ಪುಟ:ಅರಮನೆ.pdf/೩೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೫೭ ಆತನು “ನೀವು ಯಿಷ್ಟು ದಿವಸ ಹೇಳದೆ ಕೇಳದೆ ಯಲ್ಲಿಗೆ ಹೋಗಿದ್ದಿರಿ? ಸರಕಾರದ ಯಿರುದ್ಧ ಮಸಲತ್ತು ಮಾಡುವುದಕ್ಕೆ ತಾನೆ? ನಿಮ್ಮ ಮಗಳೂ ಯೇ ಮಸಲತ್ತಿನಲ್ಲಿ ಮುಖ್ಯಪಾತ್ರವಹಿಸಿರುವಳೆಂದು ತನಿಖೆಯಿಂದ ತಿಳಿದು ಬಂದಿರುವುದು? ಆಕೆಯನ್ನು ಯೀ ಕೂಡಲೇ ಹಾಜರು ಪಡಿಸಬೇಕು.. ಯಿಚಾರಣೆ ಮಾಡಬೇಕಿರುವುದು...” ಯಂದು ಮುಂತಾಗಿ ವದರತೊಡಗಿದ. ಕೇಳಿ ಕೆಂಡಮಂಡಲಳಾದ ಆ ಯೀರವನಿತೆಯು ಓಹೋ ಹಾಗೋ ಸಮಾಚಾರ'ಯಂದು ಪಯಿಲುವಾನರಿಗೆ “ನೋಡಿರಪ್ಪಾ.. ಯೀತನನ್ನು ಚಿನ್ನಾಸಾನಿಯಿರುವ ಕೋಣೆಗೆ ಕರೆದೊಯ್ದಿರಪ್ಪಾ” ಯಂದು ಹೇಳುತ ಕಣ್ಣು ಮಿಟುಕಿಸಿದಳು. ಆಕೆಯ ಮನದಿಂಗಿತವನ್ನು ಅರ ಮಾಡಿಕೊಂಡ ಆ ಸೂಕ್ಷ್ಮಮತಿಗಳು ಬರಿದೊರೆ” ರಂದು ಗುರವ ಪೂರೈಕವಾಗಿ ಹಿತ್ತಲಿಗಂಟಿಕೊಂಡಂತಿದ್ದ ಎಂದು ಕೋಣೆಗೆ ಕರೆದೊಯ್ದರು. 'ಚಿನ್ನಾಸಾನಿ ತಂಟೆಗೆ ಬರೀಯಾ' ಯಂದು ಅವನ ಸರೀರದ ಕಾಮಗಾರಿಯನ್ನು ನಡೆಸಿದರು. ಛಪ್ಪನ್ನಾರು ಕೀಲುಗಳು ಸಯ್ದಗೊಂಡ ಪರಿಣಾಮವಾಗಿ ಅವನು... ಮಾರನೆಯ ದಿವಸ.. ಮುಂಜಾನೆ ಮಂದಿ ಕೊತ್ತಲಯ್ಯನ ಗರುಡಗಂಭಕ್ಕೆ ಮೂರೇ ಮೂರು ಪರದಕ್ಷಿಣೆ ಹಾಕಿ ತಮ್ಮ ತಮ್ಮ ದಮ್ಮಂದಿನ ಕೆಲಸ ಬೊಗಸೆಗಳಿಗೆ ನಾಂದಿ ಹಾಡುವುದು ಮಾಮೂಲಿ.. ಅದರಂತೆ ಬಂದು ನೋಡುತ್ತಾರೆ. ಯಾದೋ ದೇಹವೊಂದು ಕಂಭಕ್ಕೆ ಕಟ್ಟಲ್ಪಟ್ಟಿರುವುದು.. ಅದು ಯಾರದೆಂದು ನೋಡುತ್ತಾರೆ... ಸವುಭಾಗ್ಯ ಫವುಜಿನ ಮುಖಂಡನದ್ದು.. ತಮಗೆ ವಂದಲ್ಲಾ ಎಂದು ಹಿಂಸೆ ನೀಡಿದ್ದ ಮುರಾರಿಯದ್ದು. ಯಾರೋ ಬಲವಂತರು ಸರಿಯಾಗೇ ಮಾಡಿರುವರು? ಯಲಮೋ ಮುಠಾಳ ಯಂದನಕಂತ ಈ ಥ ಯಂದು ವುಗಿದರು.. ಕಾಲ್ಕರಿ ಸೇವೆ, ಪೊರಕೆ ಸೇವೆ ಮಾಡಿದರು. ತರುವಾಯ ಸಿಪಾಯಿಗಳು ಬಂದು ಅವನನ್ನು ಬಿಡಿಸಿಕೊಂಡೊಯ್ದು ಯಡ್ಡವರನ ಆಗ್ನೆಯಂತೆ ರಾಂಮನ ಮುಂದೆ ಹಾಜರುಪಡಿಸಿದರು.... ಅವನ ಸರೀರದ ಮ್ಯಾಲಿನ ಗಾಯಗಳನ್ನು ವಂದೊಂದಾಗಿ ಯಣಕೆ ಮಾಡಿದ ರಾಯನು... “ಮುರಾರಿರಾವ್.. ನೀನು ಸಾಳೇರ ಮೋಣಿಗೆ ಹೋಗಿ ಕುಡುದ ಅಮಲಿನಲ್ಲಿ ಹೆಣ್ಣುಮಕ್ಕಳ ಮ್ಯಾಲ ದವುರನ್ಯ ನಡೆಸಿದಿಯಂತೆಲ್ಲಾ... ಯಿದಕ್ಕೇನು ಹೇಳುವಿ?” ಯಂದು ಪ್ರಶ್ನೆ ಹಾಕಿದೊಡನೆ ಜನರ ಕಡೇಲಿಂದ “ಅವುದೂss ಅವುದೂss” ಯಂಬ ಕೂಗು ಬಂತೆಂಬಲ್ಲಿಗೆ ಸಿವಸಂಕರ