ಪುಟ:ಅರಮನೆ.pdf/೩೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೪೭ ಮನೆ ಸಾಹೇಬನನ್ನು ಹೊಗಳಿ ಹೊಲಮನಿ ವು೦ಬಳಿ ಪಡೆಯಬೇಕೆಂಬ ಗುರಿಯೊಂದಿಗೆ ಹನುಮಕೊಂಡ ರಾಮರಾಜುವು ವಂದು ಹಿಡಿ ಅವಲಕ್ಕಿಯನ್ನು ಬಾಯೊಳಗ ನರಿಯುತ ಹೊಗಳಿಕೆಗೆ ಸಂಬಂಧಿಸಿದಂಥ ಸಬುಧಗಳ ವಂದು ಮಹಾ ನಿಘಂಟು ರಚನಾಕಾರದಲ್ಲಿ ನಿರತನಾಗಿದ್ದನು. 'ಅ' ಯಂಬ ಅಕ್ಕರದಿಂದ ಹೊಂಟು 'ಅಯ್' ಯಂಬ ಅಕ್ಕರದ ವರೆಗೆ ಬಂದಿದ್ದನು. ಅಯ್ ಯಂಬುದು ನತದ್ರುಸ್ಟ ಅಕ್ಕರವಾಗಿತ್ತು.. ಅಯ್ ಅಂದರ “ಅಯಿಸ್ವರ' ಯಂದೊಂದರಗಳಿಗೆ ಅಂದುಕೊಂಡನು. ಅದರಾವಯ್ಯಗ ಅದರ ಹಿಂದು ಮುಂದಲಿನ ಸಬುಧಗಳು ಹೊಳೆಯಲಿಲ್ಲ.. ಯಾದೋ ಎಂದು ರಖಮಯ್ಯ ಸಬುದಾವಳಿ ಬೀದಿ ಮೂಲೇಲಿಂದ ತೇಲಾಡುತ ಬಂತು. ಅದು ಯಿಂಥದೇ ಯಂದು ನಿಲ್ದಾರಕ್ಕೆ ಬರಲಾಗಲಿಲ್ಲ..ಅವಕ್ಕೂ ಯಾದೋ ಎಂದು ಅಗ್ಗ ಬಿಗಿದ. ಸ್ವಾಭಿಮಾನಧನನಾದ ತಾನು ಯಾವ ಕಾರಣಕ್ಕೂ ಮನೆ ಮುಂಗಟ್ಟೆಗೆ ಹೋಗಿ ಮಿಣುಕುವ ಸ್ವಭಾವದವನಲ್ಲ. ಆತನ ದರುಮಪತ್ನಿ ಶಾರದಮ್ಮಳನ್ನು ಆ ದಿಬ್ಬಣವು ಸೂಜಿಗಲ್ಲಿನಂತೆ ಸೆಳೆಯಿತು. ಆದರ ತಾನು ಯಾವತ್ತೂ ಭಟ್ರಾಜು ವಮುಸದ ರೀತಿರಿವಾಜುಗಳನ್ನು ವುಲ್ಲಂಘನೆ ಮಾಡಿದಾಕೆಯಾಗಿರಲಿಲ್ಲ.. ತಲಬಾಕಲು ದಾಟಿ ಯಿಣುಕಬೇಕೆಂದರೆ ಗಂಡನ ಪೊದೆ ಹುಬ್ಬುಗಳೊಳಗಿನ ಲಕ್ಷಣರೇಖೆಗಳು ತಡೆಯುತ್ತಿರುವವು.. ಅದೆಲ್ಲೋ ಮುಂದಕ ಹೋತದೆಂದು ಭಾವಿಸುವಷ್ಟರೊಳಗ... ದಿಬ್ಬಣವು ತಮ್ಮ ಮನೆ ಮುಂಗಟ್ಟಿನಲ್ಲಿ ನಿಂತಿದ್ದು ತಡ ಆಗಲಿಲ್ಲ.. ಅಡವುಲ ಪಾಲಯ್ಯನ ನೇತ್ರುತ್ವದಲ್ಲಿ ಚಾಜ ತಳಿಗೆಗಳು ವಳ ಬಂದದ್ದು ತಡ ಆಗಲಿಲ್ಲ. ತನಗೆ ನಮಸ್ಕರಿಸಿದ ಯಾರನ್ನೂ ಮಾತನಾಡಿಸದ ಸ್ವಭಾವದವನಾದ ರಾಮರಾಜು, ಕಣ್ಣಳತೆ ವುಸುರಳತೆಯಲ್ಲಿದ್ದ.. ಅವರೆಲ್ಲರತ್ತ ತೀಕ್ಷನೋಟ ಬೀರಿದನು. ಪತ್ತೆಯಾದ ಯಾಕಲಯ್ಯನು ಮಾಡಿದ ಸಂಗನೆಯಂತೆ ಪಾಲಯ್ಯನು “ಅಯಾs ಸರಸೋತಮ್ಮನ ವರಪುತ್ರನೇ. ಯಿಗೋ ನಿನಗೆ ಪ್ರಣಾಮಗಳು” ಯಂದು ಕಯ್ಯ ಜೋಡಿಸಲು ಪ್ರಸನ್ನವದನನಾದ. ರಾಮರಾಜುಗೂ, ಪಾಲಯ್ಯಗೂ ನಡುವೆ ವುಭಯ ಕುಸಲೋಪರಿ ಯೇರಟ್ಟಿತು.. ಪಟ್ಟಣದ ಯಾವೊಂದು ಯಿದ್ಯಾಮಾನ, ವರಮಾನದ ಬಗ್ಗೆ ವಂಚೂರು ಅರುವಿರದಿದ್ದ ರಾಮರಾಜುವು “ಅದೆಲ್ಲ ಯಿರಲಿ, ನಿಯೋಗ ನಮ್ಮ ಬಳಿಗೆ ಬಂದ ಕಾರಣವೇನು?” ಯಂದು ಕೇಳಲಾಗಿ....