೊಗಸಾಲೆಯಲ್ಲಿ ಮುನುಸೋಬಯ್ಯ ಮತ್ತಿತರರು.. ಅವರೆಲ್ಲರ ಮುಖಗಳ ಮ್ಯಾಲ ಆತಂಕದ ಕರಿ ನೆರಳು.. ಅಪರಾಧಿಯ ಪರ ವಾದಿಸಲು ಕರೋಲಿನಿಂದ ಬಂದಿರುವ ಕೋನೇಟಿ ಶ್ರೀನಿವಾಸಶಾಸ್ತ್ರಿ .. ಸರಕಾರದ ಪರ ವಕೀಲ ಯಾರಿದ್ದರಪಾ ಅಂದರ ನಿಡುಸಾಲೆ ನೀಲಕಂಠರಾಯ ಯಂಬಾತನು. ಯಾಂತ್ರಿಕ ರೀತಿಯಲ್ಲಿ ವಾದ, ಪ್ರತಿವಾದ..