ಪುಟ:ಅರಮನೆ.pdf/೪೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೩೮ ಅರಮನೆ ಅವಧೂತ ಪರಂಪರೆಯ ಮುದೇರಿಂದಲೇ ತುಂಬಿರುವ ಗುರುಮನೆಯೋ ಯಂದಂದುಕೊಳ್ಳದಿರರು.. ಅವರು ಅಂದಾಡುತಲಿದ್ದದು ಊ ಕಾಲದ ಭಾಷೆಯಾಗಿರಲಿಲ್ಲ... ಅವರು ಮಾಡುತಲಿದ್ದುದು ಊ ಕಾಲದ ನಡಾವಳಿಯಾಗಿರಲಿಲ್ಲ. ವರಮಾನ ಪೀಠದ ಮ್ಯಾಲ ಭೂತಕಾಲವನ್ನು ಕುಂಡರಿಸಿದ್ದರೋ.. ಭೂತಕಾಲಕ್ಕೆ ವರಮಾನವನ್ನೇ ನರವೇದ್ಯ ಮಾಡುತ್ತಿದ್ದರೋ.. ಭೂತಕಾಲದ ರೀತಿ ರಿವಾಜುಗಳನ್ನಳವಡಿಸಿಕೊಂಡು ಬದುಕಬೇಕೆಂದು ಭಕುತಾದಿ ಮಂದಿಗೆ ಜಬರದಸ್ತೀಲೆ ಹೇಳುತಲಿದ್ದದೋ ಅಥವಾ ವರಮಾನವನ್ನು ಬದುಕೀ ಬದುಕೀ ರೋಸಿಗೊಂಡಿದ್ದ ಭಕುತಾದಿ ಮಂದಿಯೇ ಭೂತಕಾಲವನ್ನು ಬದುಕಲಕೆಂದು ಯಿಚ್ಛೆ ಪಟ್ಟಿತ್ತೋ.. ವಟ್ಟಿನಲ್ಲಿ.... ನಾಸ್ತಿಕರನ್ನು ಆಸ್ತಿಕರನ್ನಾಗಿ ಮಾಡುವ ತಾಕತ್ತೊಂದಿದ್ದರ ಆಗತದಾ? ಆದರೆ ಅರಮನೆಯ ಗೋಡೆಗಳು ಮಳ್ಳಗೆ ಬಂದು ಯತ್ತುತಲಿದ್ದ ಪ್ರಶ್ನೆಗಳಿಗೆ ವುತ್ತರ ಕೊಡುವ ತಾಕತ್ತೂ ತನಗಿರದಿದ್ದರೆ ಆತಾದ? ಅಂಥದ್ದೊಂದು ಪ್ರಸಂಗವು ಬಂದೇ ಬಿಟ್ಟಿತು. ಅದಾವುದೆಂದರೆ.... ಯಲ್ಲಿತ್ತೋ? ಹೆಂಗಿತ್ತೋ? ಯದರಾಗಿಂದ ವಡಮೂಡಿತ್ತೋ? ಬಂದಂಥ ಮುಪ್ಪಾನು ಮುದನ್ನು ಅದುವರೆಗೆ ಯಾರೊಬ್ಬರೂ ನೋಡಿದುದು ಯಿರಲಿಲ್ಲ. ಮೀನ ಗುರುತು ಹಿಡಿದು ಮಾತನಾಡಿ ಸೋರಿರಲಿಲ್ಲ... ಅದರ ಆಕಾರ ಹೆಂಗಿತ್ತೆಂದರ ಹಂಗಿತ್ತು.... ಬೀಳೇಪತ್ತಲ ವುಟುಕೊಂಡಿದ್ದ ಅದರ ಹಣೆ ಪೊದೆಪೊದೆ ಹುಬ್ಬಿನ ಮ್ಯಾಲ, ಹುಬ್ಬು ಗಲ್ಲದ ಮ್ಯಾಲ, ಮೊಲೆಗಳು ಹೊಟ್ಟೆಯ ಮ್ಯಾಲೆ, ಹೊಟ್ಟೆ ತೊಡೆಗಳ ಮೊಣಕಾಲ ಮ್ಯಾಲೆ ಯಿಳಿ ಬಿದ್ದಿದ್ದವು. ಯಲುಬೆಲುಬು ಹೊಂಟು ಆರುಮೊಳದೆತ್ತರದ ಜೋಟಿಕೋಲಿನಂಗಿದ್ದ ಆಕೆ ನೋಡುವವರನ್ನು ಬೆಕ್ಕಸಬೆರಗಾಗಿ ಸುತ್ತ ಮುಂದ ಮುಂದಕ್ಕೊಂದೊಂದೆ ಹೆಜ್ಜೆಯನಿಕ್ಕುತಲಿತ್ತು. ದಮ್ಮಡಿ ತೂಕವಿದ್ದ ಅದರ ಹೆಜ್ಜೆ ಗುರುತು ಭೂಮಿ ವಾಲ ಮೂಡುತಯಿರಲಿಲ್ಲ.. ಪಾರುಪತ್ಯಗಾರನಾಗಿದ್ದ ಅಡುವೆಜ್ಜನು ಯವ್ವಾ ಬೇ ಮುದಕೀ.. ಯ್ಯೋಯ್ ಮುದುಕೀ.. ರಮೋಟು ನಿಂತಗ.. ನೀನುದಾರು ಯಂದು ತರುಬಲೆತ್ನವ ಮಾಡಿದ.. ತಡೆಯಲೆಂದು ಬಂದ ಅವರಿವರನ್ನು ಮೋಳು ಮಾಡಿಕೊಂಡು ತುಟಿ ಪಿಟಕ್ಕೆಂಬಂತೆ ಸೀದ ಹೊತಾ ಹೋಗಿ ಅದೇ ತಾನೆ ವುಂಡು ಗಿಂಡು ಯಲಡಕೆ ನಮಲೂತ ಪಲ್ಲಂಗದ ಮ್ಯಾಲ ಮನ್ನ ಚೆಲ್ಲಿದ್ದ