ಪುಟ:ಅರಮನೆ.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೧ “ಹೊಹೋಯ್ ಕಾಟಯ್ಯೋ” ಯಂದು ತನ್ನ ಸವತಿ ಮಗನನ್ನು ಕೂಗಿದಾಗ್ಗೆ.... ಕಡದಮ್ಮನ ಹಳ್ಳದ ಯಡ ದಂಡೆಗುಂಟ ಬೆಳೆದಿದ್ದ ಬಾರೆ, ಕಾರೆ, ಕವಳೆ ಗಿಡಮೊದೆಗಳ ಮರೆಯಲ್ಲಿ ಬಹಿರೆಸೆಗೆ ಕೂಕಂಡಿದ್ದ ಕಾಟಯ್ಯ ನಾಯಕನು ತಿಣುಕುತ್ತ ಪ್ರಸವ ಯೇದನೆಯನ್ನು ಅನುಭವಿಸುತ್ತಿದ್ದನು. ಅದು ತನ್ನ ತಂದೆ ಪದ ಬೊಮ್ಮಯ್ಯ ನಾಯಕನಿಂದ ಬಳುವಳಿಯಾಗಿ ಬಂದಿರುವಂಥಾದ್ದಾಗಿತ್ತು. ಆತನಂತೆ ತಾನೆಲ್ಲಿ ಅಕಾಲಮರಣಕ್ಕೆ ತುತ್ತಾಗುವೆನೋ ರಂದು ಹೆದರುತ್ತಿದ್ದನಾದರೂ ಯಿನ್ನೊಬ್ಬರಿಗೆ ತನ್ನ ವ್ಯಾದಿಂದ ಮರುವ ಬಿಟ್ಟುಕೊಟ್ಟಿರಲಿಲ್ಲ. ಅವರಿವರ ಮೂಲಕ ಮಾಹಿತಿ ಪಡಕೊಂಡು ದೂರದ ಜಾಟಗೆರೆಗೆ ಮಾಯಾದ ಯೇಸದಲ್ಲಿ ಹೋಗಿ ಕಾಸುಲ ಕರವ್ವ ಯಂಬ ವಯ್ದೆ ಪಂಡಿತ ಕಯ್ಯ ಕುಡುಗೋಲಿಂದ ಮುಳ್ಳು ಕೊಕ್ಕಿಸಿಕೊಂಡು ಬಂದಿದ್ದ. ವಯಾಚ್ಚೇ ಕಾಲ್ಯಾಂತೇ ಅಪ್ರಯೋಜಕಾಹ ಯಂಬ ಮಾತಿನಂತೆ ತನ್ನನ್ನು ಮರೆತು ಬಿಟ್ಟನಲ್ಲಾ, ಕೊಡೋದನು ಕೊಡಲಿಲ್ಲಾಂತ ಆಕೆಯು ತನ್ನ ಬಳಿಗೆ ಬಂದು ಹೋಗುವವರಿಗೆಲ್ಲ ಹೇಳಿ ತನ್ನ ಬಾಯಿಯ ಕಡಿತ ತೀರಿಸಿಕೊಂಡಿದ್ದಳು. “ಯಿಂಥಾ ಅನುವಾದ ಬ್ಯಾನೆ ಯಿಟು ಕಂಡೀ ಯಂತಲ್ಲಾ.. ಮಾಡಿಕೊಂಡ ಹೆಂಡ್ತಿಯಾದ ನಾನೇ ಅದ ನೋಡಿಲ್ಲಾಂದರ ಹೆಂಗೆ.. ತೋರೂ.. ತೋರು” ಅಂತ ಕಿರಿಯ ಹೆಂಡತಿಯೂ, ಜನ್ನೋಬನಹಳ್ಳಿ ವತನದಾರ ಬೋಸನಾಯಕನ ಮಗಳೂ ಆದಂಥ ತಿರುಮಲಾಂಬೆಯು ಪಟ್ಟು ಹಿಡಿಯಲು ಆತನು ಹಳೆಣ್ಣೆ ದೀಪದ ಬೆಳಕಲ್ಲಿ ತಗಾ ನೋಡಿಕ್ಕಾ” ಯಂದು ತೋರಿಸಿ ಬಿಟ್ಟನು. ಮುಖ ತಗ್ಗಿಸಿ ನೋಡುತ್ತಲೆ ಆಕೆ “ಅಯ್ಯಯ್ಯೋs ಗಬ್ಬುನಾಥ.. ಥ ನಿನ್ನ” ಯಂದು ಆಕೆ ಅಂದು ದೂರವಾದದ್ದೇ ಕಡೆ.. ವುಳಿಕೆ ಹೆಂಡರು ಸುಮ್ಮನಿದ್ದಾರೆಯೇ.. “ಯಾಕೆ ತಿರುಮಲೀ.. ಹೀಗ್ಯಾಕ ದೂರ ಮಕ್ಕಂತದೀ'ಯಂದು ಪೀಡಿಸದಕ್ಕಿದ್ದು ಆಕೆಯು “ನಾನೊಲ್ಲೆರಾ. ಬೇಕಾರ ನೀವೇ ಹೋಗಿ ಸುಖ ಪಡಕಿ...” ಯಂದು ಹೇಳಿಬಿಟ್ಟಳು. ಯಲ್ಲಾರು ಹೋಗೋದು ನೋಡೋದು, ಮುಖ ಸಿಂಡರಿಸಿಕೊಳ್ಳೋದು ಮಾಡತೊಡಗಿದರು. “ನೀನು ಬಾರೆ ಜಗದಂಬಾ.. ನೀನು ಬಾರೆ ಚಲುವಾಂಬಾ.. ನೀನು ಬಾರೆ ಲಕುಮಾಂಬ” ಯಂದು ಆತನು ಕರೆಯುತ್ತಿದ್ದುದಕ್ಕೆ ಅವರೆಲ್ಲಾ ವಕ್ಕೊರಲಿನಿಂದ “ನೀನ್ಯಾವತ್ತು ನಿನ ವ್ಯಾದೀನ ವಾಸಿ ಮಾಡ್ಕೊಂಡು ಬರೀರೋ ಅಂದೇ ನಾವು ನಿನ ಜೋಡಿ ಮಲಿಕ್ಕೆಂಬೋದು” ಯಂದು ಕೊಸರಿ ನುಡಿದು ಬಿಡಲು ಆತನು “ಯಲಮೋ ಥಾಮಸು ಮನೋ... ನಮ್ಮ ರಾಜಸತ್ತೇನ ಕಸ್ಕೊಂಡಿದ್ದಲ್ಲದೆ ನನ್ನ ಹೆಂಡ್ರನು