ಪುಟ:ಅರಮನೆ.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಯಲ್ಲಾರು ನಾಲಿಗೆ ಮಾಲ ತಾನೇ ತಾನಾಗಿ ಯಿಜ್ರುಂಭಿಸ ತೊಡಗಿದ್ದನು. ಬುಕಥೆಗಳೊಳಗ, ಗೀಗೀ, ಲಾವಣಿ ಪದಗಳೊಳಗ, ಅಡುಗೂಲಜ್ಜಿ ಕಥಿಗಳೊಳಗೆ ಯಿರಾಮ ಮಾಡಿಕೊಂಡಿದ್ದ ಮನೋ ಸಾಹೇಬ.. ಅಳುವವರ ಕಣ್ಣೀರೊರೆಸಲು ಮುಂದಾಗುತಲಿದ್ದ ಮನೋ ಸಾಹೇಬ.. ಮೂಢ ನಂಬಿಕೆಗಳನ್ನು ನಿರುಮೂಲ ಮಾಡಲು ಸದಾ ಶ್ರಮಿಸುತಲಿದ್ದ ಮನೋ ಸಾಹೇಬ.. ತರತಮ ಭಾವನೆಗಳ ಯಿರುದ್ಧ ಹೋರಾಡುತಲಿದ್ದ ಮನೋ ಸಾಹೇಬ.. ಮನೋ ಸಾಹೇಬಾ........ ಸಾಹೇಬಾ....... ಅತ್ತ ಜರುಮಲಿ ರಾಜನು ತನಗೆ ಕಪ್ಪಕಾಣಿಕೆ ಸಂದಾಯ ಮಾಡಿ ಸರಣಾಗಬೇಕಂದು ಕವುಡಿಕೆ ಕರೀರನೆಂಬ ಧೂತನನ್ನು ನಿಚ್ಚಾಪುರದ ರಾಜನಲ್ಲಿಗೆ ಕಳುವಿದ್ದನಷ್ಟೆ. ಪರಮಾನಿನ ಮ್ಯಾಲ ತೊಂಬಲ ವುಗುಳಿ ಧೂತನ ತಲೆ ಬೋಳಿಸಿ ಸುಣ್ಣ ಹಚ್ಚಿ ಅರೆ ನಗ್ನನನ್ನಾಗಿ ಮಾಡಿ ವಾಪಾಸು ಕಳುವಿದ್ದ ನಿಚ್ಚಾಪುರದ ರಾಜನು ಜರಮಲಿಯೊಂದಿಗೆ ಕಾದಾಡಲಕ ತನಗೆ ಸಾವುರ ಮಂದಿ ಕಾಲಾಳನ್ನು ಬಾಡಿಗೆಗೆ ತುತ್ತಾಗಿ ಕಳುವಬೇಕೆಂದು ತನ್ನ ವಳಿತದ ಕುಂಪಣಿ ಅಧಿಕಾರಿ ಯಾದ ರೆಬೆರೋ ಯಂಬಾತನನ್ನು ವಳಗೊಳಗೆ ಕೇಳಿಕೊಂಡಿದ್ದನು. ದಿನಕ್ಕೊಂದೊತ್ತು ಸಸ್ಯಾಹಾರ, ಯರಡೊತ್ತು ಮಾವುಸಾಹಾರ, ರಾತ್ರಿ ಕುಡಿದು ಮಲಗಲಕ ಸೆರೆ ಮತ್ತು ತಲೆಗೊಂದೊಂದರಂತೆ ಅಯ್ತು ಬೆಳ್ಳಿ ರೂಪಾಯಿ ಕೊಡಬೇಕೆಂಬ ಕರಾರು ಮಾಡಿಕೊಂಡು, ಅದಕ ದಸರತ್ತು ಮಾಡಿಸಿಕೊಂಡು ಅದೇ ಪ್ರಾಂತದೊಳಗೆ ಹುಟ್ಟಿ ಬೆಳೆದಿದ್ದ ಸಾವುರ ಸಂಖ್ಯೆಯ ಕಾಲಾಳುಗಳನ್ನು ದತ್ತೂರಾಮನೆಂಬ ಮರಾಠಿ ಸರದಾರನ ನೇತ್ರುತ್ವದಲ್ಲಿ ನಿಚ್ಚಾಪುರದ ದಿಕ್ಕಿಗೆ ಹರಿಬಿಟ್ಟಿದ್ದನು. ಯಿಂಥದೇ ಮನವಿಯನ್ನು ಜರುಮಲಿ ರಾಜನು ರೆಬೆರೋ ಮಾಶಯನಿಗೆ ಮಾಡಿಕೊಂಡಿರದೆ ಯಿರಲಿಲ್ಲ. ಆತನಿಂದಲೂ ಮೊಗದಿ ಗೊತ್ತುಪಡಿಸಿ ಮುಂಗಡ ಬಾಬತ್ತು ವಸೂಲಿ ಮಾಡಿಕೊಂಡು ಅಷ್ಟೇ ಸಂಖ್ಯೆಯ ಕಾಲಾಳುಗಳನ್ನು ಜರುಮಲಿಯ ಹಾದಿಗುಂಟ ಹರಿಬಿಟ್ಟಿರದೆ ಯಿರಲಿಲ್ಲ.. ಸ್ಯಾಮುಸನ್ ಯಂಬಾತಗೆ, ವಳ್ಳಿಯಮ್ಮಯಂಬ ಕೊಂಗರ ತಾಯಿಗೆ ಹುಟ್ಟಿದ್ದಂಥ ರೆಬೆರೋ, ದ್ವಾಪರ ಕಾಲದ ಸಕುನಿಯ ಕಟ್ಟಾ ಅಭಿಮಾನಿಯಾಗಿದ್ದ ರೆಬೆರೋ ವುಭಯ ರಾಜರುಗಳಿಂದ ಸುಲ್ಕದ ರೂಪದಲ್ಲಿ ಪಡೆದಂಥಾ ಅಪಾರ ಹಣವನ್ನು ಕುಂಪಣಿ ಸರಕಾರದ ಬೊಕ್ಕಸಕ್ಕೆ ಸಂದಾಯ ಮಾಡಿ ತನ್ನ ಮೇಲಧಿಕಾರಿಗಳಿಂದ ಯಿಶೇಷ ಪ್ರಶಂಸೆಗೆ ಪಾತ್ರನಾದನು. ಅತ್ತ ಮದ್ದಿಕೇರಿ ಸಮುಸ್ಥಾನದ ಹಣಕಾಸಿನ ಪರಿಸ್ಥಿತಿ ಸತ್ರುಸಮಾರಯಾಗ