ಪುಟ:ಅರಮನೆ.pdf/೪೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೪೨೩ ಬಲು ವಯ್ಯಾರದಿಂದ ತನ್ನ ಹಿಂದುಗಡೇಕ ಹೊರಟು ನಿಂತ ಅವರನ್ನು ಹೊನ್ನವ್ವ ಗವುರವರವಕವಾಗಿ ಕರದೊಯ್ದು ತನ್ನ ಹರವನ್ನು ತುಂಬಿಸಿಕೊಂಡಳು. ಅವ್ವ ಬರಲಕ ವಂದೆರಡು ತಾನು ಬಾಕಿವುಳುದಯ್ಕೆ ಅನುವಾಗ್ಗೆ ಸುರುವಾಯಿತು ನೋಡು ಸಿವನೇ ಯಿವರ ಸಡಗರ ಸಂಭರಮ. ಕಾಲಿಗೆ ಕಯ್ಕೆ ಅಂಟುತಯ್ದೆ ಯಂಬ ಕಾರಣಕ್ಕೆ ಕೆಸರು ಬುರುಡೆಯನ್ನು ತುಝುರಜೆಯ ಮ್ಯಾಲ ಕಳುವಿದ್ದೇನು? ತಮ್ಮ ತಮ್ಮ ತಳದಲ್ಲಿದ್ದ ಮುಳ್ಳುಕಂಟೆ, ಚೂಪನೆಯ ಕಲ್ಲು ಗಿಲ್ಲುಗಳನ್ನು ಆಯ್ದು ವಗದದ್ದೇನು? ಅಲ್ಲೆಲ್ಲಾ ಫಳಫಳ ಮಿರುಗೋ ಬಂಗಾರದ ನುಸಿಂಗಂಥ ಮರಳನ್ನು ಹರವಿದ್ದೇನು? ಹೇಡಿಗಳನ್ನಲ್ಲಿಂದ ವಕ್ಕಲೆಬ್ಬಿಸಿದ್ದೇನು? ಹುಬ್ಬಿನ ಲಯಸಳನ್ನು ಹೋಲುವ ಬಣಬಣ್ಣದ ಮೀನುಗಳನ್ನು ತಮ್ಮೊಳಗೆ ತುಂಬಿ ಕೊಂಡಿದ್ದೇನು? ತಮ್ಮ ತಮ್ಮ ಯಿಕ್ಕಲದಲ್ಲಿದ್ದ ಮುಳ್ಳಿನ ಗಿಡಗಳನ್ನು ಹುಬ್ಬಿನ ಗಿಡಗಳ ಹಿಂದಕ ಗದುಮಿದ್ದೇನು? ಕಾವ್ ಕಾವ್ ಯಂದರಚಬಾರದೆಂದೂ, ಕುಡಿದು ಯಂಜಲು ಮಾಡಬಾರದೆಂದು ಕಾಗೆಗಳಿಗೆ ಆದೇಸ ನೀಡಿದ್ದೇನು? ಗೂಗುಕ್ ಗೂಗುಕ್ ಯಂದು ಅಪಸಗುನ ನುಡಿಯಯ ಕೂಡದೆಂದು ಗೂಗೆಗಳಿಗೆ ಆದ್ಯೆ ಮಾಡಿದ್ದೇನು? ಯಿ ಪ್ರಕಾರವಾಗಿ ಹೊನ್ನಮ್ಮನ ಹಳ್ಳವು ಅಚೋದಿತ ಸರೋವರವೇ ತಾನೆಂಬಂತೆ ಬೀಗಲಕ ಹತ್ತಲು... * ಸಿವನ್ನಾಮ ಪಾರೊತಿ ಪತಿ ಹರ ಹರ ಮಾದೇವ ಜಗದಂಬಾ.. ಜಗದಂಬಾ.. ಕಳಸಗಳೊಂದಿಗೆ ಅಯೂರುಮಂದಿ ಕಳಸಗಿತ್ತೇರು, ಕುಂಭಗಳೊಂದಿಗೆ ಸಾವುರದೊಂದು ಮಂದಿ ನಿತೇರು.. ಸಹಸ್ರದೀವಟಿಗೆಗಳ ಬೆಳಕೊಳಗ ಮಿರಮಿರನೆ ಮಿಂಚುತ್ತಿರಲು ಸಿಮಾಸನಾರೂಢ ಜಗಾನು ಮಾತೆಯು ತನಗೆಂದೇ ೦ರುಪಾಟು ಮಾಡಲಾಗಿದ್ದ ಹುದ್ವೀನ ಮಂಟಪದೊಳಗೆ ಯಿರಾಜಮಾನಳಾದೊಡನೆ ವುಘ.. ವುಘ.. ಆಗೊ ಆಚೋಕಡೇಕ ನಿಲುಗಲ್ಲುಗಳನ್ನೇರಿದವರೆಷ್ಟೋ? ಹೇಗ್ಗೆ ಯಿಚ್ಚೇಕಡೇಕ ಡಡಯೇರಿ ನಿಂತವರೆಷ್ಟೋ? ತಾಯಿಯ ನೆನೆಯೂತ ವಂದೆಲೆ ವಂದಡಕೆ ವಂದು ದಮ್ಮಡಿ ಯಿಟ್ಟು ಬೆಳುದಿಂಗಳನ್ನು ಬಿಂದು ಬಿಂದುವಿನಲ್ಲಿ ಮುಡುಕೊಂಡಿದ್ದ ಹೊನ್ನಮ್ಮ ತಾಯಿಗೆ ಹರಿಬಿಟ್ಟು ಸಣುಮಾಡಿದವರೆಷ್ಟೋ? ಆಕೆಯ ಅಗಾಧ ಅಂತಃಕರಣಕ್ಕೆ ಬೆರಗಾದವರೆಷ್ಟೋ!