ಪುಟ:ಅರಮನೆ.pdf/೪೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೪೩೯ ಮೋಬಯ್ಯನೆದುರು ನಿಂತಗಂತು.. ಅವಯ್ಯನ ನಖ ಶಿಖಾಂತ ನೋಡಿತು. ಆದರಾವಯ್ಯ ತಿರುಗಿ ಸಹ ನೋಡಲಿಲ್ಲ... ಕೂಕ ಯಂದೂ ಹೇಳಲಿಲ್ಲ... “ಯಲಾಯ್ ಮೋಬಯ್ಯನೇ.. ವುಂಡರಮನೆಗೆ ದ್ರೋಳಿನ ಬಗೆದು ಬಿಟ್ಟೆಯಲ್ಲಾ... ಅದ್ಯಾವ ಸೇಡಿಟ್ಟುಕೊಂಡಿದ್ದಿ ಯೂ ಅರಮನೆ ಮಾಲ..” ಅಂತು.. ಕೇಳಿಸಿಕೊಂಡರೂ ಅವಯ್ಯ ಮರು ಜವಾಬು ನೀಡಲಿಲ್ಲ. ಸಂಚಿ ಮಳಿಗದ ಪಿಕದಾನಿಯವನೂ ತನ್ನನ್ನು ಬೇಬಿಷಿ« ಮಾಡುತವನಲ್ಲಾ.. ಯಂಬ ಯಸನದಿಂದ ಕಣ್ಣೂಳಗ ನೀರು ತಂದಕಂತು.. ಆದರೆ ಅದನ ವುದುರಗೊಡಿಸಲಿಲ್ಲ..... ಮೋಬಯ್ಯನನ್ನು ಯೇನು ಮಾಡುವುದೋ ಯಂಬ ಅಂಜಿಕೆಯಿಂದ ಹಂಪಜ್ಜನು ಹಲವರನ ಬೆನ್ನ ಹಿಂದೆ ಯೆಟುಕೊಂಡು ಬಂದನು.. ನೀನ್ಯಾರು ಮುದುಕಿ.. ನೀನ್ಯಾಕ ದುಕ್ಕ ಮಾಡುತೀಂಯವ್ವಾ.. ಯಂದು ಕೇಳಿದ್ದಕ್ಕದು ಯೇವಯ್ಯನ ಸರೀರದೊಳಗಿರೊ ಸಾಂಬವಿ ಜೊಡಿ ತಾನು ಮಾತಾಡೋದಯ್ಕೆ? ಅಂತಂತು. ವಂಛಣ ದಿಗ್ವಬ್ರಮೆಗೊಂಡರೂ ಆ ಹಿರೀಕನು ತೋರಗೊಡಲಿಲ್ಲ.. “ಜೀವಯ್ಯನ ಸರೀರದೊಳಗ ತಾಯಿ ವಸ್ತಿಮಾಡಿರೋದು ಖರೇವಮ್ರವ್ಯಾ.. ಆದರೆ ಆಕಿ ಹಾದಿ ಬೀದೀಲಿ ಹೋಗೋರ ಜೋಡಿ ಮಾತಾಡಲಕಾಯ್ತದಾ? ಆಕೆ ಮಾತು ಬ್ಯಾರೆ ಅಲ್ಲ. ನನ ಮಾತು ಬ್ಯಾರೆ ಅಲ್ಲ... ಆಕಿ ಪರವಾಗಿ ನಾನು ಜವಾಬು ನೀಡೇನು?” ಯಂದು ಹೇಳಿದ್ದಕ್ಕೆ ವುಳಿಕೆ ಹಿರೀಕರು ಹವುವುದೆಂದರು.. ಯಿವರವರ ಜೋಡಿ ತಾನು ಮಾತಾಡುವುದೋ? ಬ್ಯಾಡಮೋ ಯಂದನಕಂತದು ಆಟು ದೂರದಲ್ಲಿದ್ದ ಪುವಲ ರಾಜರ ಸಿವಾಸನ ಕಡೇಕ.. ಮೂಲೆ ಮೂಲೆ ಕಡೇಕ ನೋಡುತ ನಿಟ್ಟುಸಿರುಬಿಟ್ಟಿತು. ಅದರ ಮೇಲು ಮಯ್ಯ ಲಚ್ಚಣ ನೋಡಿದರೆ ಎಂದು ವಯಸ್ಸಿನಲ್ಲಿ ಸುಖವಾಗಿ ಬಾಳಿ ಬದುಕಿದ್ದಿರಬೌದೆಂಬುದು ಖರೆ.. ರಾಜಮಾತೆ ಭಮ್ರಮಾಂಬೆಯ ಮುತ್ತಜ್ಜಿ ತಾನಾಗಿದ್ದಿರಬೌದಾ.. ಯಂದೆಂದುಕೊಂಡರು ಅವರಿವರು.... ಕುಂತಳವ್ವಾ ಯಂದಿದ್ದಕ್ಕೆ ತಾನು ಕೂಡರಲಕ ಬಂದಿಲ್ಲಾ ಅಂತು, ಯಲಡಕೇನಾರ ಹಾಕ್ಕೋ ಅಂದಿದ್ದಕ್ಕೆ ತಾನು ಯಾವ ಸವುಭಾಗೈವಿಗೆ ತೊಂಬಲ ನಮಲಲೀ ಅಂತು. 'ನೀನ್ಯಾರು? ಯದಕ ಬಂದಿ' ಅಂತ ಜುಲುಮಿ ಮಾಡಿದ್ದಕ್ಕಾ ಮುದೇದು 'ನಾನು ಅರಮನೆಯವ್ವಾ.. ಅರಮನೆಯ ಅಂದರೆ ನಾನೆ ಕನರಯ್ಯಾ...' ಯಂದು ಹೇಳಿದೊಡನೆ ಗೊಳ್ಳನೆ ನಗಾಡಿದವರೆಷ್ಟೋ?