ಪುಟ:ಅರಮನೆ.pdf/೪೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೭೩ ಕಲತುಕೊಂಡು ಸಮುದ್ರಯಾನ ಮಾಡಿ ಯಿಲ್ಲಿಗೆ ನಾವೇ ಬಂದಿರುವಾಗ ನೀವ್ಯಾಕ ಯಿದನು ಕಲಿತು ಸಮಂದರ ಯಾನ ಮಾಡಬಾರದು ಕನರಯ್ಯಾ.. ಯಂದವಯ್ಯ ತಾನು ಹೋದಲ್ಲಿ ಬಂದಲ್ಲಿ ಮನವರಿಕೆ ಮಾಡಲಾರಂಭಿಸಿದಂದಿನಿಂದ..... ಸದರಿ ಪ್ರಾಂತದ ಅಗ್ರಹಾರಗಳನ್ನು ಕುಂಪಣಿ ಸರಕಾರವು ಯಿಂಗ್ಲೀಷು ಕಲಿಸಲಕ ದತ್ತಕ ತಗೊಂತು. ದೇವುಳಗಳ ಸುತ್ತಮುತ್ತ ಅಸುವತ್ಥ ಮರಗಳ ಮಯ್ಯ ಮ್ಯಾಲೆಲ್ಲ ಹ್ಯಾಟು ಬೂಟು ಧರಿಸಿರುವವರ ತಯ್ದವರ ಪಟಗಳನ್ನು ತೂಗುಬಿಡಲಾಯಿತು. ಯಿಂಗ್ಲೀಷ್ ಭಾಷೆ ಕಲಿಯಿರಿ.. ಪಗಾರ ಯಣಕೆ ಮಾಡಿಕೊಳ್ಳಿರಿ.. ಯಿಂಗ್ಲೀಷ್ ಕಲಿಯಿರಿ ಹಡಗನ್ನು ಹತ್ತಿರಿ. ಯಿಂಗ್ಲೀಷು ಯಂಬ ಕನ್ನಡಕ ಧರಿಸಿರಿ.. ಯಿಶಾಲ ಪ್ರಪಂಚ ನೋಡಿರಿ ಯಂಬ ಪ್ರಚಾರ ವಾಕ್ಯಗಳನ್ನು ವಯ್ದಿಕರ, ಪುರೋಹಿತರ, ಜೋಯಿಸರ, ಯೇದ ಪಾರಂಗತರ ನಿವಾಸಗಳ ಗೋಡೆ ಗೋಡೆ ಮ್ಯಾಲ.. ತುಳುಸಿಕಟ್ಟೆಗಳ ಮ್ಯಾಲ ರಾತಿರೋ ರಾತಿರಿ ಬರೆಯಿಸಲಾಯಿತು.. ಹ್ಯಾಟು, ಬೂಟು, ಸೂಟು, ಟಯ್ಯಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಅಂಗಡಿಗಳನ್ನು ಪ್ರತಿಯೊಂದು ಅಗ್ರಹಾರದಲ್ಲಿ ತೆರೆಯಲಾಯಿತು. ಸರಕಾರದ ಯೀ ಕ್ರಮದಿಂದಾಗಿ ಅಗ್ರಹಾರಗಳು ರಾಮ ರಾಮ ಯಂದು ತಲೆ ಮ್ಯಾಲ ಕಮ್ಮ ಯಿಟ್ಟುಕೊಂಡವು. ನಾರಾಯಣss ಯನ್ನು ನಿಟ್ಟುಸುರು ಬಿಡಲಾರಂಭಿಸಿದವು..ಕನ್ನಡ, ತೆಲುಗು, ಅರವಗಳಂಥ ಭಾಷೆಗಳನ್ನು ಕಲಿತರೇನೆ ನರಕ ಪ್ರಾಪ್ತಿಯಾಗುತ್ತದೆ.. ಯಿನ್ನು ಯಿಂಗ್ಲೀಷಿನಂಥ ಯಿಲಾಯಿತಿ ಭಾಷೆಯನ್ನು ಕಲಿತರೆ ಯಂಥ ನರಕ ಪ್ರಾಪ್ತವಾಗುವುದೋ ಯಂದು ಯಿಲಯಿಲಾಂತ ವದ್ದಾಡ ಲಾರಂಭಿಸಿದವು... ಗರುಡ, ಗಂಧವತ, ದಧೀಚ, ಧ್ಯಾನಕಾಷ«, ಬಾಲಧಿ, ಬಡಬಾಗಿ, ಪ್ರಭಾಸ, ಮೋಕ್ಷ ಯಂಬಿವೇ ಮೊದಲಾದ ಅಗ್ರಹಾರಗಳು, ಸರಕಾರದ ಯೀ ಕ್ರುತ್ಯ ಅನಯ್ತಿಕ ಯಂದೂ, ಹಿಂದೂ ಧರುಮದ ವಾಲ ನಡೆಸಲಿರುವ ಪ್ರಹಾರ ಯಂದೂ ಬಣ್ಣಿಸಲಾರಂಭಿಸಿದವು.. ಅಣಿ ಮಾಂಡವ್ಯವಾಚಾರರ ನೇತ್ರತ್ವದಲ್ಲಿ ಯುಯುಧನಮಾಚಾರ, ರಾಮಪ್ರದಮಾಚಾರ, ರಾಷ್ಟ್ರವರನಮಾಚಾರ್, ಲೋಮಶಾಚಾರ್, ಭಾರದ್ವಾಜಮಾಚಾದ್ಯರೇ ಮೊದಲಾದ ಯಿಭಿನ್ನ ಅಗ್ರಹಾರಗಳ ಮುಖ್ಯಸ್ಥರು ವಗ್ಗೂಡಿದರು. ಅವರೆಲ್ಲ ಸಾಮಾನ್ಯರಾಗಿರಲಿಲ್ಲ... ತಮ ತಮ್ಮ ನಾಲಗೆಗಳ ಮಾಲ ಮೇದೋಪನಿಷತ್ ಪುರಾಣಗಳ ಭಂಡಾರವನ್ನೇ ಯಿಟ್ಟುಕೊಂಡಿರುವಂಥವರು. ಅವರು ಯೇದೋಪನಿಷತ್ತು, ಸೃತಿಗಳಲ್ಲಿ