ಪುಟ:ಅರಮನೆ.pdf/೩೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೪೫ ಬಿರುದಾಂಕಿತ ಚಕ್ರವರಿಗಳ ಡಗಿದಂಗವರ. ಆ ಚಕ್ರವರಿಗಳು ಯಾವುದಕ ಮನಸೋಲುತವರಂದರss ಅರೆ ಅವುದಲ್ಲ...! ಅಲ್ಲೊಂದು ಪಟ್ಟಣ ಯಿತ್ತಲ್ಲ.. ಅದೇ ಕುದುರೆಡವು ಯಂಬುದಾಗಿತ್ತಲ್ಲ.. ಅದರೊಳಾಗೊಂದು ಅರಮನೆ ಯಂಥದೋ ವಂದು ಅರಮನೆ ಯಿತ್ತಲ್ಲ.. ಅರಮನೆ ಯಂದ ಮಾಲ ರಾಜಮಾರಾಜರುಗಳನು ಹೊಗಳಿ ಕಸುವು ತುಂಬಲಕಂತ ಕಸುಬಸ್ತ ಮಂದಿ ಯಿರುತಾರಪ್ಪಾ. ಅವರನ್ನು ಭಟ್ರಾಜು ಭಟ್ರಾಜು ಅಂತ ಕರಿತಾಯಿದ್ದರು. ಅವರ ನಾಲಗೆ ಮ್ಯಾಲ ಸರಸೋತಮ್ಮ ಗುಡುಲು ಹಾಕಿಕೊಂಡು ವಾಸ ಮಾಡುತಲಿರುವಳು. ಯೇ ಕಾರಣಕ್ಕವರು ಮೂರನ್ನು ಹೊಗಳಿ ಆರು ಮಾಡಲು ಬಲ್ಲರು, ಆರನ್ನು ತೆಗಳಿ ಮೂರರಂಕೆಗೆ ಯಿಳಿಸಲೂ ಬಲ್ಲರು.. ಕಪ್ಪನ್ನು ಬೆಳ್ಳಗೆ ಮಾಡಬಲ್ಲರು.. ಷಂಡರೊಳಗ ಪವುರುಷವನ್ನು ತುಂಬಬಲ್ಲರು.. ಕಲೆಟ್ಟರು ಥಾಮಸು ಮನೋ ಸಾಹೇಬನು ಅಂಥವರ ಪಾಲಿಗೆ ಸಾಡೇಸಾಥ ಸಣಿಯಾಗಿಬಿಟ್ಟಿರುವನು. ವಂದೊಂದು ಸಿಕ್ಕಾಸನವನ್ನು ಬೋರಲಿಟ್ಟ ಲಾಗಾಯ್ತು ಭಟ್ರಾಜು ವಮುಸಸ್ಥರು ಮೂಲೆಗುಂಪಾಗಿಬಿಟ್ಟಿರುವರು. ಆ ಸರಸೋತಿ ಪುತ್ರರ ಬಾಯಿಗೆ ದಗದ ಯಿಲ್ಲದಂಗಾತು.. ವಡಲಿಗೆ ಕಾಳೂ, ಕೂಳೂ, ನೀರೂ, ನಿಡಿ ಯಿಲ್ಲದಂಗಾತು.. ಅವರು ನಮ್ಮ ನಿಮ್ಮಂಗ ಮಯ ಬಗ್ಗಿಸಿ ದುಡಿಯೋರಲ್ಲ... ಯೀ ಕಡೆ ಬಿದ್ದ ಕಸ ಕಡ್ಡಿನ ಆ ಕಡೇಕ ಯತ್ತಿ ಹಾಕೋರಲ್ಲ... ನಿಮ್ಮನ್ನು ಹೊಗಳುತೀವಪ್ಪಾ.. ಹೊಗಳಿ ನಿಮ್ಮೊಳಗ ಪವುರುಷ ತುಂಬುತೀವಪ್ಪಾ.. ನಮ್ಮ ಬಾಯಿಂದ ಹೊಗಳಿಸಿಕೊಂಡಲ್ಲಿ ನಿಮ್ಮ ಮನೆಯೊಳಗೆ ಭಂಗಾರದ ಹೊಗೆ ಆಡುತಯ್ತಪ್ಪಾ.. ಹೊಗಳಿಸಿ ಪುಣ್ಯ ಕಟ್ಟಿಕೊಳ್ಳಿರಪ್ಪಾ.. ನಮ್ಮ ಬದುಕಿಗೆ ವಂದು ದಾರಿ ಮಾಡಿಕೊಡಿರಪ್ಪಾ.. ಯಂದು ದವುಳೇರ ಮಂದಿ ಯದುರು ಅಂಗಲಾಚುತ್ತಿದ್ದುದುಂಟು. ಹೊಗಳಿಸಿಕೊಂಡು ನಾವು ರಾಜ್ಯಭಾರ ಮಾಡೋದಾಟರಾಗss ಅಯ್ಕೆ.. ಯಂದವರಿವರಿಂದ ಅನ್ನಿಸಿಕೊಂಡದ್ದುಂಟು. ಹಿಂಗಾಗಿ ಅವರಿವರು ಮಾಡಲಕ ಕೆಲಸ ಬೊಗುಸೆಯಿಲ್ಲದೆ ಯಿವಗೆಂಗ.. ನಾಳಿಗೆ ಹೆಂಗ ಯಂದು ಯಸನ ಮಾಡುತ ವಂದೊಂದು ದಿವಸವನ್ನು ವಂದೊಂದು ಮನುವಂತರೋಪಾದಿಯಲ್ಲಿ ನೂಕುತ ಕುಟುಕು ಜೀವ ಹಿಡಕೊಂಡಿಹರು. ಯೀ ಭಟ್ರಾಜ ಕುಲದ ತಿಲಕದೋಪಾದಿಯಲ್ಲಿ.. ಹನುಮಕೊಂಡ ರಾಮರಾಜು ಯಂಬ ಹಿರೀಕನಿದ್ದನು. ಆತನು ಸ್ವಾಸ್ಥಿಯ ಮೂಲ ಕಾಕತೀಯ ಸಾಮ್ರಾಜ್ಯದೊಳಗಿತ್ತು. ಮೋರಂಗಲ್ಲಿನ ಮ್ಯಾಲ ದಂಡೆತ್ತಿ