ಪುಟ:ಅರಮನೆ.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

aos ಅರಮನೆ ಜೊನ್ನಗಿರಿಯೊಳಗ ರಾಜ ಪರಿವಾರದ ನಾನಾ ನಮೂನಿಯ ಮೊಳಿಗ ಮಾಡುತ್ತಿರುವಾಗ್ಗೆ..... - ಯಿತ್ತ ಕುದುರೆಡವು ಪಟ್ಟಣದೊಳಗೆ ಯಿದ್ದಂಥ ಥಳಗೇರಿಯಲ್ಲಿ ಮೋಬಯ್ಯನ ಸರೀರಕ್ಕೆ ಸಂಬಂಧಿಸಿದಂತೆ ನಾನಾ ರೀತಿವಳಗೆ ಯಿದ್ಯಮಾನಗಳು ಜರುಗಾಡುತ್ತಿದ್ದವು. ವಂದು ಹಸ್ತಕ್ಕಂಟಿಕೊಂಡಿರೋ ಬೊಟ್ಟುಗಳು ಯಾವ ರೀತಿ ಸರಿಸಮಾನವಾಗಿರುವುದಿಲ್ಲವೋ ಹಂಗೆ ಜನರ ನಂಬಿಕೆಯೂ ಯಿಯಿಧ ತೆರನಾಗಿದ್ದಿತು. ಯಲ್ಲಡಗಿ ಕೊಂಡಿರಬೌದು ತಾಯಿ? ಯಾವ ರೀತಿಯಿರಬೌದು ತಾಯಿ? ಯಿದ್ದ ಪಕ್ಷದಲ್ಲಿ ಆಕೆ ವಂದಾದರೂ ಪವಾಡ ತೋರಬೌದಿತ್ತಲ್ಲ.. ಮದಾದರೂ ಮಯ್ಕೆ ಪ್ರಕಟಮಾಡಬೌದಿತ್ತಲ್ಲ ಯಂದು ಆ ಸರೀರವನ್ನು ತಿಬ್ಬಳಿಸಿ ನೋಡುತಾ ನೋಡುತಾ ಹೊದರೊಳಗೆಂಥಾದ್ದು ಯಿದ್ದಂಗಿಲ್ಲ ಎಂದು ನಿರಾಶರಾಗಿ ಹೋಗುತಿದ್ದವರ ಮಂದಿ? ಯಿರಬೌದು ಅಥವಾ ಯಿಲ್ಲದೆಯಿರಬೌದು ತಮಗ್ಯಾಕಿದರ ವುಸಾಬರಿ ಯಂದು ದೂರ ಜರುಗುತ್ತಿದ್ದವರೆಷ್ಟೋ ಮಂದಿ? ಅರೀದ ಮಳ್ಳನಂಗಿದ್ದ ಮೋಬಯ್ಯ ಆರಂಭ ಮಾಡಿರೋ ಆಟ ಯಿದು ಯಂದು ನಗು ನಗಾಡುತ ಹೋಗುತ್ತಿದ್ದವರೆಷ್ಟೋ ಮಂದಿ? ಮೋಬಯ್ಯನ ಸರೀರದೊಳಗೆ ಮೋಬಯ್ಯ ನಷ್ಟಗೊಂಡಿದ್ದಾನ.. ಯೀತನ ಸರೀರವು ಅನೇಕ ಅಲವುಕಿಕ ಲಕ್ಷಣಗಳನ್ನು ಪ್ರಕಟಮಾಡುತ್ತಿರುವುದು. ಸಾಂಬವಿಯು ತನ ಸರೀರದೊಳಗಿನ ಯಿನ್ಯಾಸವನ್ನು ತಾನು ಪರಿಚಯ ಮಾಡಿಕೊಳ್ಳೋದರಲ್ಲಿ ಮಗ್ನಳಾಗಿದ್ದಿರಬೌದು. ಸರೀರದ ಪಂಚೇಂದ್ರಿಯಗಳೊಂದಿಗೆ ತಾಲೀಮು ನಡೆಸುತ್ತಿರಬೌದು, ಸರೀರದ ಚುಕ್ಕಾಣಿ ತಾನು ಹಿಡಿಯಲಕ ರನ್ವಂತ ಕಾಲ ಹಿಡೀತದ.. ಆಟದೊಳಗ ತಮ್ಮ ಸಮಸ್ತ ಆಸ್ತಿಕ ಭಾವವನ್ನು ಧಾರೆಯೆರೆಯಬೇಕೆಂದು ಹಪಹಪಿಸುತ್ತಿದ್ದವರೆಷ್ಟೋ ಮಂದಿ? oಾವ ಬಾವನ ಕ ಸಲ್ಲದಿದ್ದ ಅನೇಕ ಮಂದಿ ಮಾತಾಡಿಸಿಕೊಂಡುಹೋಗುತಲಿದ್ದ. ಬರಲಕಂದರ ನಮ್ಮನೆ ಯಿಲ್ಲೇನವ್ವಾ ಯಂದೆನಲುತ್ತಿದ್ದ, ಯಿರಲಕಂದರ ನಮ್ಮನೆ ಯಿರಲಿಲ್ಲೇನವಾ ಯಂದನಲುತ್ತಿದ್ದ.... ಗಂಡ ವುಂಡು ಬಿಟ್ಟೆಲೆ ತಾನು, ಗಂಡ ನಮಲಗೆದುಗುಳಿರೋ ತೊಂಬದುಂಡೆ ತಾನು, ಕರೆದಲ್ಲೆಲ್ಲ ಬರಲಕಾಗಲೀ, ಯಿರಲಕಾಗಲೀ, ಯೋಗ್ಯಳಲ್ಲ ಕನರಪ್ಪಾ.. ಲೋಕಯೇನೆಂದು ಕೊಂಡೀತು ಕನರವ್ಯಾ. ಯಿದ್ದರೆ ತಾನು ತನ್ನ ಗಂಡನ ವುಸುರಳತೆ ದೂರದಲ್ಲಿರುತೀನಿ.. ಸತ್ತರೆ ತಾನು ತನ ಗಂಡನ ಕಣ್ಣಳತೆ ದೂರದಲ್ಲಿ ಸಾಯತೀನಿ.. ತನಗೆ ಮುತ್ತಯ್ದೆ ಸಾವು ಯವತ್ತಲ್ಲ