ಪುಟ:ಅರಮನೆ.pdf/೫೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೮೮ ಅರಮನೆ ಬಂದು ಅಲ್ಲಿ ಸೇರುತ್ತಾರ.. ಸೇರಿದಾಗ್ಗೆ ತಮ್ಮ ತಮ್ಮ ಪಿಳ್ಳೆಗಳ ಕೊಡು ಕೊಳ್ಳೋದು ನಡೆಸುತ್ತಾರ.. ತಮ್ಮ ದೇವತೆಯ ಮಂಖ್ಯ ಮಾಲ ಬಗೆ ಬಗೆಂರು ಬಂಗಾರದೊಡವೆಗಳನ್ನು ಹಾಕಿ ಸಿಂಗಾರ ಮಾಡುತ್ತಾರ.. ಕುರಿ ಕೋಳಿ ಕಡುದು ನಯವೇದ್ಯ ಮಾಡುತ್ತಾರೆ. ಕುಣಿದು ಕುಪ್ಪಳಿಸುತ್ತಾರ.. ದೇವಿಯ ಪ್ರೀತ್ಯಕ್ಷವಾಗಿ ಯಿಡೀ ರಾತ್ರಿಬೆಳದಿಂಗಳೊಳಗ ಸಂಭೋಗ ಮಾಡುತ್ತಾರ.. ಯಾಕಂದರೆ ಆ ಅಮ್ರುತ ಸಮಯದಲ್ಲಿ ಸಂಭೋಗಿಸಿದರ ಹೇಮಾಹೇಮಿ ಕಳ್ಳರು ಜನಿಸುವರೆಂಬ ನಂಬಿಕೆಯು.... ಯಂಥೆಂಥಾ ಖದೀಮರನ್ನು ಮಟ್ಟಹಾಕಿರುವಂಥಾ ಥಾಮಸು ಮನೋ ಸಾಹೇಬನು ಯಿವರ ಯೀ ಚಾಕಚಕ್ಯತೆಯನ್ನು ಕೇಳಿ ತಿಳಕೊಂಡು ಆಹ್ವಾ... ಯಂಥ ನಿಷ್ಣಾತರಿವರು... ಯಿವರಿಂದಾಗಿ ಕಳ್ಳತನವೂವಂದು ಅಮೂಲ್ಯ ಕಲೆಯಾಗಿ ಮಾರುಪಟ್ಟಿರುವುದಲ್ಲಾ... ಕಳ್ಳತನ ಯಿದ್ಯಾಯಿಭಾಗಗಳನ್ನೊಳಗೊಂಡ ವಂದು ಯಿಸ್ತಯಿದ್ಯಾಲಯವೊಂದನ್ನು ಆರಂಭಿಸಿ ಅದಕ್ಕೆ ಯಲ್ಲಾಪ್ರಕೊರಚರಟ್ಟಿ ಹಿರೀ ಕಿರೀಕರನ್ನೆ ಕುಲಪತಿ, ಪ್ರಾಧ್ಯಾಪಕರನ್ನಾಗಿ ನೇಮಿಸಿದಲ್ಲಿ ಯಷ್ಟು ಚೆನ್ನಾಗಿರುತ್ತದೆ ಯಂದಂದುಕೊಂಡಿರಲಿಕ್ಕೂ ಸಾಕು. ಮೊದಮೊದಲು ತನಗವರ ಮ್ಯಾಲ ಕೋಪ ಯಿಲ್ಲದಿರಲಿಲ್ಲ. ಅವರನ್ನು ಹಿಡಿದು ಮಟ್ಟಹಾಕಿದವರಿಗೆ ಬಡ್ತಿ.. ನಗದು ಬಹುಮಾನ ವುಂಬಳಿ, ಜಾಗೀರು, ರಾವ್ ಬಹದ್ದೂರು ಯಂಬಿವೇ ಮೊದಲಾದ ಅಮಿಷಗಳನ್ನು ಘೋಷಿಸಿರದೆ ಯಿರಲಿಲ್ಲ.. ಗಾಳಿಯನ್ನು ಹಿಡಿಯಲಕಾತದ? ಮಿಂಚನ್ನು ಹಿಡಿದು ಸಂಗ್ರಹ ಮಾಡಲಕಾತದ? ಯಂಬ ಕಾರಣಕ್ಕೆ ಯಾವೊಬ್ಬ ಅಧಿಕಾರಿಯೂ ಅವರ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಯನ್ನು ಸ್ಥಳೀಕರಂತೂ ಅವರು ಕುಂಪಣಿ ಸರಕಾರಕ್ಕೆ ಸದಾ ತಲೆನೋವಾಗಿರಬೇಕೆಂದು ಬಯಸಿಯೋ.. ಅವರ ಕಳ್ಳಕಸುಬಿನಿಂದಾಗಿ ತಮ್ಮ ಭೂಭಾಗದ ಗವುರವ ಪ್ರತಿಷ «ರು ನೂರಡಿಗೊಂಡಿರುವುದೆಂದು ಭಾವಿಸಿಂಟೋ.. ಯಲ್ಲಾಪ್ರಕೊರಚರಟ್ಟಿಯ ಬಗ್ಗೆ ವಳಗೊಳಗೆ ಹೆಮ್ಮೆ ಪಟ್ಟುಕೊಳ್ಳುತ್ತಲಿರುವರು. ಯಾರು ಹಂಗೇ ಯಿರಲಿ.. ಕಲೆಟ್ಟುಸಾಹೇಬ ಮಾತ್ರ ಅವರನ್ನು ಸಜೀವವಾಗಿ ಹಿಡಿದು ತಂದು ತನಗೆ ವಪ್ಪಿಸಲೇಬೇಕೆಂದು ತನ್ನ ಕೆಳಗಿನ ಅಧಿಕಾರಿಗಳಿಗೆ ಕಟ್ಟುನಿಟ್ಟಾದ ಆಗ್ನೆ ಮಾಡಿರುವನು. ಸಂತೆ, ಪರಿಶ, ಜಾತುರೆಗಳಲ್ಲಿ ತಮ್ಮ ಕಂಪನಿಯ ಸಾಹಿತ್ಯಕ .. ಸಾಂಸ್ಕೃತಿಕ ಯಿಭಾಗದವರ ಕಡೇಲಿಂದ ಯಲ್ಲಾಪ್ರಕೊರಚರಟ್ಟಿ ಕಳ್ಳರೇ ಕಲೆಬ್ರುಸಾಹೇಬರ ಸಮಕ್ಷಮ ಸರಣಾಗಿರಿ..