ಪುಟ:ಅರಮನೆ.pdf/೪೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ

೩೬೯

________________


ಮರಕ್ಕೆ, ಮರದಿಂದ ಮಾಡಿಗೆ, ಮಾಡಿನಿಂದ ಮೋಡಕ್ಕೆ, ಮೋಡದಿಂದ...ಹಿಂಗs
ಹಾರಿಕೋತ ಹಾರಿಕೋತ ಹೋಗಿ ಚುಕ್ಕಿ ಚಕ್ಕಂತ ಮರೆಯಾದಂಗೆ ಮರೆಯಾಗಿ
ಬಿಟ್ಟತಂತೆ ಸಿವನೇ.. ಅದು ಮುಂದೆ ಯಲ್ಲಿಗೆ ಹೋತೆಂಬುದರ ಬಗ್ಗೆ
ವಬ್ಬರೆದೆಯೊಳಗಾದರೂ ವಂದಾರ ಸರಿಯಾದ ಸಮಜಾಷಿಯಿಲ್ಲ ಸಿವನೆ....
ಆದರ ಬ್ಯಾಗೇರ ಸವಾರೆವ್ವ ಕಟ್ಟಿ ಭೂ ಬಿಟ್ಟಿರುವ ಕಥೆಯ ಪ್ರಕಾರ...
ಆ ಜಲಗುದುರೆಯು....
ಮಾಳಿಗೆಯುಳ್ಳ ಮನೆಗಳನ್ನೇರಿ.. ಕೋಟೆ ಗೋಡೆಗಿದ್ದ ಬತೇರಿಯೇರಿ..
ಕಾವಲು ಗೋಪುರಗಳನ್ನೇರಿ.. ಬುಡಗಳಿದ್ದ ಮರಗಳನ್ನೇರಿ.. ಯ್ಯೋಯ್
ಸೂರಯ್ಯಾಯಂದೊರಲಿ ವರಲೀ.. ಸುಸ್ತಾಗಿದ್ದ ಜಗಲೂರವ್ವಗೆ ತಂದೆಯಾದ
ಅಂತಾಡೆಪ್ಪನು "ಮಗಳೇ... ಸೂರಯ್ಯನ ತಾಯಿ ಸಾಂಬವಿ ಬಗೆಸವಳೆಂದ
ಮ್ಯಾಲ ಅವನ ಚಿಂತೇನ ಬುಟ್ಟು ಬುಡವ್ವಾ. ಅವನಿರುವುದು ನೂರಾರು
ವಡಲು ತುಂಬಲಕ. ಯೀಗವಯ್ಯನ ತರುಬಿದಿ ಅಂದರೆ ದಯವಕ್ಕೆ ದ್ರೋಅ
ಬಗದಂಗಾಯ್ತದೆ.. ಅದಕ ನೀನು ನಿನ್ನ ಕರುಳಿಗ ಮೂಗುದಾಣ ಮೊಣಸಲಕ
ಬೇಕು ನೋಡವ್ವಾ” ಯಂದು ಪರಿಪರಿಯಿಂದ ಸಾಂತುವನ ಹೇಳುತಲಿದ್ದನಂತೆ..
ಯೀ ಕಾವಳದಾಗ ನಿನ್ನ ನಡೆಸಿಕೊಂಡ ಹೋಗುವ ಜವಾಬುದಾರಿ ನಂದು
ಕಣವ್ವಾ.. ಗುಂಟುಮೂಟೆ ಕಟ್ಟಿಕ್ಕಾ, ಯಂದು ಅಂಗಲಾಚುತಲಿದ್ದನಂತೆ. ಅದಕ
ಆಕೆಯು “ಯಪ್ಪಾ.. ಯಿಲ್ಲೇ ಬಿದ್ದು ಹ್ವಾದರು ಯಸನ ಮಾಡುವಾಕಿ ನಾನಲ್ಲ..
ಬೇಕಾದರೆ ದಯವ ನನ್ನ ಬಲಿ ತಗಳ್ಳಲಿ. ಆದರೆ ನಾನು ನನ್ನ ಸೂರನನ್ನು
ಬಲಿ ಕಳುವಾಕಿಯಲ್ಲ” ಯಂದು ಜವಾಬು ನೀಡು ತಲಿದ್ದಳಂತೆ. ಅದಕ್ಕಿದ್ದು
ಆ ತಂದೆಯು “ನಿನ್ನಣೇಲಿ ಬರಧಾಂಗಾಗಲೀ ತಾಯೀ.. ನನ್ನಂಥ ನರ ಮನುಸ
ಮಾಡೋದೇನಯ್ತೆ..” ಯಂದು ನಿಟ್ಟುಸಿರು ಬಿಟ್ಟು ಸುಮಕಾಗಿದ್ದನಂತೆ....
ತಂದೆ ಮಗಳು ಪರಸ್ಪರ ಬೆನ್ನು ಮಾಡಿದ್ದ ಹೊತ್ತಿನಲ್ಲಿ.. ವಬ್ಬಾರ
ಬಾಯೊಳಗ ವಂದಾರ ಮಾತು ಹೊಂಡದಿದ್ದ ಹೊತ್ತಿನಲ್ಲಿ... ಪಸು ಪಚ್ಚಿಗಳು
ತಮ ತಮ್ಮ ಬಾಯೊಳಗಿನ ಮೇವನ ನುರುಪಡಿ ಮಾಡದಿದ್ದ ಹೊತ್ತಿನಲ್ಲಿ...
ಕಜ್ಜಿ ತಡಸಾಲಯ್ಯನು ಅವರೀರುವರನ್ನು ಅದೇ ಯಿನ್ನು ವುಂಬಲಕ ಕರೆದು
ಹೋಗಿದ್ದ ಹೊತ್ತಿನಲ್ಲಿ... ಅಲ್ಲೇ ಸನೀಕ ಯಿದ್ದ ಆಳೆತ್ತರದ ಹುತ್ತದಲ್ಲಿ ಕಾಳಿಂಗ
ಸರುಪವು ಬುಸು ಬುಸು ಅಂತ ವುಸುರಾಡುತಲಿದ್ದ ಹೊತ್ತಿನಲ್ಲಿ, ವಗ್ಗಪ್ಪೋರ
ಸೊಸೆ ಅಯ್ಯಾಳವ್ವನ ಬಸುರೊಳಗ ಯೆಂಟು ತಿಂಗಳ ಕೂಸು ಮಗ್ಗುಲು