ಪುಟ:ಅರಮನೆ.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ “ಯಲಮ್ ನರಮಾನ್ನವರುಗಳಾss.. ಮುಟ್ಟಿ ನನ್ನ ಮಯ್ಲಿಗಿ ಮಾಡಬ್ಯಾಡೂರಿ, ಮಾತಾಡಿ ನನ ಕಿವಿಗಳನ ಮಯ್ಲಿಗೆ ಮಾಡಬ್ಯಾಡ್ರಿ” ಯಂದದು ಅನ್ನಲು ಅವರೆಲ್ಲ ಗಪಚುಪ್ಪಾದರು. ಅವರ ಪಯ್ಕೆ ಹಿರೀಕನಿದ್ದ ಗೊಡ್ಡಯ್ಯನು “ಮಯ್ಲಿಗಿ ಆಗುವಂಥಾದ್ದೇನುಂಟು ನಿನ ಮಮ್ಮೊಳಗ” ಅಂತ ಕೇಳಲದು “ನನ್ನೊಳಗೆ ಆದಿಸಗುತಿ ವಸ್ತಿ ಮಾಡುವಳೆ. ಹರಕತ್ತು ಮಾಡಿ ತೊಂದರೆ ಕೊಡಬ್ಯಾಡೂರಿ” ಅಂದಿತು. ಆಗಿದ್ದು ಯಿನ್ನೊಬ್ಬ ಹಿರೀಕನಾದ ಯರಬೋರಯ್ಯನು “ತಮ್ಮಾ ಮೋಬಯ್ಯಾ.. ಯೇನಾಡ್ಲಿಕತ್ತಿಯಪ್ಪಾ”ಯಂದು ಕೇಳಲದು “ನಾನು ಮೋಬಯ್ಯನಲ್ಲಾ.. ಆತನ ಸರೀರ ಮಾತಾಡ್ತಿರೋದು..” ಅಂದಿತು. ಅದಾಡಿದ ಮಾತು ಕೇಳಿ ಯಲ್ಲಾರು ಸರೀರ ನೋಡಲಕ ಮೋಬಯ್ಯನದು.. ಆದರಾತನಲ್ಲ ಮಾತಾಡ್ತಿರೋದು ಅಂದರೇನಯ್ಯ? ಯಂದನಕಂತ ಪರಸ್ಪರ ಮಿಕಿ ನೋಡಿಕೊಂಡರು.... ವಂಚಣ ಮಲ್ಪೆ ಹೋಗಿದ್ದ ಜಗಲೂರೆವ್ವ ಮರುಚಣ ಚೇತರಿಸಿಕೊಂಡು.. ಯಿದು ನನಗಂಡನ ಸರೀರ.. ನಾನು ಜ್ಞಾಪಾನ ಜತುನ ಮಾಡಿರೋ ಸರೀರ.. ಯಿದು ನನ ಗಂಡನದಲ್ಲ ಅಂದರ ಯೇನ..? ಯಂದನಕಂತ ಮುಲುಮುಟ್ಟಲಕ ಹೋಗಲು ಅದು ಹಿಂದ ಹಿಂದಕ ಜರುಗಿ “ಖಬಲ್ದಾರ್‌.. ಮುಟ್ಟೇಯಾ ಜ್ವಾಕೆ. ನಿನ್ನ ಗಂಡ ನನ್ನೊಳಗೆ ಅದಾನಂದರ ಅದಾನ, ಯಲ್ಲಾಂದರ ಯಿಲ್ಲ.. ವಂದುಕಾಲಕ ನೀನವಗ ಹೆಣೆಯಿದ್ದಿರಬೌದು.. ಆದರ ಲೀಗಲ್ಲ. ನಿನಗೂ ಅವಗೂ ಯಿದ್ದ ರಿಣ ತೀರಯ್ತಿ.. ಮರು ಮಾತಾಡದೆ ಯಿಲ್ಲಿಂದ ಹೊಂಟೋಗಿ ಬಿಡು.” ಯಂದು ಗದ್ದರಿಸಿತು.. ತನ್ನೊಂದೊಂದು ಮಾತುಗಳಿಂದ ಆಕೆಯನ್ನು ದೂರ ತಳ್ಳಿತು.. ಆಕೆ ಬೀಳೋದು, ಪುಟದಿದ್ದು ಬರೋದು ಮಾಡಿದಳು..... ನಿಟಾರನೆ ನೆಲಮುಗುಲಿಗೇಕಾಗಿ ನಿಂತುಕೊಂಡ ಆಕೆಯು.. ಅಲಲಲಾS ಯಾವ ಅವ್ವ ಯೇನು ಕಥೀSS... ನಾನಿಲ್ಲದ ಯ್ಯಾಳ್ಯಾಗ ಅದೆಂಗ ತೂರಿಕೊಂಡ್ಡು ನನಗಂಡನ ಮಯ್ಯೋಳಗ, ನನ್ನೆಂಡ್ತಿ ಬರಲಿ ತಡಿ ಅಂತ ನನ ಗಂಡ ಆಕೇನ ತರುಬಬೌದಿತ್ತಲ್ಲಾ ಯಂದು ಮುಂತಾಗಿ ಅರುಭಟಿಸುತ್ತಿರಲು ಆ ಸರೀರವು “ನಾನೇ ನಿನ ಗಂಡನ್ನ ಹೊರ ಹಾಕಿ ತಾಯಿಗೆ ಆಶ್ರಯ ಕೊಟೀನಿ... ನೀನು ಬಯ್ದು ರವುರವ ನರಕಕ್ಕೆ ಹೋಗಬ್ಯಾಡ.. ನನ್ನ ಪಾದಪೂಜೆ ಮಾಡಿ ಸಾಂಬವಿಗೆ ಸರಣಾಗು.. ತಿಳಿತಾ” ಯಂದಿತು.... ಅದಕಿದ್ದು ಆಕೆಯು.. “ನೀನ್ಯಾವಾಕಿಯೇ ಆಗಿರು.. ಆದರೆ ನೀನು ನನ