ಪುಟ:ಅರಮನೆ.pdf/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೬೫ ಮೊದಲು ತೆರನ ಕೊಡು ಕೊಳ್ಳೋದು ಕದ್ದು ಮುಚ್ಚಿ ನಡೆಯುತಲಿದ್ದುದು ಥಾಮಸು ಮನೋನ ಅಮೇರೆಗೆ, ಯಡ್ಡವರನು ಸದರಿ ಪಟ್ಟಣದ ಚರಾಸ್ತಿಯನ್ನು ಮುಟ್ಟುಗೋಲು ಹಾಕಿದ್ದಲ್ಲದೆ ಸ್ಥಿರಾಸ್ತಿಯ ವುತ್ಪನ್ನವನ್ನು ಸ್ಥಗಿತ ಗೊಳಿಸಿದ ಲಗಾಯ್ತು ಅಂದರೆ ದೀಡುವರುಷಗಳಿಂದ ರಾಜಾರೋಷವಾಗಿ ನಡೆಯುತ್ತಿರುವುದು. ರಾಜಮಾತೆ ಭಮ್ರಮಾಂಬೆಯು ತಮ್ಮ ಅರಮನೆಯ ಹಳೆಪಳೆಯ ವಸ್ತುಗಳ ಕಳ್ಳ ಸಾಗಾಣಿಕೆ ತಡೆಯುವ ಸಲುವಾಗಿ ಅವರ ಆಗಮನ ನಿರಗಮನದ ಮ್ಯಾಲ ನಿರುಬಂಧ ಹೇರಿ ಯಿಫಲ ಳಾಗಿರುವುದೂ ವುಂಟು. ಅರಸೊ. ಭಕೊಂಡಿರುವ ಅರಮನೆಯೂ ವಂದೆ, ಹಲ್ಲು ಕಳಕೊಂಡಿ ರುವ ರುದ್ದ ಕಾಳಿಂಗ ಸರುಪಮವಂದೆ. ತನಗೆ ಅಂಜುವವರೂ ಯಿಲ್ಲದೆ, ಅಳುಕುವವರೂ ಯಿಲ್ಲದೆ ಅರಮನೆಯೆಂಬುದು ಪಟ್ಟಣದ ಮಂದಿಗೆ ಆಟದ ಆಟಿಗೆಯಾಗಿ ಬಿಟ್ಟಿರುವುದು. ನಗೆಪಾಟಲಾಗಿ ಬಿಟ್ಟಿರುವುದು. ಅರಮನೆಯನ್ನು ಅಣಕಿಸಲೆಂದೇ ಯಸಲೆ, ಬಿಸಲೆ ಬಂದು ತಮಗೆ ಬೇಕು ಬೇಕಾದ್ದನ್ನು ಖರೀದಿಸಿಕೊಂಡು ಹೋಗುತ್ತಿರುವುದು. ತಾವು ಯಂಥ ನಿರಭಯರು ಯಂದು ಸಾಧಿಸಿ ತೋರಿಸಲಿಕ್ಕೆಂದೇ ಹೇಗ್ಗೆ ಸೋಲುಪ ಹೊತ್ತಿನ ಹಿಂದೆಯಷ್ಟೆ ಅರಮನೆಯಂ ಮೊಕ್ಕು, ರಾಜ ಪರಿವಾರದವರ ಕ್ಷೇಮ ಲಾಭ ಯಿಚಾರಿಸಿ ಹಿಡಿಯೋರಿಲ್ಲದೆ ಬಿಕೋಯನ್ನು ತಲಿದ್ದ ಪಿಕದಾನಿಯನ್ನು ಮತ್ತೆ ಪರೀಕ್ಷಿಸಿ, ಯದನ್ನು ಮಾರಾಟ ಮಾಡುವಿರಾ ಯಂದು ಕೇಳಿ ಯಬಡಾ ದಬಡಾ ಬಯಿಸಿಕೊಂಡು ಸಾಗಾಣಿಕೆಗೆ ಅನುಕೂಲವಾಗುವಷ್ಟು ಚಿಕ್ಕದಿದ್ದಲ್ಲಿ ಯದನ್ನೂ ಖರೀದಿಸಿ ಕುದುರೆ ಮಾಲಿಟ್ಟುಕೊಂಡು ಹೋಗಬಹುದಿತ್ತಲ್ಲ ಎಂದು ಆಸೆಗಣ್ಣಿಂದ ಅರಮನೆಯನ್ನು ಯಿಯಿಧ ಕೋನಗಳಿಂದ ನೋಡುತ ಸದರೀ ತಿರುಪಾಲಯ್ಯನ ಮನೆಗೆ ಅದೇ ತಾನೆ ಬಂದಿದ್ದರು. ಕಾಲ ಸುಮಾರು ಯಂಬ ಕಾರಣದಿಂದ ಶ್ರೇಷಿ«ಯು ವಳಗಿದ್ದನಷ್ಟೆ ಶ್ರೇಷಿ«ಯ ಮಕ್ಕಳಾದ ಪಾಂಡು,ಗೋವರನರು ಅವರನ್ನು ಸ್ವಾಗತಿಸಿ ವುಚಿತಾಸನದಲ್ಲಿ ಕುಳ್ಳಿರಿಸಿ ಲಿಂಬೆರಸ ಮಿಶ್ರಿತ ಬೆಲ್ಲದ ನೀರನ್ನು ನೀಡಿ ಸತ್ಕರಿಸಿದರು. ಆಳುಗಳಾದ ಯಿಂದರವ್ವ ಚಂದರವ್ವರಿಗೆ (ಯಿವರಿಬ್ಬರ ಮೂಲ ಹೆಸರು ಕಟಂಬಲವ್ವ ಚುಚುಗವ್ವ... ತಮ್ಮ ಮನೆಯ ವರಸ್ಸನ್ನು ಕಾಪಾಡಲೋಸುಗ ಶ್ರೇಷಿ«ಯು ಯಿವರಿಗೆ ಮರು ನಾಮಕರಣ ಮಾಡಿಟ್ಟುಕೊಂಡಿದ್ದನು) ಗಾಳಿ ಬೀಸಲು ಹೇಳಿ ತಮ್ಮ ತಂದೆಯನ್ನು ಕರೆ ತರುವ ನಿಮಿತ್ತ ವಳಗೆ ಹೋದರು. ಕುಂತು ಕುಂತಂತೆಯೇ ಪರಂಗಿ ಮಂದಿಯ ಕಣ್ಣುಗಳು ಪ್ರತಿಯೊಬ್ಬರನ್ನು