ಪುಟ:ಅರಮನೆ.pdf/೪೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೯೯ ತುಂಗಭದ್ರನದೀಲಿ ಜಳಕಮಾಡಿ ಅದೇ ಯಿನ್ನು ಹಲುವಾಗುಲು ಯಂಬ ಗ್ರಾಮದ ಸರಹದ್ದಿನ ಗಿಡಮರದಡಿ ಯಸ್ರಮಿಸಿಕೊಂಡಿದ್ದನು. ಯಲ್ಲಾ ಪ್ರಕೋಚರಟ್ಟಿಯ ಆಕಾಸರಾಮಣ್ಣನ ನೇತ್ರುತ್ವ ಚೋರಪಡೆ ವಂದುಕಡೇಲಿಂದ ಸರಕಾರೀ ಚರಾಸ್ತಿಯನ್ನು ದೋಚಿ ಕೀ.ಶೇ. ಸೋನಾ ಫವುಜಿಗೆ ಆರಿಕ ಸಹಾಯ ಮಾಡುತ್ತಿದ್ದುದರಿಂದಲೂ, ಝಳಕಿನ ಕಡೆಯವರು ವಬ್ಬರ ಹಿಂದೊಬ್ಬರಂತೆ ಕಗೊಲೆಯಾಗುತಲಿದ್ದುದರಿಂದಲೂ, ಗವುಡನು ಯಿಗಾ ಯಿಲ್ಲಿ, ಅಗಾ ಅಲ್ಲಿ ಯಂಬಂತೆ ಕಣ್ಣಾಮುಚ್ಚಾಲೆ ಆಡುತಲಿದ್ದುದರಿಂದಲೂ, ಯಿನ್ನು ಕೆಲವೇ ದಿನಗಳಲ್ಲಿ ಸದರಿ ಪ್ರಾಂತದ ಸೇವಾವಧಿ ಮುಗುತಾಯವಾಗುತಲಿರುವುದರಿಂದಲೂ ಚಿಂತಾಕ್ರಾಂತನಾಗಿದ್ದನು.. ಅದಾದ ಸೋಲುಪ ಹೊತ್ತಿಗೆ ಹಂಪರಸಪ್ಪಯ್ಯನವರ ಸಾವು ತನ್ನ ಕಿವಿಯಮಾಲ ಅಪ್ಪಳಿಸಿಬಿಡುವುದೇ? ಅದು ಗವುಡನ ಕಡೆಯವರು ಮಾಡಿರಬವುದಾದ ಕೊಲೆಯೋ? ಆತುವ ಹಂಯೋ? ಹುಳ ಮುಟ್ಟಿರುವುದರಿಂದ ಸಂಭವಿಸಿರುವುದೋ? ಅಥವಾ ಸಹಜ ಮರಣವೋ? ಅಥವಾ ಅವರ ಹರೆಯದ ಪತ್ನಿ ಭುವನೇಶ್ವರಿಯ ಕುತ್ಯಮೋ?... ಯದೊಂದೂ ತಿಳಿಯದಾಗಿ ಅವಯ್ಯನು ಮೋ ಮಯ್ ಗಾಡ್ ಯಂದುದ್ಧಾರ ತೆಗೆದೊಡನೆ ಸೀನೋಜಿಯು ಜಾತಿ ಕುದುರೆಯ ಮ್ಯಾಲ ಜೇನು ಹಾಕಿದನೆಂಬಲ್ಲಿಗೆ ಸಿವಶಂಕರ ಮಾದೇವಾSS.. ಮುರಾರಿಂರು ಭಯದಿಂದಾಗಿ ತಾನು ಯಾವ ಕಾರಣಕ್ಕೂ ನಿಶಾಚರನಾಗಬಾರದೆಂದು ರಾಯ ನಿರರಿಸಿದ್ದ. ಕೂಡ್ಲಿಗಿ ಪಟ್ಟಣದೊಳಗ ಬುಗುಡಿ ನೀಲಕಂಠಪ್ಪನ ಸಂದೇಹಗಳನ್ನು ಪರಿಹಾರ ಮಾಡುವಲ್ಲಿ ತಿಲ್ಲಾನ ತಾಯಕ್ಕ ಸಂಪೂರ್ಣ ಸೋಲನ್ನು ವಪ್ಪಿಕೊಂಡಿದ್ದಳು. ತಾನು ಯೇಣುಗೋಪಾಲ ಸ್ವಾಮಿ ಕರೆಯ ಮೇರೆಗೆ ಗುಣಸಾಗರಕ್ಕೆ ಹೊಂಟದ್ದಾಗಿಯೂ, ಮಾರ ಮಧ್ಯದಲ್ಲಿ ಗಾಳಿ ಚೇಷ್ಟೆಯಿಂದಾಗಿ ಮಾನ್ಯರ ಮಸಲವಾಡದ ಕಡೆ ಹೋದುದಾಗಿಯೂ, ತಲುಪಿದ ನಂತರವೇ ತನಗದರ ಅರಿವಾದುದಾಗಿಯೂ ಪರಿಪರಿಯಿಂದ ಹೇಳಿಕೊಂಡಿದ್ದಳು. ಆದರದು ಫಲಕಾರಿಯಾಗಲಿಲ್ಲ. ಪ್ರಶ್ನಿಸುವಲ್ಲಿ, ಸಂದೇಹಿಸುವಲ್ಲಿ ಚಿನ್ನಸಾನಿ ಎಂದು ಹೆಜ್ಜೆ ಮುಂದಕ ಹೋಗಿದ್ದಳು. ಮಾನ್ಯರ ಮಸಲವಾಡಕ್ಕೆ ಯಿದ್ದಕ್ಕಿದ್ದಂತೆ ಹೋದ ಕಾರಣವೇನು? ಅಲ್ಲಿ ವಾರಗಟ್ಟಲೆ ವುಳಿದುಕೊಳ್ಳಲಕ ಯಾಕ ಯಿಷ್ಪಪಟ್ಟಿ? ರಾತ್ರಿಹೊತ್ತು ಸೂನ್ಯದೊಂದಿಗೆ ಯಾರೊಂದಿಗೆ ಮಾತನಾಡುತ್ತಿದ್ದಿ.. ಸೂನ್ಯದೊಳಗಿದ್ದವರೊಂದಿಗೆ ನಿನ್ನ ಸಂಬಂಧ