ಪುಟ:ಅರಮನೆ.pdf/೩೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೪೬ ಅರಮನೆ ಹೋಗಿ ಬೀರಪರತಾಪ ರುದ್ರಗಣಪತಿಯನ್ನು ಸೋಲಿಸಿದ ಸೀಕ್ರುಷ್ಣದೇವರಾಯನ ಚತುರಂಗಬಲದೊಡನೆ ಅವನ ವಮುಸಸ್ಥರು ಹೊಂಟು ಬಂದು ಯಿಜಯನಗರದೊಳಗ ನೆಲಗೊಂಡಿದ್ದರು. ತರುವಾಯ ರಕ್ಕಸತಂಗಡಗಿ ಯುದ್ಧದಲ್ಲಿ ಭಾಮನಿ ತುರುಕರ ಕಯ್ಲಿ ಅರಮೀಡೂ ರಾಮರಾಯನು ಹತನಾಗಲು ಸಿಂಧವಾಡಿ, ನೊಳಂಬವಾಡಿ, ಗಂಗವಾಡಿ, ತುಂಗವಾಡಿ ಮೊದಲಾದ ಛಪ್ಪನ್ನಾರು ದೇಸಗಳ ದೊರೆಗಳನ್ನು ಹೊಗಳಿದ್ದರು. ವುಚ್ಚಂಗಿ ದುರದ ಮೇಲ್ನೋಟೆ ಬುರುಜಿನಿಂದ ಬಿದ್ದು ಹೊನ್ನಾಗತಿ ಪ್ರಾಣಾರಣೆ ಮಾಡಿಕೊಂಡ ತರುವಾಯು ತಂದೆ ಸಿವರಾಮರಾಜು ವಡನೆ ರಾಮರಾಜನು ಗುಡೇಕೋಟೆ ಮುಖಾಂತರ ಕುದುರೆಡವಿಗೆ ಬಂದು ನೆಲೆ ನಿಂತಿದ್ದನು. ಭಟ್ರಾಜು ಕುಲ ವಂದು ತೂಕವಿದ್ದರ ಯೀ ರಾಮರಾಜೂನೇ ವಂದು ತೂಕವು. ವಾಗಾಡಂಬರದ ಭಂಡಾರವನ್ನು ಬಾಯೊಳಗಿಟ್ಟುಕೊಂಡಿರುವ ಯಿವಯ್ಯನು ತೊಂಬಲದುಂಡೆಯನ್ನು ದವಡೆಯಿಂದ ದವಡೆಗೆ ವುರುಳಾಡಿಸುತ್ತಿದ್ದನೆಂದರ ಅದರ ಕಾಖವಾಸಣೆಯು ಘಮ್ಮಂತ ಪಟ್ಟಣದ ತುಂಬೆಲ್ಲ ಹಬ್ಬುತ್ತಿತ್ತು. ಯೇವಯ್ಯ ಹೋಬ್ಬ ಯಂದು ಡೇಗಿದನೆಂದರೆ ಪಟ್ಟಣಕ್ಕೆ ಪಟ್ಟಣವು ಹಾ... ಹಾ.. ಯಂದು ತಲೆದೂಗುತಲಿತ್ತು. ಆ ಕಾಲದಲ್ಲಿ ಯೇವಯ್ಯ ಕಿವಿಯೊಳಗ, ಕೊರಳೊಳಗ, ವಂದೊಂದು ಬೆರಳ ಸಂದುಗಳೊಳಗ ೦ಸು ನವನಿ ಆಭರಣಗಳಿರುತ್ತಿದ್ದುದೇನು? ಆ ಕಾಲದಲ್ಲಿ ಯೇವಯ್ಯ ಡೋಲಿಯೊಳಗ ಸಂಚಾರ ಮಾಡುತ್ತಿದ್ದುದೇನು? ಕಲಿಕಾಲದ ಮದ್ಯೆಯಿಂದಾಗಿ ರತುನ ತಿಂಬುವ ಪಕ್ಷಿ ಪತ್ತೋಳಿಗೆ ಸೊಪ್ತಿಯಾಯಿತೆಂಬಂತೆ... - ರಾಮರಾಜು ಭಟ್ರಾಜು ತಮ್ಮ ಪಟ್ಟಣದೊಳಗ ಅದಾನಾ ಯಂಬ ಸಂಗತಿಯು ದಯವಸ್ಕರಿಗೆ ಹೊಳೆದದ್ದು ಅನಂತರವೇ.. ಪಟ್ಟಣದ ಯಾರೊಬ್ಬರೂ ಭಟ್ರಾಜು ಕುಟುಂಬದೊಂದಿಗೆ ವಡನಾಟ ಯಿಟ್ಟುಕೊಂಡಿರಲಿಲ್ಲ. ಆ ಕುಟುಂಬವೂಅನಾಮದೇಯತೆಯಿಂದ ಬಾಳುವೆ ಮಾಡುತಲಿದ್ದಿತು. ದಯವಸ್ತರು ಖಾಸಗೀ ಗೂಢಾಚಾರರ ಸಾಯದಿಂದ ಫಲಾನ ಯಂಥ ಮೋಣಿಯೊಳಗ, ಫಲಾನಯಂಥ ಮನೆಯೊಳಗೆ ಭಟ್ರಾಜು ಸಮುಸಾರ ಅದಾ ಯಂಬುದನ್ನು ಪತ್ತೆ ಹಚ್ಚಿದರು. ಬಾಜಾಬಜಂತ್ರಿಕರಕೊಂಡು, ಚಾಜಾಗೀಜಗಳನ್ನೆಲ್ಲ ತಳಿಗೆಯೊಳಗಿಟ್ಟುಕೊಂಡು ಪಟ್ಟಣಸೋಮಿ, ದಯವ, ಹಿರೀಕರೆಂಬ ಸೊಯಂ ಆಡಳಿತ ಯವಸ್ಥೆಯ ಕೆಲ ಮುಖ್ಯ ಸದಸ್ಯರು ದಿಬ್‌ದೀಪ್ತಿಯಿಂದ...