ಪುಟ:ಅರಮನೆ.pdf/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಮುಟು ಮುಟ್ಟಿ ಬಂದು ಬೆವರಿನ ಸಹಿತ ವರದಿ ಮಾಡುತಲಿದ್ದವು. ತಮಗೆ ಮಾಂತರಿಕ ಸಗುತಿಯಿದ್ದಲ್ಲಿ ಯೀ ಪಟ್ಟಣದ ಮಂದಿಯನ್ನು ಪುಟ ಪಟ್ಟ ಗೊಂಬಿಗಳನ್ನಾಗಿ ಮಾಡಬೌದಿತ್ತಲ್ಲ.. ಬೆವರು ವಾಸನೆ ಸಹಿತ ಯಿವರನ್ನು ತಮ್ಮ ಗ್ರೇಟು ಬ್ರಿಟನ್ನಿಗೋ, ಪ್ರಾನ್ಸಿಗೋ ಸಾಗಾಣಿಕೆ ಮಾಡಿ ಅಪಾರ ಹಣ ಸಂಪಾದಿಸ ಬಹುದಿತ್ತಲ್ಲ... ಮಾಂಚೆಸ್ಟರಿನ ಪ್ರಸಿದ್ದ ಪ್ರಾಚ್ಯ ವಸ್ತು ಸಂಗ್ರಹಕಾರನಾದ ಸರ್‌ಕಿಸ್ಕೋಪರನು ಯಿಂಡಿಯಾದಿಂದ ವಂದು ಸಿಲಿಂಡರಷ್ಟಾದರೂ ಬೆವರಿನ ವಾಸನೆಯನ್ನು ತನಗೆ ರಫ್ತು ಮಾಡಬೇಕೆಂದು ಕಳಿಸಿದ್ದ ಸಂದೇಶವನ್ನು ಅವರಿಬ್ಬರು ಮತ ಮತ್ತೆ ಗ್ಯಾಪಿಸಿಕೊಂಡರು. ಯಸಿಯು ಯಿಂದರವ್ವನ ಮಯ್ಯಂದಲೂ, ಬಿಸಲೆಯು ಚಂದರವ್ವನ ಮಯ್ಯಂದಲೂ ಹೊರಹೊಮ್ಮುತಲಿದ್ದ ಬೆವರಿನ ಕಾಕು ಪರಿಮಳವನ್ನು ಆಘ್ರಾಣಿಸುತ ಅಮಲೇರಿರುವಾಗ್ಗೆ, ತಮ್ಮ ತಮ್ಮ ಕಯ್ದಿರೋ ವಸ್ತುಗಳಿಗೆ ಬೇಡಿಕೆ ಬರಬೌದೆಂದು ಕೆಲಮಂದಿಯು ಅಲ್ಲಲ್ಲಿ ನಿಂತು ಕಾಯುತಿರುವಾಗ್ಗೆ, ಬಾಲಕಿಯೋವ್ವಳು ತನ ಯಡಗಯ್ಯ ಹೆಬ್ಬೊಟ್ಟನ್ನು ಬಾಯೊಳಗಿಟುಕೊಂಡು ಜಿಬುಕುತಿರುವಾಗ್ಗೆ, ತಾಯೋಲ್ವಳ ಕಂಕುಳಲ್ಲಿದ್ದ ಹಸುಗೂಸು ಹಾಲು ತುಂಬಿದ ಮೊಲೆಗಾಗಿ ಹುಡುಕಾಟ ನಡೆಸಿರುವಾಗ್ಗೆ ಬಾಲಕನೋವ್ವನ ಮೂಗಲ್ಲಿ ಸಿಂಬಳಗೊಣ್ಣೆಯೇರು ತಿಳಿಯುತ್ತಿರುವಾಗ್ಗೆ ಸೂರ ತನ್ನ ತೀಕ್ಷಗಣ್ಣಿಂದ ಗಾರೆಮನೆಯ ಯಿದ್ಯಾಮಾನಗಳನ್ನು ಗಮನಿಸುತಿರುವಾಗ್ಗೆ ತನ್ನನ್ನು ಖರೀದಿಸಿದರೆ ಕಷ್ಟ ಯಂದು ಭಾವಿಸಿ ಗಾಳಿಯು ಅಲ್ಲಿಂದ ಪರಾರಿಯಾಗಿರುವಾಗ್ಗೆ ಕತ್ತಲೆಮೂಟೆಯಂಥಾಕ್ರುತಿಯೊಂದು 'ಯೆಡುಕೊಂಡಲವಾಡಾs ಯೇಡುಕೊಂಡಲವಾಡಾ' ಯಂದನಕಂತ ಪಂಚಲೋಹದ ತಗಡುಗಳನ್ನು ಬಡಿದಿದ್ದ ಹೊಸ್ತಿಲನ್ನು ದಾಟಿ ನವನೀತ ದಂತಿಚೆ ಕಾಣಿಸಿಕೊಂಡು 'ಹೋಹೋ ಯಪ್ಪುಡು ವಚ್ಚಿತಿರಿ.. ಪ್ಲಾ.. ಪ್ಲಾ.. ಯಪ್ಪುಡು ವಚ್ಚಿತಿರಿ” ಯಂದು ಅವರನ್ನು ತಗಲಿಕಂತು. ಅವರ ಹಸ್ತಲಾಘವ ಮಾಡಿತು.. ಗವುರವ ಪೂರಕವಾಗಿ ಮನೆ ವಳಗಡೆ ಕರೆದೊಯ್ದಿತು. ವುಂಬಲಕ ಕೊಟ್ಟಿತು, ಕುಡಿಯಲಕ ಕೊಟ್ಟಿತು, ಯಂಜಲಗಮ್ಮ ಬಾಯ್ಕ ವರಸಿಗಂಬಲಕ ಕೊಟ್ಟಿತು. ತನ್ನ ಸರೀರದ ವಝನ ತಿಂಗಳೊಪ್ಪತ್ತಿನಲ್ಲಿ ವಂದು ಮಣ ಹೆಚ್ಚಾಗಯ್ತಿ ಯಂಬ ಕಾರಣಕ, ಯೇರಿದರೆ ಮಾಡು ತಡಕಳ್ಳಲ್ಲ ಯಂಬ ಕಾರಣಕ ಮಕ್ಕಳ ಕಯ್ಲಿಂದ ಮುಪ್ಪರಿಗೆ ಮ್ಯಾಲಿದ್ದುದನ್ನು ಕೆಳಗಡೆ ತರಿಸಿಕಂತು.. ವಂದೊಂದು ವಸ್ತುವನ್ನು ಅವರ ಮುಂದೆ ಹರಡಿತು.. ಅದು ಹಾಂಗ ಹರಡಿದ ವಸ್ತುಗಳು ಕೇವಲ ಸದರಿ ಪಟ್ಟಣದ