ಪುಟ:ಅರಮನೆ.pdf/೪೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ

೩೭೧

________________


ಜಲಗುದುರೆಂದು ಚಿಟಿಕೆ ಹೊಡೆವಷ್ಟರೊಳಗೆ ಹಾರುತಾರುತಾ ಹೋಗಿ
ಯೇಳೆಂಟು ಮಾರುದ್ದಗಲದ ಮಟ್ಟಸ ಗವಿಯೊಳಗ ಆಕೇನ ಯಿಳುವಿತಂತೆ....
ದೀವಟಿಗಳ ಹಿಡಿ ಬೆಳಕಲ್ಲಿ ತಾನು ಕಂಡದ್ದೇನೆಂದರೆ....
ಸೆರೆಸಿಕ್ಕ ಜಾಟಗೆರೆ ತಿಕ್ಕಲಯ್ಯನ ನಾಯಕನ ಕೊರಳಿಗೆ ವುರುಳು
ಹಾಕಿಕೊಂದಿದ್ದ ಮಿಣಿಗಳಿಂದಲೂ, ಜರೂರು ರಾಜ ಮುಕುಂದ ನಾಯಕನ
ಕಯ್ಯಕಾಲುಗಳಿಗೆ ತೊಡಿಸಿದ್ದ ಸರಪಳಿಗಳಿಂದಲೂ ಸೂರಯ್ಯ
ಬಂಧಿಸಲ್ಪಟ್ಟಿದ್ದನಂತೆ.. ಕರುಳು ಕಿತ್ತು ಬಂದು......
ಸೂರಯ್ಯಾ.. ಹೇಂಡಿ ಹಾಂಗ ಬಂಧಿಯಾಗಿರುವಿಯಲ್ಲಾ... ನೀನು
ನಿನ್ನಪ್ಪಗ ಹುಟ್ಟಿದ ಮಗನೇ ಆಗಿದ್ದಲ್ಲಿ.. ಜಗಲೂರಜ್ಞನ ವರಪ್ರಸಾದದಿಂದ ಹುಟ್ಟಿದ
ಮಗನೇ ಆಗಿದ್ದಲ್ಲಿ... ನನ್ನ ಕಝುತ್ತು ವುಂಡು ಬೆಳೆದವನೇ ಆಗಿದ್ದಲ್ಲಿ.. ಬಂಧನಾನ
ಕಿತ್ತೊಗೆದು ನನ್ನ ಹಿಂದ ಬರುತೀಯಾಯ್... ಮಂದಾಕೆ ಸವಾಲು ಹಾಕುತ್ತಲೇ....
ಸೂರಯ್ಯನು ಅಷ್ಟದಿಕ್ಷಾಲಕರು, ನಡುಗುವಂತೆ ಡುರುಕಿ ಹಾಕಿದನಂತೆ..
ಭಟ್ಕಾಜುರಾಮ ರಾಜು ಹಾಡಿ ಹೊಗಳಿದ್ದ ದೂರುವಾಪರ ನೆನಸಿಕೊಂಡನಂತೆ.
ವುಸುರು ಬಿಗಿ ಹಿಡಿದು ಜಗ್ಗಾಡಿ ಮಿಣಿ, ಸರಪಳಿಗಳನ ತುಂಡು ತುಂಡು
ಮಾಡಿದನಂತೆ.. “ಭಪ್ಪರೆ ಮಗನೇ.. ಭಳಾರೆ ಮಗನೇ” ಯಂದುದ್ಧಾರ ತೆಗೆದ
ಆ ವೀರವನಿತಯು....
ತದನಂತರ ಆ ಜಲುಗುದುರೆಯು ಸರಂತ ಹರಿದಲ್ಲಿ ಮಡುವಾಯಿತಂತೆ..
ಯನ್ನು ತಾವಿನ್ಯಾಕೆ ಸ್ವಾನರೂಪದಲ್ಲಿದ್ದು ಮುಂದೊರೆಯಬೇಕೆಂದು
ನಿರರಿಸಿದಂತವರಾದ ಸಿವಸರಣೆಯರು ಆ ಕೂಡಲೇ ನಿಜರೂಪದಲ್ಲಿ
ಕಾಣಿಸಿಕೊಂಡರಂತೆ. ಆ ಸ್ತ್ರೀಯರೀಶ್ವರ ದಿವ್ಯರೂಪವಂ ಕಂಡು ಜಗಲೂರೆವ್ವ
ಭಕ್ತಿ ಪೂರೈಕವಾಗಿ ಸಣು ಮಾಡಿ “ನೀವ್ಯಾರವ್ವಾ ತಾಯಂದಿರಾ..
ನಾಯಿರೂಪದಲ್ಲಿದ್ದು ತನಗ್ಯಾಕ ಸೇವೆ ಮಾಡುತಲಿದ್ದಿರಿ..?' ಯಂದು ಕೇಳಲಾಗಿ
ಅವರು “ವತ್ವ.” ಯಂದು ತಮ್ಮ ಪರಿಚಯ ಮತ್ತು ವುದ್ದೇಶ ಹೇಳಿಕೊಂಡರಂತೆ..
ತರುವಾಯು “ಜಗಲೂರೆವ್ವ ನೀನು ಯೀ ಸೂರಯ್ಯನನ್ನು ಕರಕೊಂಡು
ತವರೂರಾದ ಮಿಂಚೇರಿಗೆ ಹೋರಟುಹೋಗು.. ನಿನಗೆ ಮಂಗಳವಾಗಲಿ”
ಯಂದು ಆಸೀಲ್ದಾದ ಮಾಡಿ ಆಕಾಸದ ಕಡೆಗೆ ಮಾಯವಾದರಂತೆ.. ಆಗಲೀರಿ
ತಾಯಂದಿರಾ ನಿಮ್ಮ ಯಿಚ್ಚಾದಾಂಗ ಆಗಲಿ “ ಯಂದು ಸೂರಯ್ಯನ ಬೆನ್ನ
ರಾಜಮಾನಳಾದೊಡನ ನಾಗಾಲೋಟದಿಂದ....