ಪುಟ:ಅರಮನೆ.pdf/೫೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ ೪೮೯ ಅವರಿಂದ ನಗದು ಬಹುಮಾನ ಬಿರುದು ಬಾವಲಿ ಪಡೆದುಕೊಳ್ಳಿರಿ.. ಸರಣಾದವರಿಗೆ ಯಿರಲಕೊಂದು ಮನೆ, ವುಳುಮೆ ಮಾಡಲಕೆಂದು ಹೊಲ, ಪಾಡಾ ಖಡ್ಡಿಗೆಂದು ಮಾಸಾಸನ ಕೊಡಬೇಕೆಂದು ತೀರುಮಾನಿಸಿರುವುದು.. ಯಿಂದೇ ಸರಣಾಗಲು ತ್ವರೆಮಾಡಿರಿ” ಯಂದು ಪ್ರಚಾರ ಮಾಡಿಸತೊಡಗಿದರು. ಅದರೆ ಯಿದಾವುದೂ ಫಲ ಕಾಣಲಿಲ್ಲ.... ಆದರೆ ಯಡ್ಡವರನು ಮಾತ್ರೆಯಲ್ಲಾಪಕೊರಚರಟ್ಟಿ ಕಳ್ಳರನ್ನು ಹಿಡಿದೊಪ್ಪಿಸಿ ಕಲೆಬ್ರುಸಾಹೇಬರ ಕ್ರುಪೆಯಿಂದ ಬಡ್ತಿ ಪಡೆದುಕೊಳ್ಳಬೇಕೆಂದು ನಿರರಿಸಿದನು. ಅವರನ್ನು ಹಿಡಿಯಲಿಕ್ಕೆಂದೆ ಗಣಪತರಾವ್ ಬೋಂಸ್ಟೇ ಯಂಬ ಪರಾಕ್ರಮಿಯ ನೇತ್ರುತ್ವದಲ್ಲಿ ವಂದು ಪವುಜನ್ನು ಕಳುವಿಕೊಟ್ಟಿದ್ದನು. ಕಳ್ಳರ ಯೇಸದಲ್ಲಿದ್ದ ಆ ಪವುಜು ನುಂಕೇಮಲೆಯ ಕಾಡೊಳಗೆ ಕಳ್ಳಕಾಕರ ತುಕಡಿಯನ್ನು ಸುತ್ತುವರಿದದ್ದೂ ನಿಜ.. ಸರಣಾಗುವವೆಂದು ಭರವಸೆ ನೀಡಿದ ಅವರಿಗೆ ವುಂಬಲಕ ಬಾನ, ಕುಡಿಯಲಕ ನೀರು ಕೊಟ್ಟಿದ್ದೂ ನಿಜ. ಕಳ್ಳತನದ ನಾನಾ ಮಾಯಾ ಯಿದ್ಯೆಗಳನ್ನು ಪ್ರದಕ್ಷಿಸಿ ಅವರು ಪವುಜನ್ನು ರಂಜಿಸಿದ್ದೂ ನಿಜ.. ನಿಮ್ಮ ಯಡ್ಡವರು ಸಾಹೇಬನನ್ನು ಕರೆಸಿದಲ್ಲಿ ಆತನೆದುರು ತಾವು ಸರಣಾಗುವೆವೆಂದು ಹೇಳಿದ್ದೂ ನಿಜ.. ಅದೇ ಪ್ರಕಾರ ಬೊಂಸ್ಥೆ ಕೂಡ್ಲಿಗಿಗೆ ಖಬರು ಕಳಿಸಿ ತನ್ನ ಮೇಲಧಿಕಾರಿಯ ಆಗಮನದ ನಿರೀಕ್ಷೆಯಲ್ಲಿದ್ದದ್ದೂ ನಿಜ, ಯಡ್ಡವರು ವಂದೇವುಸಿರಿಗೆ ಬಂದು ಓಹ್ ಐಸೀ.. ಗುಡ್.. ವೆರಿಗುಡ್ ಯಂದುದ್ಧಾರ ತೆಗೆದದ್ದು ಕೂಡ ಅಷ್ಟೇ ನಿಜ. ಆದರೆ ಮುಂದಿನೊಂದು ಗಳಿಗೆವಳಗೆ ಅದೇನಾತೋ.. ಅದೇನು ಬಿಟ್ಟಿತೋ.. ಯಲ್ಲಾಪ್ರಕೊರಚರಟ್ಟಿ ಕಳ್ಳರು ಮೇಲೇರಮ್ಮನ ಕೃಪೆಯಿಂದ ಅದ್ರುಸ್ಯರಾಗಿಬಿಡುವುದೇನು? ಬಹಳ ಹೊತ್ತಿನವರೆಗೆ ಬೋಂಸ್ಥೆಯು ತನ್ನ ಸಯೀಕರನ್ನೇ ಅವರೆಂದು ಭ್ರಮಿಸಿದ್ದನೆಂದರೆ ಅವರ ಅಸಾಧಾರಣ ಚಾಕಚಕ್ಯತೆ ಅಗ್ಗವಾದೀತು. ವುತ್ತಮ ಅಂಗ ಸವುಷ«ವ ಯಿಟ್ಟುಕೊಂಡಿದ್ದ ಯಡ್ಡವರು ಸೇರಿದಂತೆ ಅವರೆಲ್ಲ ಹಗಲೆನ್ನದೆ, ರಾತ್ರಿಯನ್ನದೆ ಮೂರಾಕು ದಿನಗಳ ಕಾಲ ನುಂಕೇಮಲೆಯ ಅರಣ್ಯವನ್ನು ಜಾಲಾಡಿ ಮಮ್ಮ ಕಮ್ಮ ನೋವು ಮಾಡಿಕೊಂಡರೇ ಹೊರತು ಅವರ ವುಡುದಾರದ ಚೂರನ್ನಾದರೂ ಪತ್ತೆ ಹಚ್ಚಲಾಗಲಿಲ್ಲ. ಯಲ್ಲಾಪ್ರಕೊರಚರಟ್ಟಿಯ ಕಳ್ಳರಿಗೆ ಕರಗತವಾಗಿರುವ ಯಿದ್ಯೆ ಪಯ್ಲಿ ಕಾಲುಭಾಗವಾದರೂ ಕುಂಪಣಿ ಸರಕಾರದ ಕಯ್ಯವಸವಾದಲ್ಲಿ ಯಿಡೀ