ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ವಿನೋದ, ಎಂಬ ಆ ಕಾಲದಲ್ಲಿ ನನ್ನ ಮನಸ್ಸು ಹೇಗಿದ್ದಿತೋ ಅದನ್ನು ನೀವೇ ಯಾಚಿಸಿ, ಆ ಬಾಲಕರು ನನ್ನನ್ನು ನೋಡಿ, ನೀನು ಯಾವಮೂತನ್ನ ಆಡದೆ ಸುಮ್ಮನೆ ನೋಡುತ್ತಿರೆಂದು, ಹೇಳಿದ್ದರೂ, ನಾನು ಹೇಗಾದರೂ ಪ್ರಶ್ನೆ ಮೂಡಬೇಕೆಂದು ಯೋಚಿಸುತ್ತಾ ರಾತ್ರಿಯಲ್ಲಿ ರಪ್ಪ ಹಾಕದೆ ನೋ ಡುತ್ತಾ ಇದ್ದೆನು, * ಮರುದಿನಬೆಳಿಗ್ಗೆ ನಾವೆಲ್ಲರೂ ಹೊರಗೆ ಹೊರಡುವಾಗ ನಾನು ಅವರುಗಳನ್ನು ನೋಡಿ, ಎಲೈ ದೊಡ್ಡವನುಷ್ಯರಿರಾ ! ನಿನ್ನೆಯದಿನ ರಾತ್ರಿ ನಾನು ನಿಮ್ಮಗಳ ಆಜ್ಞಾನುಸಾರವಾಗಿ ನಡೆದುಕೊಂಡಂತೆ, ಈಗ ನಡೆದುಕೊಳ್ಳಲಾರೆನೆಂದು, ನಿಮ್ಮನ್ನು ನಾ ರ್ಥಿಸುತ್ತಿರುವನಾದುದರಿಂದ, ಕ್ಷಮಿಸಬೇಕು. ನೀವುಗಳಾದರೆ ಯುಕ್ತಿವಂತರು, ವಿವೇಕಶಾಲಿಗಳು, ಇದಾವ ಸಂದೇಹವೂ ಇಲ್ಲ. ಆದರೂ, ನೀವು ಹುಚ್ಚರುಮೂಡುವ ಕೆಲಸವನ್ನು ಮೂಡುತ್ತಿರುವುದನ್ನು ಕಂಡು ಆಶ್ಚರ್ಯವನ್ನು ಹೊಂದಿ ದೆನು. ನೀವು ಏತಕ್ಕಾಗಿ ಮುಖಕ್ಕೆ ಮಸಿಯನ್ನು ಬಳಿದುಕೊಂಡು, ಕು ಇದಿರಿ. ಮತ್ತು ನಿಮ್ಮ ಕಣ್ಣುಗಳು ಕುರುಡಾಗಿರುವುದಕ್ಕೆ ಕಾರಣವೇ ನೆಂಬುದನ್ನು ನಾನು ಕೇಳದೆ ಸುಮ್ಮನಿರಲಾರೆನು, ಇವುಗಳೆಲ್ಲಕ, ಏನೋ ಪಿದು ಆಪರ್ಯಕರವಾದ ಕರಣವಿರಬಹುದು, ಅದನ್ನು ತಾವು ದಯಮಡಿ ನನಗೆ ತಿಳಿಸಬೇಕೆಂದು ನಾನುಬೇಡಿಕೊಳ್ಳಲು, ಅವರು ನನ್ನ ನ್ನು ನೋಡಿ, ನೀನು ಇಂತಹ ಪ್ರಶ್ನೆಯನ್ನು ಕೇಳಬಾರದು. ಬಾಯಿ ಮುಚ್ಚು ಎಂದು ಹೇಳಿದರು. ಅಮ್ಮ ನಾನು ಸುಮ್ಮನಿರಲಾರದೆ, ಅಯಾ! ನಿಮ್ಮ ಕಣ್ಣುಗಳು ಕುರುಡಾಗುವುದಕ್ಕೆ ಕಾರಣವನ್ನಾದರೂ ಹೇಳಿ, ಇಲ್ಲವಾದರೆ ನನ್ನ ರಾಜ್ಯಕ್ಕೆ ಹೋಗುವುದಕ್ಕೆ ಮೊರ್ಗವನ್ನು ತೋರಿಸಿ. ನಾನು ಇಂತಹ ಭಯಂಕರವಾದ ಸಂಗತಿಯನ್ನು ಸದಾ ನೊ ಡುತ್ತಾ ಇರಲಾರೆನೆಂದು ಹೇಳಲು, ಎಲ್ಲರೂ ಸುಮ್ಮನಿದ್ದರು. ಅವರಿಬ್ಬನು, ನನ್ನನ್ನು ನೋಡಿ, ಸ್ನೇಹಿತನೇ ನೀನು ಹೀಗೆ ಹಟವನ್ನು ಹಿಡಿದು ಮೂತನಾಡಬಾರದು. ನಿನಗೆ ಕ್ಷೇಮವುಂಟಾಗು ವುದಕ್ಕಾಗಿ, ನಾವು ಮೂತನಾಡದೆ ಇರುವವು. ಆದುದರಿಂದ ಸುಮ್ಮನಿರು ಎಂದು ಹೇಳಿದನು. ಆದರೂ ನಾನು ನನಗೆ ಏನಾದರೂಗೆರಿಯೇ ಈ ವಿವ ಯಗಳಿಗೆ ಕಾರಣವನ್ನು ಹೇಳಿಯೇ ತೀರಬೇಕೆಂದು ಕೇಳಲು, ಆತನು ( 6