ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೧೭ ದಂತೆ ನನ್ನ ಕಥೆಯನ್ನು ಹೇಳಿರುವೆನು, ಎಂದು ಹೇಳಲು ಜೋಬದಿ ಯು, ಸಾಕು. ಇನ್ನು ನಿನ್ನಿಷ್ಟಾನುಸಾರವಾಗಿ, ಎಲ್ಲಿಗೆ ಬೇಕಾದರೂ, ಹೋಗಬಹುದೆಂದಳು, ಆತನು ಅಮಾ ! ಈ ಸಮಾಜದಲ್ಲಿ ಇನ್ನಿಬ್ಬರು ಕಾಲೆಂಡರು ಗಳೂ, ಉಳಿದವರ ಕಥೆಯನ್ನು ಹೇಳುವುದಕ್ಕೆ ಮೊದಲು ನಾನು ಹರಟುಹೋಗುವುದು ನ್ಯಾಯವಲ್ಲವಾದುದರಿಂದ, ಅದುವರೆಗೂ ನಾನಿಲ್ಲಿ ಯ ಇರುವಂತೆ ಅಪ್ಪಣೆಮೂಡಬೇಕೆಂದು ಬೇಡಿಕೊಂಡನು. ಪ್ರಹರಜೆ ದಿಯು, ಸುಲ್ತಾನನನ್ನು ನೋಡಿ, ರಾಜನೇ ! ಬೆಳಗಾಗಿಹೋದುದರಿಂದ, ಎರಡನೆ ಸನ್ಯಾಸಿಯಕಥೆಯನ್ನು ಹೇಳುವುದಕ್ಕೆ ಅಡ್ಡಿಯಾಯಿತು. ತಾವು ದಯಮಾಡಿದರೆ ಮಾದಲಿಗಿಂತಲೂ, ವಿನೋದಕರವಾಗಿರುವ ಈ ಕಥೆಯ ನ್ನು ನಾಳೆಯದಿನ ರಾತಿ ಗೆ ಹೇಳುವೆನೆಂದು, ನುಡಿಯಲು, ಸುಲ್ತಾನನು ಅದಕ್ಕೊಪ್ಪಿಕೊಂಡು, ಯಾವಮಾತನ್ನೂ ಆಡದೆ ಹೊರಟು ಹೋದನು, ೪೦ ನೆಯ ರಾತ್ರಿ ಕಥೆ ಮಾದಲಿನ ಕಾಲೆಂಡರ ಕಥೆಗಿಂತಲೂ, ಎರಡನೆಯ ಕಾಲೆಂಡರಿನ ಕಥೆಯು ಇನ್ನೂ ಮನೋಹರವಾಗಿರಬಹುದೆಂದುಕೊಂಡು, ದಿನರಜಾದಿ, ಹೊತ್ತಿಗೆಮುಂಚೆ ಸುಲ್ಲಾನನ್ನು ಎಚ್ಚರಗೊಳಿಸಿ, ಅಕ್ಕಾ ! ನಿನಗೆ ಎಚ್ಚರಿಕೆಯುಂಟಾಗಿದ್ದರೆ ಎರಡನೆ ಕಾಲೆಂಡರಿನ ಕಥೆಯನ್ನು ಹೇಳಬೇ ಕೆಂದು ಕೇಳಿಕೊಳ್ಳುವೆನೆಂದಳು. ಸಹರಜಾದಿಯು, ಸುಲ್ತಾನನನ್ನು ನೋಡಿ, ಸ್ವಾಮಿಾ ! ಮಾದಲಿನ ಕಾಲೆಂಡರಿನ ಕಥೆಯನ್ನು ಕೇಳಿ ಅಜ್ಜಿದ ವರೆಲ್ಲರೂ ಅತ್ಯಾಶ್ರ್ಯ ವನ್ನು ಹೊಂದಿದರು. ಕಲೀಫರಾದರೆ ಅದ ರಿಂದುಂಟಾದ ಆನಂದದಿಂದ ಕತ್ತಿಯನ್ನು ಹಿಡಿದುಕೊಂಡು, ನಿಂತು ಇರು ವ ಕಿಂಕರರನ್ನು ಲಕ್ಷಡದೆ ತನ್ನ ಮಂತ್ರಿ ಯಸಂಗಡ ಹೀಗೆಂದು ತನಾಡುತ್ತಾ ಇದ್ದರು. ನಾವು ಬಹುವಿಚಿತ್ರ ವಾದ ಕಥೆಗಳನ್ನು ಕೇಳಿ ರುವೆನು. ಆದರೂ ಈ ಕಾಲೆಂಡರಿನ ಕಥೆಗೆ ಸಮನವಾದುದು ಯಾವು ದೂ ಇಲ್ಲ ಎಂದುಕೊಂಡಾಡಿದನು, ಎರಡನೆ ಕಾಲೆಂಡರು ಜೋಬದಿಯ ನ್ನು ನೋಡಿ, ತನ್ನ ಕಥೆಯನ್ನು ಹೇಳಲಾರಂಭಿಸಿದನು.