ಪುಟ:ಅರಮನೆ.pdf/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಬೊಡ್ಡೆಗೆ ಮುತ್ತುಕೊಟ್ಟಳು, ಕಣ್ಣೀರು ಸುರಿಸಿದಳು, ವುಸ್ತಂತ ಕೂತಳು, ವಂಚೂರು ಗೆಲುವಾದಳು. ಹಸು ಮಗೀನಂಗ ಸುತ್ತಮುತ್ತ ನೋಡಿದಳು. ಅಗೋ ಅಲ್ಲಿ ತನ್ನ ಗಂಡನ ಸರೀರ, ಸಂಬಂಧ ಬಿಡುಗಡೆ ಮಾಡಿಕೊಂಡಿರೋ ಹಂಗಯ್ಯ.. ತನ್ನತ್ತ ವಂದು ಸಲನಾದರು ನೋಡುವಲ್ಲದು.. ಯೇನು ಬಂದಿದ್ದೀತು ಅದಕ? ಯೇನು ಬಡುಕೊಂಡಿರಬೌದು ಅದಕ? ಜಗಲೂರಜ್ಜ ನೋಡಿದ್ಯಾ... ಯಂದು ಆ ದಿಕ್ಕಿಗೆ ಮುಖಮಾಡಿ ಕಯ್ಕ ಮುಗುದಳು. ನಿನ್ನರುದಯ ಟೋಂದು ತಟಗಯ್ತಂತ ಗೊತ್ತಿರಲಿಲ್ಲ ಯಂದಳಾಕೆ ತನ್ನ ಗಂಡನ ಕಡೇಕ ದುರುಗುಟ್ಟಿ ನೋಡುತ್ತ.... ಅಝಗೇಡಿಯಂತಾಡುತಲಿದ್ದ ಅವಯ್ಯನು ಆಗೊಮ್ಮೆ ಯಿಗೊಮ್ಮೆ ತನ್ನ ಹೆಂಡತಿಯ ಕಡೇಕ ಒಳಕೂ ಒಳಕೂ ಅಂತ ನೋಡುತಲಿದ್ದನು. ನೀನು ಯಾರೋ? ತಾನು ಯಾರೋ? ಯಂಬಂತೆ ಯಿದ್ದನು. ಅಷ್ಟು ಬಿಟ್ಟರೆ ಅವರಿಬ್ಬರ ನಡುವೆ ಯಾವುದೇ ಮಾತಾಗಲೀ, ಕಥೆಯಾಗಲೀ ಯಿರಲಿಲ್ಲ. ಹೋಗೋರು ಬರೋರು ಯಿದಿಲಿಖಿತ ಎಂಬೊಂದು ಸಬುಧವನ್ನು ಆಡೋದು ಬಿಟ್ಟರೆ....

- ಅತ್ತ ಥಾಮಸು ಮನ್ನೇ ತನ್ನ ಮಯ್ಯೋಳಗ ಹುಳಾ.. ಹುಪ್ಪಡಿ ಹೊಕ್ಕೊಂಡು ಹರದಾಡಲು ಹತ್ತಿರುವವೇನೋ ಯಂಬಂತೆ ವಂದಲ್ಲಾ ಎಂದು ದಗದಗಳನ್ನು ಹಚಕಂಡು ಕುಂತಲ್ಲಿ ಕೂಡ್ರದೆ, ನಿಂತಲ್ಲಿ ನಿಲ್ಲದೆ ಸದಾ ಗಿಜಿಗಿಗಟ್ಟತೊಡಗಿದ್ದನು. ತನ ಕಮ್ಮಿ ಕೆಳಗಿನ ಅಧಿಕಾರಿಗಳಾದ ಅಂಥೋಣಿ, ರಾಬರು, ಯಿಲ್ಲಿಯಮ್ಮ, ಜೇಕಬ್ಯೂ ಜಾನು, ಗೀನು ಯಿವರೇ ಮೊದಲಾದವರನ್ನು ಯದುರಿಗೆ ಕುಂಡರಿಸಿಕೊಂಡು ಕುಂಪಣಿ ಸರಕಾರದ ಬಗ್ಗೆ ಜನರು ವಲವು ತೋರಿಸಬೇಕಾದರೆ ನೀವೆಲ್ಲ ಯಲ್ಲಿನ ಸ್ಥಳೀಕ ಭಾಷೆಯನ್ನು ಕಲುತುಕೊಳ್ಳಬೇಕೆಂದು ತಾಕೀತು ಮಾಡುತ್ತಿದ್ದನಲ್ಲದೆ ಅವರಿಗೆ ತೆಲುಗು, ಕನ್ನಡ ಭಾಷೆಗಳನ್ನು ಮೋದಲಕ.. ಬರೆಯಲಕ. ಕಲಿಸಲಕಂತ ಮಾಸ್ತರರನ್ನು ನೇಮಕ ಮಾಡಿ ರಾತ್ರಿಸಾಲೆಗಳನ್ನು ತೆರೆದಿದ್ದನು. ಕಲುತೋರನ್ನು ಯದುರಿಗೆ ಕರೆಯಿಸಿಕೊಂಡು ಸೊತಹ ಬಹು ಭಾಷಾ ಕೋಯಿದನಾದ ತಾನು ಪ್ರಶ್ನೆಗಳನ್ನು ಕೇಳಿ ಪರೀಕ್ಷೆ ಮಾಡುತಲಿದ್ದನು. ಜಾನಪದ ಗಾಯಕರನ್ನು ಗುರವ ಪೂರುವಕವಾಗಿ ತನ್ನ ಆಸ್ಥಾನಕ ಬರಮಾಡಿಕೊಂಡು ಹಾಡಿಸಿ, ಕುಣಿಸಿ ಸಂತೋಷಪಟ್ಟು ಮಾನ ಸನುಮಾನ ಮಾಡಿ ಕಳುವುತಲಿದ್ದನು. ಹೀಗಾಗಿ