ಪುಟ:ಅರಮನೆ.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೧೭ ವುಪಾಸ ಅದಾನೋ ಯಂದನಕಂತ ಅನುವಾದ ಹುಲ್ಲಿನ ಹೊರೆಯನ್ನು ಸರಂತ ಯತ್ತಿ ತಲಿಮ್ಯಾಲ ಯಿಟುಕೊಂಡು, ಯಿನ್ನೊಂದು ಕಮ್ಮೊಳಗೆ ಘನುವಾದ ಕುಡುಗೋಲನ್ನು ಹಿಡಕೊಂಡು ಮರ ಕಡೇಕಿದ್ದ ಹಾದಿಯ ಮ್ಯಾಲ ದೊಪ್ಪೆಂದು ಹೆಜ್ಜೆಯಿಟೇಟಿಗೆ ಮೂರೊಳಗೆ ಮೊರಮನ ಖಡುಗದ ತುದಿಮಾಲಿದ್ದ ಗಜನಿಂಬೆ ಹಣ್ಣು ಬಿದ್ದು ವುರುಳಿಕೋತ ವುರುಳಿಕೋತ ಯಸನೋಪಾಸನೆ ಯಲ್ಲಿ ನಿರತನಾಗಿದ್ದ ಪೂಜಾರಿ ಜೆಟ್ಟಿಂಗಪ್ಪನ ಮುಂದೆ ನಿಂತಿತು. ಆಕೆ ಯಿನ್ನೊಂದು ಹೆಜ್ಜೆಯನ್ನು ದೊಪ್ಪೆಂದು ಯಿಡಲು ಮದ್ಯಾಣದ ಸುಖ ಬಿಸಿಲಿಗೆ ತಮ್ಮ ಫಳಫಳನೆ ಹೊಳೆಯುತಲಿದ್ದ ಮಯ್ಯ ಚೆಲ್ಲಿ ಮಲಿಕ್ಕಂಡಿದ್ದ ಸರುಪಗಳು ಹೆದರಿ ತಮ ತಮ್ಮ ಬಿಲಪಲ ಸೇರಿಕೊಂಡವು. ಆಕೆ ಮತ್ತೊಂದು ಹೆಜ್ಜೆಯನ್ನು ದೊಪ್ಪೆಂದು ಯಿಡಲು ಅಮರಾವತಿ, ವಾಮನ, ಕುಮುದ, ಅಂಜನ, ಪುಷ್ಪದಂತ, ಸಾರುವ ಭವುಮ, ಸುಪ್ರತೀಕ ಯಂಬುವ ಅಷ್ಟದಿಗ್ಗಜರು ತಮ್ಮ ತಮ್ಮ ವಾಸಾಸ್ಥಾನಗಳಿಂದ ಹೊರಬಂದು ಪ್ಲಾ.. ಹಾ.. ಜಗಲೂರವ್ವ ಯಂಬ ನರಮಾನ್ನವಳೇ ಯಂದು ನೋಡುತ ವುದ್ದರಿಸಿದರು. ಆಕೆಯ ಅಗ್ನಿ ಸದ್ರುಶ ನೋಟ ತಗುಲಿದರೆಲ್ಲಿ ತಮ ತಮ್ಮ ರೆಕ್ಕೆ ಪುಕ್ಕಗಳು ಪುರುಪುರನ ವುರಿದು ಹೋಗುವಮೋ ಯಂದು ಹೆದರಿದ ಬಾನಾಡಿಗಳು ತಾವಿದ್ದ ಜಾಗಗಳಲ್ಲಿಯೇ ಗಪ್ ಚುಪ್ ಅಂತ ಅವಿತಿಟ್ಟುಕೊಂಡವು. ವಟ್ಟಿನಲ್ಲಿ ಕಪ್ಪತ್ರಾಯ ಗುಡ್ಡವೇ ಸ್ತ್ರೀಯೋಲ್ವಳ ರೂಪಧಾರಣ ಮಾಡಿ ನಡೆಯುತ್ತಿರುವುದೋ ಯಂಬ ಭ್ರಮೆಯನ್ನು ಸಚರಾಚರಕ್ಕುಂಟು ಮಾಡುತಲಿದ್ದ ಜಗಲೂರೆವ್ವನ ಭವ್ಯಾಕ್ರುತಿಯನ್ನು ಯೇಟು ಹೊಗಳಿದರೂ ಕಡಿಮೆಯೇ ಸಿವಸಂಕರ ಮಾದೇವಾss ಅನಾದಿಕಾಲದಿಂದ ರಾಜಮಾರಾಜರಿಂದಲೂ, ಸಾಮಂತ, ಮಾಂಡಲೀಕ ಪಾಳೆಗಾರರಿಂದಲೂ ಯಲ್ಲಾಪ್ರಕೊರಚರಟ್ಟಿಕಳ್ಳಕಾಕರಿಂದಲೂ ಪೂಜೆ ಪುನಸ್ಕಾರ ಮಾಡಿಸಿಕೊಂಡಿರುವಂಥಾ.. ವುಡೇಗೊಳ್ಳ ಮಲೆಯೊಳಗೆ ನೆಲೆಗೊಂಡಿರುವಂಥಾ.. ಜಗಲೂರಜ್ಞನ ವರಪ್ರಸಾದ ಸಂಜಾತೆಯಾದ ಜಗಲೂರೆವ್ವ ಯಂಥಾಕಿ ಯಂದರೆ ಸಾವಿರ ನಾಲಗೆಗಳ ತಾಕತ್ತನ್ನು ತನ್ನೊಂದೆ ನಾಲಿಗೆ ವಾಲ ಯಿಟುಕೊಂಡಿರುವಾಕಿ, ಬಯ್ದಳ ಫಳಾರದಂಗಡಿಯನ್ನು ತನ್ನ ಗಂಟಲೊಳಗೆ ಯಿಟ್ಟುಕೊಂಡಿರವಾಕಿ, ಭಯದ ಸುಗ್ಗಿ ವಕ್ಕಲಾಡುವಲ್ಲಿ ನಿಷ್ಣಾತೆಯಂದು ಹೆಸರಾಗಿರುವಾಕಿ, ಯಿವೆಲ್ಲಕ್ಕಿಂತ ಮಿಗಿಲಾಗಿ ಅಂತಃಕರಣದ ಕೊಪ್ಪರಿಗೆಯನ್ನು ತನ್ನ ರುದಯದಲ್ಲಿ ಯಿಟ್ಟುಕೊಂಡಿರುವಾಕಿ.. ಯಿಂಥ ಜಗಲೂರವ ವಂದೊಂದೆ ಹೆಜ್ಜೆಯನ್ನಿಕ್ಕುತ್ತ.. ಭೂಮಾಯಿ ಯನ್ನು ಪುಳಕಗೊಳಿಸುತ್ತ.. ವಬ್ಬೊಬ್ಬರ