ಪುಟ:ಅರಮನೆ.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಬರೋ ಹಾದಿ ಹುಡುಕಿಕೊಡಬೇಕೆಂದು ಕೇಳಿಕೊಂಡನು. ಆಗ ಸಾಸಿಗಳು ಜೊನ್ನಗಿರಿ, ಯದ್ದುಲದೊಡ್ಡಿ, ಕರಿಯೇಮುಲ, ಸಿಂಗನಮಲ, ಯಾಡಕಿತಾಂಡ ಯವೇ ಮೊದಲಾದ ಮರುಗಳಿಂದ ಬಂದು ಆಶ್ರಯ ಪಡೆದಿರುವಂಥ ಸಾವುರಗಟಲೆ ಹೆಣ್ಣು ಗಂಡುಗಳನು ಯಿಟುಕೊಂಡು ಸಾಕುವುದು ದಂಡವೆಂದೂ, ಅವರನ್ನು ಯಿಂಥಿಂಥ ಕಡೆ, ಯಿಷ್ಟಷ್ಟಕ್ಕೆ ಯಿಲೇವಾರಿ ಮಾಡಿ ಧನವಂತನಾಗಬೇಕೆಂದೂ ಸಲಹೆ ನೀಡಿದರು. ಅದು ನಾಯಕನಿಗೆ ತುಂಬಾ ಹಿಡಿಸಿತು. ತನ್ನಲ್ಲಿದ್ದ ಸಂತರಸ್ತ ಮಂದಿಯಲ್ಲಿ ಹೆಣ್ಣಾಳೆಷ್ಟು ಸಂಖ್ಯೆ ಲಿದ್ದಾರೆ? ಗಂಡಾಳು ಯಷ್ಟು ಸಂಖ್ಯೆಯಲ್ಲಿದ್ದಾರೆ? ಅವರವರ ವಯಸ್ಸು, ತೂಕ ಯಿತ್ಯಾದಿ ಯಿವರಗಳನ್ನು ಗುಟ್ಟಾಗಿ ಸಂಗ್ರಹಿಸಿದನು. ದೂತರನ್ನು ಕಳಿಸಿ ಸುತ್ತನ್ನಾಕಡೇಲಿಂದ ಶ್ರೀಮಂತ ರನ್ನೂ, ಕುಂಪಣಿ ಸರಕಾರದ ಅಧಿಕಾರಿಗಳನ್ನೂ ಫಲನಾ ದಿವಸದಂದು ಮದ್ದಿಕೇರಿಗೆ ಬರಮಾಡಿ ಕೊಂಡನು. ವಯಸ್ಸು, ಬಣ್ಣ, ಅಗಲೆತ್ತರದ ಆಧಾರದ ಮ್ಯಾಲ ಯಿಂಥಿಂಥೋರ ಮುಖ ಬೆಲೆ ಯಿಷಿಷ್ಟೆಂದೂ, ಸೇಕಡಾ ಹತ್ತರಷ್ಟು ಭಾಗವನ್ನು ನೋಡಿ ಬಿಡುವುದಾಗಿಯೂ ಹೇಳಿ ಜೀವಂತ ಸರಕುಗಳನ್ನು ತೋರಿಸಿದನು. ಅತಿಥಿಗಳು ತಮ್ಮ ತಮ್ಮ ಯೋಗ್ಯತೆ, ಅಭಿರುಚಿ, ಅಂತಸ್ತು ಪ್ರಕಾರ ಯಿಂಥಿಂಥೋರು ತಮಗೆ ಬೇಕೆಂದು ಹೇಳಿ ಮುಂಗಡ ಕೊಟ್ಟರು. ಫಲಾನ ದಿವಸ ನಿಮ್ಮ ನಿಮ್ಮ ಸರಕುಗಳನ್ನು ನಿಮ ನಿಮಗೆ ತಲುಪಿಸುವುದಾಗಿ ಹೇಳಿದ್ದಲ್ಲದೆ ಚೆನ್ನಾಗಿ ನೋಡಿಕೊಳ್ಳಬೇಕೆಂದೂ ಕಳಕಳಿಯಿಂದ ಕೇಳಿಕೊಂಡನು. ಅವರೆಲ್ಲ ಅತ್ತ ಹೋದ ನಂತರ ಬಿಕರಿಗೊಂಡಿದ್ದಂಥ ಹೆಣ್ಣಾಳು ಗಂಡಾಳುಗಳಿಗೆ ವುಡಲಕ ಕೊಡುತ, ತಿಂಬಲಕ ನೀಡುತ ನೀವೆಲ್ಲ ನನಗೆ ಮಕ್ಕಳಿದ್ದಂಗೆ.. ಯಂದು ಹೇಳುತ ಗದ್ಗದಿತನಾಗಿ ಕಣ್ಣಲ್ಲಿ ನೀರು ತಂದುಕೊಂಡನು. ಆಗ ಪಕ್ಕದಲ್ಲಿದ್ದ ಸಾಸ್ತ್ರಿಗಳು ತಮ್ಮ ಕಂಕುಳಿಂದ ಹೊರತೆಗೆದ ಹೊತ್ತಿಗೆಯು ಮನುಸೃತಿ ಆಗಿತ್ತು. ಅದರೊಂದಿಗೆ ಶ್ರೀ ಕುಷ್ಟ ಪ್ರಣೀತ ಭಗವದ್ಗೀತೆಯೂ ಆಲಾಪನ ಮಾಡುತಲಿತ್ತು. ಯಿತ್ತ ಕುದುರೆಡವು ಪಟ್ಟಣದೊಳಗೆ ಹಗಲು ಪಾವಲಿ ಭಾಗ, ಯಿರುಳು ಮೂರು ಪಾವಲಿ ಭಾಗ, ಯಿರುಳಿಗೆ ಹೊಸ ಕಳೆ ಬಂದಿತ್ತು. ಸೂರ ಹುಟ್ಟಿದಾಗ ವಂದ ನಮೂನಿ ಯಿರುಳು. ಮುಳುಗಿದಾಗ ಯಿನ್ನೊಂದು ನಮೂನಿ ಯಿರುಳು.. ಕಣ್ಣು ತೆರಕೊಂಡರೂ ವಂದೇ... ಕಣ್ಣು ಮುಚ್ಚಿಕೊಂಡರೂ ವಂದೆಯಾ.. ಗಂಡ ಸೇರದ ಹೆಣ್ಣು ಗುಂಡುಕಲ್ಲಿಗೆ ಸಮವಂತೆ. ಸದರಿ ಪಟ್ಟಣದೊಳಗೆ ತನ್ನ ಕಷ್ಟ ಕೇಳುವವರಿಲ್ಲ, ಸಮಾಧಾನ ಹೇಳುವವರಿಲ್ಲ. ಗಂಡ ಹೆಂಡರನು ಎಂದು