ಪುಟ:ಅರಮನೆ.pdf/೪೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೨೬ ಅರಮನೆ ಮನುವಿನ ಅಪರಾವತಾರಯಂದು ಪ್ರಚಾರ ಮಾಡ ಲಾರಂಭಿಸಿದರು. ಯಿದಕ್ಕೆ ತದ್ವಿರುದ್ದವಾಗಿ ಸೂಯಂಸೇವಕರೂ.. ಅನೇಕ ಕಡೆ ಅಂಗ್ರೇಜೆ ಪರ ನಿಲುವಿನ ಆಚಾರತ್ರಯರಿಗೂ, ಅಣಿಮಾಂಡವ್ಯಮಾಚಾರೈರ ಅಭಿಮಾನಿಗಳಿಗೂ ನಡುವೆ ವಾಗ್ವಾದ, ಜಗಳ, ಹೊಡದಾಟಗಳು ಸಂಭವಿಸತೊಡಗಿದವು. ಸಿಪಾಯಿಗಳು ವಯೋರುದ್ಧರನ್ನು ಅವರವರ ಗ್ರಹಗಳನ್ನೇ ಸೆರೆಮನೆಗಳನ್ನಾಗಿ ಪರಿವರಿಸಿ ಬಂಧನದಲ್ಲಿರಿಸಿದರು. ಅನೇಕ ತರುಣ ಸೋಯಂಸೇವಕರನ್ನು ವುಪಾಯಾಂತರಿಂದ ಬಂಧಿಸಿ ದೂರ ದೂರದ ಸೆರೆಮನೆಗಳಲ್ಲಿಟ್ಟರು. ಯಿದರ ಪರಿಣಾಮವಾಗಿ ಅನೇಕ ಅಗ್ರಹಾರಗಳು ಸೆರೆಮನೆಗಳಾದವು, ಸೆರೆಮನೆಗಳು ಅಗ್ರಹಾರಗಳಾದವು. ಸರಕಾರ ಅನೇಕ ಅಗ್ರಹಾರಗಳಿಗೆ ನೀಡಿದ್ದ ಸವಲತ್ತುಗಳನ್ನು ಹಿಂದಕ್ಕೆ ಪಡೆಯಿತು, ಹೆಚ್ಚಿನ ತೆರಿಗೆ ವಿಧಿಸಲಾರಂಭಿಸಿತು. ಸರಕಾರದ ಸಂಸ್ಕೃತ ವಿರೋಧೀ ಚಟುವಟಿಕೆಗಳಿಂದ ತತ್ತರಿಸಿದ ಅಗ್ರಹಾರೀ ಯುವ ಸೊಯಂಸೇವಕರು ಭೂಗತರಾಗಲಾರಂಭಿಸಿದರು, ಕೆಲವರು ಅಕ್ಕಪಕ್ಕದ ಜಾಗೀರುದಾರು, ದೇಶಮುಖ, ಪಟುವಾರಿಗಳನ್ನು ರಾತ್ರೋರಾತ್ರಿಭೆಟ್ಟಿಯಾಗಿ ಅಗ್ರಹಾರಗಳನ್ನು ರಕ್ಷಿಸಿ ಯಂದು ಬೇಡಿಕೊಳ್ಳತೊಡಗಿದರು. ಕೆಲವು ಅಗ್ರಹಾರಗಳ ಸಂಪನ್ನ ಬ್ರಾಹ್ಮಣರು ತಮ್ಮ ತಮ್ಮ ಹೆಂಡರು ಮಕ್ಕಳನ್ನು ಕಟ್ಟಿಕೊಂಡು ದೂರದ ಪುಣೇ ಸೀಮೆಯ ಮರುಗಳಿಗೆ ವಲಸೆ ಹೋಗಲಾರಂಭಿಸಿದರು.. ಯಾಕೆಂದರಲ್ಲೆಲ್ಲಾ ಪೇಶ್ವೇ ವಾರಸುದಾರರು ಚಿತ್ಪಾವನ ಬ್ರಾಹ್ಮಣರು.... ಅತ್ತ ಕುದುರೆಡವು ಪಟ್ಟಣದೊಳಗ ಮಜ್ಜಣ ಮಾಡಿದ ಸಾಂಬವಿಯ ಬಿಮ್ಮನಸಿಹಾಂಗ ಮೆರವಣಿಗೇಲಿ ಹೊಂಟೂ ಹೊಂಟೂ ಸೇರಿ ವುಪಸ್ಥಿತಳಾದ ಜೆಗೇವು ಯಷ್ಟುದ್ದ ಯಿತ್ತಂದ ಅಷ್ಟುದ್ದ ಯಿತ್ತು ಸಿವನೇ.. ಅಲ್ಲಿ ಮುತ್ತಿನ ಚಪ್ಪುರಗಳನ್ನೇನು ಕೇಳುತ್ತೀ? ಮಾವಿನ ತೋರಣಗಳನ್ನೇನು ಕೇಳುತ್ತೀ? ಹೆಜ್ಜೆ ಹೆಜ್ಜೆಗೊಂದೊಂದರಂತೆಯಿದ್ದ ಹುಬ್ಬಿನ ಮಂಟಪಗಳನ್ನೇನು ಕೇಳುತ್ತೀ ? ವಂದೊಂದು ಮಂಟಪದೊಳಗ ಸಾಕ್ಷೀಭೂತವಾಗಿ ಯಿರಾಜಮಾನಗೊಂಡಿದ್ದ ವಂದೊಂದು ಹೆಣ್ಣು ದೇವತೆಗಳನ್ನು ಯೇನು ಕೇಳುತ್ತೀ? ಆ ದೇವತೆ ಯೀತನ ಮಮ್ಮೊಳಗೆ ಹೊಕ್ಕೊಳ್ಳುತ್ತಿದ್ದುದೇನು ಕೇಳುತ್ತೀ? ಅವೆಲ್ಲ ಸರೀರಗಳನ್ನು ಅದರು ಬದಲು ಮಾಡುತಲಿದ್ದುದೇನು ಕೇಳುತ್ತೀ? ಸುತ್ತಾಟ್ನಾಕಡೇಕ ಹೊತ್ತಿ ವುರಿಯಲು ಸಜ್ಜಾಗಿ ನೆಲದಡಿ ಅವಿತಿದ್ದ ಸುರುಸುರುಬತ್ತಿ ಪಟಾಕಿಗಳನ್ನೇನು ಕೇಳುತ್ತೀ? ತಾಯಿಯ ಪ್ರೀತ್ಯದ್ಧವಾಗಿ ಭಕುತಾದಿ ಮಂದಿ ತಮ್ಮ ತಮ್ಮ ಸರೀರಗಳನ್ನು