ಪುಟ:ಅರಮನೆ.pdf/೪೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೪೧೫ ಹಿರಿಯ ಅಧಿಕಾರಿಗಳನ್ನು, ಸಿಕ್ಕಲ್ಲಿ ಮನ್ನೋ ಸಾಹೇಬನನ್ನು ಖುದ್ದ ಭಟ್ಟಿಯಾಗಿ ಚರಿಸಿ ಅಂಗ್ರೇಜಿ ಭಾಷೆಯ ಹಲ್ಲೆಯನ್ನು ತಡೆಯಬೇಕೆಂದು ನಿಲ್ದಾರ ಮಾಡಿದರು. ಆ ಕೂಡಲೆ ಅನಂತಪುರಕ್ಕೆ ನಿಯೋಗ ಕೊಂಡೊಯ್ದರು. ಮನೋಗೆ ಬದಲಿದ್ದ ಅಕ್ಕಿನೋ ಯಂಬ ಹಿರಿಯ ಅಧಿಕಾರಿಯೊಂದಿಗೆ ಚಕ್ಕೆ ನಡೆಸಿದರು, ಅಕ್ಷಿನೋ ಕೇವಲ ಕೇಳುವುದ ಮಾಡಿದನು. ಅಂಗ್ರೇಜಿ ಕಲಿಯುವುದು, ಬಿಡುವುದು ಅವರವರ ಯಿಷ್ಟಯಂದಷ್ಟೇ ಹೇಳಿದನು. ತರುವಾಯ ನಿಯೋಗವು ತಮ ತಮ್ಮ ದೇಹಗಳನ್ನು ಶಾಸ್ರೋಕ್ತವಾಗಿ ಸುದ್ದಮಾಡಿಕೊಳಲಕೆಂದು ಹರಿವ ಜಲಧಿಯನ್ನು ಹುಡುಕಿಕೊಂಡು ಹೋಯಿತೆಂಬಲ್ಲಿಗೆ... ಅತ್ತ ಹರಪನಹಳ್ಳಿ ಪಟ್ಟಣದೊಳಗೆ ಮಾಜಿ ದಿವಾನ ಹಂಪರಸಪ್ಪಯ್ಯನವರ ಕೊಲೆಯನ್ನು ತಾನೇ ಮಾಡಿದ್ದೆಂದು ಪರಾರಿಯಾಗಿದ್ದಂಥ ಬಲವಂತ ಪತ್ರದ ಮುಖೇನ ವಪ್ಪಿಕೊಂಡಿದ್ದ.. ಕೆಲವೇ ದಿವಸಗಳಲ್ಲಿ ಸ್ಕೂವರನನ್ನು ಕೊಲೆ ಮಾಡಿ ಕೀರಿಶೇಷ ಯಿಮ್ಮಡಿ ಸೋಮಶೇಖರ ನಾಯಕರ ಆತ್ಮಕ್ಕೆ ನೆಮ್ಮದಿ ಮೂಡಿಸುವುದಾಗಿ ಅದೇ ಪತ್ರದಲ್ಲಿ ಯಚ್ಚರಿಕೆ ನೀಡಿದ್ದ. ವಿಧವೆ ಭುವ್ವಮ್ಮ ಕೇಶಮುಂಡನ ಮಾಡಿಸಿಕೊಂಡು ಮುಂದಿನ ಮಾಸದಲ್ಲಿ ಆರಂಭವಾಗಲಿದ್ದ ಗೋದಾವರಿ ಪುಷ್ಕರದಲ್ಲಿ ಶಾಸ್ರೋಕ್ತವಾಗಿ ಭಾಗವಹಿಸಲಕೆಂದು ಪ್ರಯಾಣ ಹೊಂಟು ವಾರದ ಮ್ಯಾಲಾಗಿತ್ತು. ಬ್ರಾಹ್ಮಣ ಯಿಧವೆಯ ಗಂಟು ಮುಟ್ಟುವುದು ಬ್ಯಾಡವೆಂದು ನಿರರಿಸಿ ಆಕೆಯನ್ನು ಅಡ್ಡಗಟ್ಟಲಕೆಂದು ಅಡ್ಡ ದಾರಿವರೆಗೆ ಹೋಗಿ ಬರಿಗಯ್ತಿ ವಾಪಾಸು ಬಂದ ಚೋರ ಸದಸ್ಯರನ್ನು ಆಕಾಶ ರಾಮಣ್ಣ ರುತ್ತೂತ್ವಕವಾಗಿ ಅಭಿನಂದಿಸದೆ ಯಿರಲಿಲ್ಲ. ಸಿಪಾಯಿಗಳ ಕಯ್ಯಗೆ ದೊರಕದಂತೆ ತಲೆತಪ್ಪಿಸಿಕೊಂಡಂತ ಬಲವಂತನಿಗೆ ಕ್ರಾಂತಿಯೇರ ಯಂಬ ಬಿರುದು ನೀಡಿ ಸತ್ಕರಿಸಿ, ಸ್ಕೂವರನ ಕೊಲೆ ಸಲುವಾಗಿ ವುಪಯೋಗಕ್ಕಿರಲಿ ಯಂದು ಹಿಡಿಗಂಟನ್ನು ರಾಮಣ್ಣನು ಆತನ ಕಮ್ಮೊಳಗೆ ಯಿರಸದೆ ಯಿರಲಿಲ್ಲ, ಆದರೆ ಬಲವಂತನು ನಿರುತ್ಸಾಹದಿಂದಲೇ ಆ ಗಂಟನ್ನು ಸ್ವೀಕಾರಮಾಡಿ ಭರಮನ ಗವುಡನನ್ನು ಹುಡುಕಿಕೊಂಡು ಪಯಣ ಹೊರಟನು. ಅತ್ತ ಕುದುರೆಡವು ಪಟ್ಟಣದ ಮರಮ್ಮನ ಬಯಲೊಳಗೋsss ಹುಬ್ಬಿನ ಮಂಟಪದ ನಟ್ಟನಡುವೆ ಸಿಮ್ಮಾಸನಾರೂಢಿಯಾಗಿರುವ ತಾಯಿ ಸಾಂಬವಿ ಹಿಂದಕ್ಕೂ ಜರುಗದೆ ಮುಂದಕ್ಕೂ ಜರುಗದೆ ತನ್ನ ಕಣ್ಣುಗಳನು ದೂರಗಲಕ್ಕೆ ಹಿಗ್ಗಿಸಿರುವಾಗ್ಗೆ.. ಅಗೋ ಅಲ್ಲಿ, ಮೋಡೋಡಿ ಬರುತವನೆ ಕರುಪ್ಪಳಿ ಯಂಬ