ಪುಟ:ಅರಮನೆ.pdf/೪೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨೨

ಅರಮನೆ

ವಂದು ಕಡೇಕ ನಿಂತು ಸಂಗ್ರಹಗೊಳ್ಳದೆ ಯಿರುತಲಿರಲಿಲ್ಲ.. ಆದರೆ ಯೋಗ ಯೇನು ಮಾಡುವುದು ತಾನು? ಯಂದೊಂದರಗಳಿಗೆ ಕಂಗಾಲಾದಳು ಹೊನ್ನವ್ವ ಮಹಾಸ್ವಾಭಿಮಾನಿಯಾದ ಹೊನ್ನವ್ವ.. ಆಗಿದ್ದು ಆ ಪುಣ್ಯಾತಿತ್ತಿಯು ಹಿಂಗ... ಯಸನ ಮಾಡುತ ಕಾಲಕ್ಷೇಪ ಮಾಡಬಾರದೆಂದು ನಿರರಿಸಿದಳು. ತನ್ನ ಸ್ವಾಭಿಮಾನವನ್ನು ಗಂಟು ಕಟ್ಟಿ ವಂದು ಕಡೇಕ ಯಿಟ್ಟಳು. ಆ ಕ್ಷಣ ಆಕೆಯಯು ಬೇಡಿ ಪಡೆಯಲಕೆಂದು, ಅಂಗಲಾಚಿ ಪಡೆಯಲಕೆಂದು ಹೊಂಟಳು.. ಅವ್ವನ ಹಳ್ಳ ತಾಯವ್ವನ ಹಳ್ಳ ಮಡದವ್ವನ ಹಳ್ಳ ಅಕ್ಕತಂಗೇರ ಹಳ್ಳ ಮಾಸ್ತೆವ್ವನ ಹಳ್ಳ ಯವೇ ಮೊದಲಾದ ಸ್ತ್ರೀಧನತ್ವವುಳ್ಳ ಮಾಯ ಮಮಕಾರವುಳ್ಳ ಜಲನಿಧಿಗಳನ್ನು ಮುದ್ದಾಮು ಭೆಟ್ಟಿ ಮಾಡಿದಳು. ಅವರು ಅದಕಿದ್ದು 'ಯೇನು ಹೊನ್ನಮ್ಮ? ತಾಯಿ ಭಾಳ ದಿವಸಕ್ಕೆ ಬಂದಿದ್ದೀ... ವುಂಬಲಕಿಡಲಾ, ಕುಡಿಯಲಕ ಕೊಡಲಾ'ಯಂದು ಪರಾಂಭರಿಸಿದ್ದಕ್ಕೆ ಯೇಯವ್ವ ನಾನು ವುಂಬಲಕ ಬಂದಿಲ್ಲವ್ವಾ ಕುಡಿಯಲಕ ಬಂದಿಲ್ಲವ್ವಾ.. ಎಂದು ದಯವಿಕ ಕಾರೈದ ಮ್ಯಾಲ ಬಂದೀಘ್ರವ್ವಾ” ಯಂದು ಕೇಳಿದ್ದಕ್ಕೆ ಅವರಿದ್ದು ಅಂಥ ದಯವಿಕಕ ಕಾರವಾವುದವ್ವ? ನಮಕಯ್ತಾಗೋದಿದ್ದರ ನಡೆಸಿಕೊಡತೇವಿ' ಯಂದು ಹೇಳಿದ್ದಕ್ಕೆ ಯೇವವ್ವ ಸೆರಗೊಡ್ಡಿ “ನೀವು ನನ್ನಂಗೆ ಹೆಣ್ಣೆಂಗಸರು ಕಣರವ್ವಾ.. ನನ್ ಮಾನ ಹೋದರೂ ವಂದೆ.. ನಿಮ್ಮ ಮಾನ ಹೋದರೂ ವಂದೇಯಾ. ಕುದುರೆಡಮೊಳಗ ಜಗಾನುವಾತೆಯಾದ ಸಾಂಬವಿ ಯರಡು ಮೂರು ತಾಸೊಪ್ಪತ್ತೊಳಗ ಮಿಂದುಡಲಕಂತ ನನ್ನ ಹತ್ತಿರ ಬರಲಿದ್ದಾಳೆ.. ಆಕೆಯ ಮೊಣಕಾಲು ಚಿಪ್ಪು ತೊನ್ನೋವಷ್ಟು ನೀರು ನನ್ನಲ್ಲಿಲ್ಲ. ದಯಮಾಡಿ ನೀವೆಲ್ಲೂಕೂಡಿ ಮಾನ ಕಾಪಾಡಬೇಕಯ್ತಿ ನೋಡಿರವ್ವಾ.. ಆಕೆ ಮಜ್ಜಣ ಮಾಡಿ ಹೋದಮ್ಯಾಲ ನೀವು ನಿಮ್ಮ ನಿಮ್ಮ ಪುಣ್ಯದ ಪಾಲನ ತಗೊಂಡು ಹೋಗುವಿರಂತೆ' ಯಂದು ಅಂಗಲಾಚಿ ಯಿನ್ನಪ ಮಾಡಿಕೊಂಡಳು. ಸಾಂಬವಿ ಜಳಕ ಮಾಡಲಕಂದರ ಯಾರು ತಾನೆ ಬ್ಯಾಡ ಅಂದಾರು? ಯಿಂಥದೊಂದು ಬಂಗಾರದಂಥ ಅವಕಾಶ ದೊರಕುವುದು ದೂರುವ ಜಲುಮದ ಸುಕ್ರುತವೇ ಸರಿ. ಆ ಜಲರೂಪಿ ತಾಯಂದಿರು ಯಂದ್ಯಾಕ ತಾಯಿ ಯೀಗಲೇ ಬಿಟ್ಟುದ ಬಿಟ್ಟು ಹೊಂಟು ಬರುತೀವಾ ನೀನೇ ನಮ್ಮ ಕನ್ನ ಹಿಡಿದು ದಾರಿ ತೋರಿಸುತ ಕರಕೊಂಡು ಹೋಗು” ಯಂದು ವಪ್ಪಿಕೊಂಡರು. ಹಳ್ಳೋದು ಹಚ್ಚಿಕೊಂಡರು... ಹಾಕೋದು ಹಾಕಿಕೊಂಡರು.