ಪುಟ:ಅರಮನೆ.pdf/೪೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೭ ೨ ಅರಮನೆ ಅತ್ತ ಮನೋನು ಗ್ರಂಥ ರಚನೆ ಮಾಡುತ್ತ ಕಡಪಾದ ಬಂಗಲೆಯೊಳಗೆ ಬಹಳ ಹೊತ್ತು ಯಿರಲಿಕ್ಕೆ ಆಗಲಿಲ್ಲ... ಕುಂಪಣಿ ಸರಕಾರ ವಪ್ಪಲಿ, ಬಿಡಲಿ ತಾನು ಮಾತ್ರಸದರಿ ರೂರಲ್ಲಿಂಡಿಯಾದ ಪ್ರಜೆಗಳೊಳಗೆ ಆತುಮಾಭಿಮಾನ ಮೂಡಿಸುವ ಕಾವ್ಯಗಳನ್ನು ಕೈಗೊಳ್ಳಬೇಕು.. ಭೂತಕಾಲದಿಂದ ಯತ್ತಬೇಕು, ವರಮಾನದ ಅರುವು ಮೂಡಿಸಬೇಕು. ಯಿದಕ್ಕೆ ಅವರಿಗೆ ಅವರ ಮಾತುಭಾಷೆಯೊಳಗ ಶಿಕ್ಷಣ ಕೊಡಿಸುವುದೇ ಮದ್ದು? ಅವರ ಹೊಟ್ಟೆ ಬಟ್ಟೆ ನೆರಳು, ಅಬ್ಬಬ್ಬಾ! ಯಷ್ಟೊಂದು ಜವಾಬುದಾರಿಗಳೇರಿವೆ ತನ್ನ ಹೆಗಲ ಮ್ಯಾಲ... ಯಂಥ ವುಸಾಬರಿಗಳ ಹತ್ತು ಹಲವು ಸುಂಟರಗಾಳಿಗಳನ್ನು ಮನದಲ್ಲಿ ಯಿಟ್ಟುಕೊಂಡಿರುವ ತಾನು ಗ್ರಂಥ ರಚನೆಯಲ್ಲಿ ಕಾಲಕ್ಷೇಪ ಮಾಡಲಕಾದೀತಾ? ಕುದುರೆಯೇರಿ ಸಂಬಂಧಿತ ಅಧಿಕಾರಿ, ಸಿಪಾಯಿಗಳನ್ನು ಯಡಬಲಕ ಯಿಟ್ಟುಕೊಂಡು ಕಡಪಾ ಬಿಟ್ಟು ವಾರ ದಿನಮಾನ ಆಗಿರುವುದು. ಆ ದಿವಸಗಳಲ್ಲಾತನು ಸಂದರನ ಮಾಡಿದ್ದು ಹತ್ತು ಹಲವು ಊರುಗಳನ್ನು.. ಅಗ್ರಹಾರಗಳನ್ನು.. ಸಾಲೆಯನ್ಯಾಕೆ ಕಲಿಯಬೇಕೆಂಬುತ್ತಾರೆ ಮಂದಿ.. ಯಿಂಗ್ಲೀಷನ್ಯಾಕೆ ಕಲಿಯಬೇಕೆಂಬುತ್ತಾರೆ ಅಗ್ರಹಾರದ ಜನ.. ಸಾಲೆಗೆ ವಬ್ಬರೂ ಬರುತಾಯಿಲ್ಲ... ಯಿಂಗ್ಲೀಷು ಕಲಿತರ ತಮ್ಮ ಕುಲಕ್ಕ ಮಯ್ಲಿಗೆ ತಗುಲತಯ್ಕೆ.. ಕಲಿತರೆ ತಾವು ಮೇದೋಪನಿಷತ್ತುಗಳನ್ನು... ಬಾಯಿಪಾಠ ಮಾಡಿದರೆ ಅಮರಕೋಸದ ಶ್ಲೋಕಗಳನ್ನು... ಯೇನು ಹೇಳಬೇಕು ಯಿವರಿಗೆ? ಹೆಂಗ ವರಮಾನವನ್ನು ಪರಿಚಯ ಮಾಡಿಕೊಡುವುದು ಯಿವರಿಗೆ..? ಮಮ್ರ ಜಾಗದಲ್ಲಿ ಯಿನ್ನೊಬ್ಬರಿದ್ದಿದ್ದಲ್ಲಿ ತಲೆ ಬೆಪ್ಟೆದ್ದು ಅದ್ವಾನವಾಗದೆ ಯಿರುತ್ತಿರಲಿಲ್ಲ. ಆದರೆ ಮನೋ ಸಾಹೇಬ ಸಂಯಮದ ಸಾಕಾರ ಮೂರಿಯು.. ಯಾವ ಸಮಸ್ಯೆಗೂ ಬೇಸರ ಮಾಡಿಕೊಳ್ಳಲಾರನು.. ಹಿಂಗಲ್ಲರಯ್ಯಾ.. ಹಂಗೆ ಯಂದು ತಿಳಿವಳಿಕೆ ನೀಡುವನು.. ಕಾಲ ಬದಲಾದಂಗ ಸಮಾಜಮಬದಲಾಗಬೇಕು ಅನ್ನುವನು, ದುಡಿದು೦ಬುವವರಿಗೆ ಅವರ ಮಾತುಭಾಷಯನೂ, ಅಗ್ರಹಾರದವರಿಗೆ ಯಿಂಗ್ಲೀಷು ಭಾಷೆ ಕಲಿಯಿರಯ್ಯಾಯಂದು ಹೇಳುವನು. ಸಮುಸ್ಕೃತದೊಳಗುಂಟ ಕನರಾ ಯಿಂಗ್ಲೀಷು.. ಯಿಂಗ್ಲೀಷು ಭಾಷೆಯೊಳಗುಂಟು ಕನರಯ್ಯಾ ಸಮುಸ್ಕೃತವು... ಯಿಂಗ್ಲೀಷು ಬಲ್ಲವರಾದ ನಾವು ಸಮುಸ್ಕೃತ ಬಲ್ಲವರಾದ ನೀವು ಅಣ್ಣತಮ್ಮಂದಿರಯ್ಯಾ.. ಯಿಂಗ್ಲೀಷು