ಪುಟ:ಅರಮನೆ.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೩ ಗುರಿಯಾಗುವಿ” ಯಂದು ಹೇಳಿದನು. ಯಂದಿನಂತೆ ಆತ ಸೋತನು, ಮೀತ ಗೆದ್ದನು. ಗುಟ್ಟಾಗಿ ತಂದು ತನ್ನ ಕಬ್ಬಿಣ ಪೆಠಾರಿಯೊಳಗೆ ಬಚ್ಚಿಟ್ಟನು ಪಂಚಾಲನು. ತಿಪ್ಪೆಯೊಳಗ ಹೂತರೂ ವಜಹಂಗ ಪ್ರಕಾಸಮಾನವಾಗಿ ಹೊಳೆವುದೋ, ಅದೇ ರೀತಿ ಆ ಪಾತ್ರೆಯು ಹೆಂಗೋ ಮಲ್ಲಾರಿಗೂ ತನ್ನ ಪರಿಚಯವನ್ನು ಮಾಡಿಕೊಂಡಿತು. ಮುಖ್ಯವಾಗಿ ಆತನ ಹೆಂಡರಿಗೆ.. “ನಮ್ಮಯ್ಯರನ್ನು ಮದುವೆಯಾಗಿ ಪಂಚಾಲಯೆಂಬುವ ಬಿರುದನ್ನು ಧರಿಸಿರೋ ನೀನೇ ನಮ್ಮೆದೋಅ ಬಗೆಯುವುದೇನು? ನಮಗೂ ಅದನ್ನು ವುಪಯೋಗ ಮಾಡೋ ಹಕ್ಕುಂಟು.. ಕೊಡು ಕೊಡು” ಯಂದು ಅವರೆಲ್ಲ ಕಲೆಬಿದ್ದರು. ಯೀ ಪರಪಂಚದೊಳಗೆ ತಾನೋಗ್ರನೇ ಆರೋಗ್ಯದಿಂದ ಕಂಗೊಳಿಸುತ್ತಿರಬೇಕೆಂಬ ಯಿಚ್ಚೆವುಳ್ಳವನಾದ ಆತನು ಪಾಲಿನ ರಾಜ್ಯವನ್ನು ಬೇಕಾದರೆ ಕೊಟ್ಟೇನು, ಆದರೆ ಅದನು ಮಾತ್ರಕೊಡಲಾರೆ” ಯಂದು ಖಡಾಖಂಡಿತವಾಗಿ ಹೇಳಿಬಿಟ್ಟಳು. ತನ್ನ ಪ್ರಾಣ ಪದಕದಂತಿರೋ ಗೆಳೆಯರಾದ.... - ಅಮಾತ್ಯ ಗವುಡಿಕೆ ಸಣಸಿದ್ದಪ್ಪ ಭಂಡಾರಿ ಸನ್ಯಾಸಪ್ಪ “ಕಾಟಯ್ಯ ನಾಯಕ sss?” ರಂದು ಕಡದಮ್ಮನ ಹಳ್ಳದ ಬೇಲಿ ಸಾಲೊಳಗೆ ಬೆದಕಾಡುತ್ತಿದ್ದಾರೆ. ಯಲ್ಲದೀ ದೊರsss” ಯಂದು ಕೂಗುತ್ತಿದ್ದಾರೆ.. ಕಾಟಯ್ಯನು ಅವರ ಕಣ್ಣಿಗೆ ಬೀಳಬಾರದೆಂದು ಪೊದೆಯಿಂದ ಪೊದೆಗೆ ಸರಿದಾಡುತ್ತಿ ದ್ದಾನೆ.. ಯಿನ್ನು ಸರದಾಡಲಿಕ್ಕಾಯ್ತಾಯಿಲ್ಲ.. ಪ್ರಸವ ಯೇದನೆ ಪರಾಕಾಷ« ತಲುಪಿ ಬಿಟ್ಟು ಸ್ನಾ.. ಯಂದು ಆತನು ತಿಣುಕಿದ ಸಬುಧವು ಗಿಡಮರಗಳ ಯಲೆ ಯಲೆಗೆ ತಾಕಿ ಪ್ರತಿಧ್ವನಿಸಲು... ಅವರು ಸುಯ್ಯಂತ ತಲುಪಿ "ಯೇನು ದೊರೆ? ನಾವು ಮಾಡಿರೋ ಪಾಪವಾದರೂ ಯೇನು? ನಮ್ಮನ್ನು ಬಿಟ್ಟು ನೀನೊಬ್ಬೆ ಹೊರಕಡೀಕ ಬಂದೀಯಲ್ಲ..” ಯಂದು ಆತನ ಮುಂದ ಅಲ್ಲಲ್ಲಿ ಕೂತುಕೊಳ್ಳಲು ಅದೇ ಪುವಲ ರಾಜಾಸ್ತಾನವಾಗಿ ಮಾರುಪಟ್ಟಿತು. ಅವರಾರಿಗೂ ವಂದೇ ವಂದು ಹನಿ ನೀರು ವುಳಿಯದಂತೆ ತೊಳೆದುಕೊಂಡು ನಂತರ ಅದನ್ನು ಸೊಂಟದ ಬಾಳೆ ಕಾಯಿಯೊಳಗೆ ಮರೆಮಾಚಿಕೊಂಡು ಆತನು ರಾಜಗಾಂಭೀಯ್ಯದಿಂದ “ಯೇನುರಯಾ.. ನನ್ನನ್ನು ಹುಡುಕಿಕೊಂಡು ಯಾಕ ಬಂದೀರಪ್ಪಾ? ಯೇನಾದರೂ ರಾಜಕಾರಣ ವುಂಟೇನು” ಯಂದು ಮಂತರಾಲೋಚನೆಗೆ ನಾಂದಿ ಪಲುಕಿದನು..