ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ಅ೧೧ ಕೇಳಬೇಡ, ನೀನು ಕಣ್ಣಾರನೋಡಿ, ತಿಳಿದುಕೊಂಡು, ಪ್ರತಿಯಾಗಿ ಸಂ ತೋಷ ಪಡಬೇಕಾಗಿರುವುದೆಂಬ, ಅಪೇಕ್ಷೆಯನ್ನು ತೊರೆದುಬಿಡು ಎನಲು ಆ ಮುದುಕನು ಸ್ವಲ್ಪ ಹೊತ್ತು ಅಲೆ ಕುಳಿತುಕೊಂಡಿದ್ದು, ಬಳಿಕ ಹೊರಗೆಬಂದು, ಪುನಹ ಭೋಜನಪದಾರ್ಥಗಳನ್ನು ತೆಗೆದುಕೊಂಡುಬಂದು ಎಲ್ಲರಿಗೂ, ಭೋಜನಕ್ಕೆ ಬಡಿಸಿ, ಬಳಿಕ ನನಗೂ ಅನ್ನವನ್ನಿಟ್ಟನು. ನಾನು ಎಲ್ಲರಂತೆಯೇ ಊಟಮೂಡಿದಬಳಿಕ ಮುದುಕನು ಒಂದು ಬಟ್ಟಲಲ್ಲಿ ಸ್ವಲ್ಪ ಸಾರಾಯಿಯನ್ನು ತೆಗೆದುಕೊಂಡುಬಂದನು. ನನ್ನ ಚ ರಿತೆ ಯು, ಬಹು ವಿನೋದವಾಗಿರಬಹುದೆಂದು, ಅವರು ಊಟಮೂಡಿದ ಬಳಿಕ ಹೇಳಬೇಕೆಂದು ಪುನಹ ನನ್ನನ್ನು ಕೇಳಿದರು. ಆದುದರಿಂದ ಬಹ ಳ ಹೊತ್ತಿನವರೆಗೂ, ಮೂತನಾಡತಕ್ಕೆ ಪ್ರಸಕ್ತಿಯುಂಟಾಗಿತ್ತು. ಆದರೆ ಕಾಲಾನುಸಾರವಾಗಿ ಆ ಮುದುಕನು, ಅವರುಗಳನ್ನು ನೋಡಿ, ಅಯ್ಯಾ! ಈಗ ಮಲಗಿಕೊಳ್ಳುವ ಸಮಯವಾಗಿರುವುದು. ಆದುದರಿಂದ ನಾವುಗಳು ನನ್ನ ಹಗೆಯನ್ನು ತೀರಿಸಿಕೊಳ್ಳುವುದಕ್ಕೆ ತಜ್ಞ ಪದಾರ್ಥವನ್ನು ತರದೆ, ಹೋದೆವಲ್ಲಾ ! ಎಂದುಹೇಳಲು, ಅವರಿಬ್ಬನು ಕೂಡಲೆ ಒಂದು ಠಡಿಗೆ ಹೋಗಿ, ಹತ್ತು ತಟ್ಟೆಗಳನ್ನು ತೆಗೆದುಕೊಂಡು ಪ್ರತಿ ಒಂದುಬಟ್ಟ ಶಿಗ, ಒಂದೊಂದು, ಮೇಣದಬತ್ತಿಯ ದೀಪವನ್ನು ಇಟ್ಟುಕೊಂಡು, ಅವರೆದುರಿಗೆ ತಂದಿಟ್ಟನು. ಆ ತಟ್ಟಿಗಳು ನೀಲವಸ್ಯದಿಂದ ಮುಚ್ ಲ್ಪಟ್ಟತ್ತು. ಅದರ ಮುಸುಕನ್ನು ತೆರೆದು ನೋಡಲಾಗಿ ಅದರಲ್ಲಿ ಬೂದಿ ಯಾ, ಇದಲು, ತುಂಬ ಇದ್ದುದರಿಂದ ನೋಡಿದ ಕೂಡಲೆ, ಭಯಂಕರ ವಾಗಿರುತ್ತಿದ್ದಿತು. ಬಳಿಕ ಅವರುಗಳೆಲ್ಲರೂ, ಆ ಮಸಿಯನ್ನು ಮೈಗೆ ತೊಡೆದುಕೊಂಡು, ಎದೆಯಮೇಲೂ, ಬಾಯಿಮೇಲೂ, ಹೊಡೆದುಕೊಳ್ಳು ತ್ರ ನಾವು ಅಜಾಗರೂಕರಾಗಿ ಮೂಡಿದ ಕಾಮುಕತಕ್ಕೆ ಇದೇ ಫಲವಂ ದು ಹಂಬಲಿಸಿಕೊಂಡು ಅಳುತ್ತಿದ್ದರು. ಹೀಗೆ ಅವರು ವ್ಯಸನವನ್ನು ಹೊಂದಿದಮೇಲೆ ಆ ಮುದುಕನು ಒುದುಗಾತ್ರ ಯಲ್ಲಿ ನೀರನ್ನು ತಂದುಕೊ ಡಲು, ಎಲ್ಲರೂ ಮುಖವನ್ನು ಕೈ ಕಾಲುಗಳನ್ನೂ, ತೊಳೆದುಕೊಂಡು, ತಂತಮ್ಮ ಬಟ್ಟೆಗಳನ್ನು ತೆಗೆದುಹಾಕಿ, ಬೇರೆ ಬಟ್ಟೆಗಳನ್ನು ಹಾಕಿಕೊ೦ ಡು, ಲಾವಕೆಲಸವನ್ನು ಪದವರಂತೆ ಕಾಣಿಸಿಕೊಳ್ಳುತ್ತಿದ್ದರು. 2