ಪುಟ:ಅರಮನೆ.pdf/೪೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೪೦೩ ಆತುಮವನ್ನು, ಪುರುಷತ್ವವನ್ನು, ಪುತ್ತಲ ರಾಜವಮುಸದ ಬೆನ್ನೆಲುಬನ್ನು. ಚರಿತ್ರೆಯೊಳಗ ಯಾವುದೇ ಸಿಮ್ಮಾಸನವು ಸುಮಸುಮಕ ದಕ್ಕಿರುವುದುಂಟಾ? ಅದರ ವಶವರಿಗಾಗಿ ಘನಘೋರ ಕಾಳಗ ನಡೆಯೋದು ಬ್ಯಾಡವಾ? ನೆತ್ತರ ಹೊಳೆ ಹರಿಯೋದು ಬ್ಯಾಡವಾ? ಅಂಥ ಥಾಮಸು ಮನೋನಂಥಾತನೇ ಅದಕ ಸಣುಮಾಡಿ ಅಮಾನತಿನಲ್ಲಿಟ್ಟಿರುವನು. ಅಂಥಾದ್ದರಲ್ಲಿ ವಬ್ಬ ಯಕಃಶ್ಚಿತ್ ಪಿಕದಾನಿ ಹಿಡಿಯುತ್ತಿದ್ದೋನು, ಅರಮನೆಯ ಯಂಜಲುಂಡು ಬೆಳೆದೋನು ತಾನು ಕುಂಡಲಕ ಸಿವಾಸನ ಬಗಸಿರುವನಲ್ಲಾ... ಅಯ್ಯೋ ಯಿಧಿಯೇ? ಯೇನಿದೇನಿದು ನಿನ್ನೀ ಆಟವು, ಮಾಯಮರವು..? “ಕೊಡೋದು ಬಿಡೋದು ದೊಡ್ಡ ಮಾತಲ್ಲ ಕನರಪ್ಪಾ ಸೋಲುಪ ಯೋಚನೆ ಮಾಡಿರಿ!” ಯಂದು ರುದ್ದೆಯು ಗಿಣಿಗೆ ಹೇಳಿದಂತೆ ಹೇಳಿದಳು, ಅದಕ ಮೀರಯ್ಯನಾಗಲೀ, ಕಜ್ಜಾಲಯ್ಯನಾಗಲೀ ಮಣಿ ಹಾಕಲಿಲ್ಲ.. ಅದರ ಮ್ಯಾಲ ಯಿರಾಜಮಾನಳಾಗಲಕ ಯಿಚ್ಚಾ ಪಟ್ಟಿರುವುದು ಯೀರೇಳು ಲೋಕಗಳಿಗೊಡತಿಯಾಗಿರುವಂಥ ಲೋಕಮಾತೆಯು... ವಂದೇ ಮಾತಿಗೆ ಕೊಟ್ಟು ಸಾಂಬವಿಯ ವಲುಮೆಗೆ ಪಾತ್ರಳಾಗುವುದು ಬಿಟ್ಟು ಮುಡೇದು ಮಿಜಿಮಿಜಿ ಮಾಡುತ್ತಿರುವುದ.. ಮುಹೂವೆ ತಪ್ಪಿಸಲಕ ಯಿದು ಸಂಚು ನಡೆಸಿದಂಗಯ್ಯ, “ಯೇನವ್ವಾ ವಳೇ ಮಾತಿನಿಂದ ನೀನೇ ಸಂತೋಷದಿಂದ ಕೊಡುವಿಯೋ.. ಯಲ್ಲಾ ನಾವದನು ಬಲವಂತದಿಂದ ಹೊತ್ತೊಯ್ಯಬೇಕೋ!?” ಯಂದು ಕಜ್ಜಾಲಯ್ಯ ನಿಷು«ರವಾಗಿ ಕೇಳಿದೊಡನೆ ಮಂದಿ ಅವುದೂ ಯಂದು ಕೂಗಿತು, ಹಿಂದೇಸಿಂದ ನಿವನ್ನಾಮ ಪಾರೊತಿಯು.. ಅರಮನೆಯೊಳಗಿಂದ ಘನಸ್ತ ಸೊಸೆಯರ ಪಯ್ಕೆ ವಬ್ಬಾಕಿ ಮೋಡೋಡಿ ಬಂದು “ಭೇ ಯತೇ, ಅದರ ಮ್ಯಾಲ ಹತ್ತೊರಿಲ್ಲ, ಯಿಳಿಯೋರಿಲ್ಲ. ಅರಮನೆಯೊಳಗೆ ಅದನಿಟುಕೊಂಡು ಮಾಡೋ ದೇನಯ್ಕೆ, ಅದೇನು ವುಂಬಲಕಿಡ್ತದಾ. ಪ್ರಜೆಗಳಿದ್ದರ ಅರಮನೆ, ಪ್ರಜೆಗಳಿದ್ದರ ಸಿಮಾಸನ ಪ್ರಜೆಗಳೇ ಕೇಳಲಕ ಹತ್ತಾ ರಂದ ಮ್ಯಾಕ ಕೊಟ್ಟು ಕಳುವು.. ಕೊಡೋದಾಗದಿದ್ದರ ತಗೊಂಡು ಹೋಗಿರಪ್ಪಾ ಅನ್ನು... ಅದನ್ನು ಬಿಟ್ಟು ತಕರಾರು ಯತ್ತಿದ್ದೀಯಲ್ಲಾ...” ಯಂದು ಕೆಡ ಬಡ ನುಡಿದು “ಯತ್ತಲಕಾಗಲೀ, ಕೊಡಲಕಾಗಲೀ ನಮ್ಮಾರ ಮಯ್ಯೋಳಗ ಕಸುವಿಲ್ಲ. ಊ ಅರಮನೆ ನಿಮ್ಮು, ನೀವೇ ವಳಗಡೀಕ ಬಂದು ತಗೊಂಡು ಹೋಗಿರ ಪ್ಲಾ.. ಅದು ದೇವರ ಕಾರ್ ವಿಗೆ