ವಿಷಯಕ್ಕೆ ಹೋಗು

ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿಯನ್ ನೈಟ್ಸ್ ಕಥೆಗಳು, ಕಿನು ನನ್ನನ್ನು ಕುರಿತು, ಅಯಾ ! ಈ ಮಾಟೆಗಳು ಚಾಗದಾದು ಸ ಟ್ಟಣದ ವರ್ತಕನಾದ ಸಿಂದುವಾದನೆಂಬುವನದು. ನಾನು ಆತನ ಸಹ ಹಡಗಿನಲ್ಲಿ ಪ್ರಯಾಣಮೂಡುತ್ತಾ, ಒಂದಾನೊಂದು ದಿನ ನೀರಿನಮೇಲೆ ಸಿದೆ | ಹೋಗುತ್ತಿದ್ದ ಒಂದು ದೊಡ್ಡ ವಿಾನನ್ನು ನೋಡಿ, ಅದೊಂದು ದೀಪವೆಂದು ತಿಳಿದು, ಆ ಸ್ಥಳದಲ್ಲಿ ಹಡಗನ್ನು ನಿಲ್ಲಿಸಿ, ಅಡಿಗೆ ಮೂಡು ವುದಕ್ಕಾಗಿ ಬೆಂಕಿಯನ್ನು ಹೊತ್ತಿಸಿ, ಇಡುತ್ತಿದ್ದರು. ಆಗ ಆ ಮೀನು ಉರಿಯ ಸಕಯನ್ನು ತಾಳಲಾರದೆ, ನೀರಿನಲ್ಲಿ ಮುಳುಗಿ ಹೋಯಿತು. ಆ ಕಾಲದಲ್ಲಿ ಅನೇಕಾನೇಕರು, ಸತ್ತುಹೋದರು. ಹಾಗೆ ಸತ್ತುಹೋದ ವರಲ್ಲಿ ಒಂದುಬಾದನೊಬ್ಬನಾಗಿದ್ದನು. ಆದುದರಿಂದ ಈ ಮೂಟೆಗಳನ್ನು ಮರಿ, ಬಂದಹಣದಲ್ಲಿ ವ್ಯಾಪಾರವೂಡುತ್ತಾ, ಆತನ ವಂಶಸ್ಥರನ್ನು ಗೊತ್ತುಮೂಡಿ, ಲಾಭವನ್ನು ಕೊಡಬೇಕೆಂದಿರುವೆನು. ಎಂದು ಹೇಳಲು ನಾನು ಆ ಹಡಗಿನ ಸರದಾರನನ್ನು ಕುರಿತು, ಆಯಾ ! ನೀನು ಸತ್ತು ಹದನೆಂದು ಹೇಳಿದ ಸಿದುಬಾದನೇ ನಾನು, ಈ ಮೂಟೆಗಳ ಸಹ ನನ್ನದೇ ಎಂದು ಹೇಳಿದನು. ಇಸ್ಮರಲ್ಲಿಯೇ ಬೆಳಗಾದುದರಿಂದ ನಹರ ಜಾದಿಯು, ಕಥೆಯನ್ನು ನಿಲ್ಲಿಸಿ, ಬೆಳಗಿನ ಜಾವಕ್ಕೆ ಮರಳಿ ಹೇಳಲಾ ರಂಭಿಸಿದಳು. ೬೨ ನೆ ಯ ರಾ ತಿ) ಕ ಥೆ , ಆ ಸಮಾಜದಲ್ಲಿರುವ ಜನರನ್ನು ನೋಡಿ, ಸಿಂದಬಾದನು ತನ್ನ ಕಥೆಯನ್ನು ಹೀಗೆಂದು ಹೇಳಲಾರಂಭಿಸಿದನು. ನಾನು ಹೇಳಿದ ಮಾತು ಗಳನ್ನು ಕೇಳಿ ಹಡಗಿನ ಸರದಾರನು ನನ್ನನ್ನು ಕುರಿತು, ಆಹಾ ! ದೇವ ರೇ ! ಇದುಯಾರನ್ನೂ ನಂಬತಕ್ಕ ಕಾಲವಲ್ಲ. ಅದರಲ್ಲಿ ಮನುಷ್ಯರ ನ್ನಾದರೂ ನಂಬಲೇ ಕೂಡದು, ಸಂದುಬಾದನು ಸತ್ತು ಹೋದುದನ್ನು ನನ್ನ ಕಣ್ಣಾರೆ ನೋಡಿರುವೆನಲ್ಲಾ ! ಅಯಾ ! ಇದಕ್ಕೆ ಸಾಕ್ಷಿಯಾಗಿ, ನನ್ನ ಹಡಗಿನಲ್ಲಿದ್ದ ಪ್ರಯಾಣಿಕರೆಲ್ಲ ನೋಡಿದರಲ್ಲಾ ! ಹೀಗಿರುವಲ್ಲಿ ವರ ಸವಾದ ಈ ಮಟೆಗಳನ್ನು ಅಪಹರಿಸಬೇಕೆಂಬ ದುರಾಸೆಯಿಂದ, ನಾನೇ ಸಿಂದುಬಾದನದು ಹೇಳುತ್ತಿರುವೆಯಲ್ಲಾ ! ನಿನಗೆ ಈ ದುರ್ಮಗ್ರವು ಸರಿ ಯಾದುದಲ್ಲ. ನಿನ್ನನ್ನು ನೋಡಿದರೆ ಗೃಹಸ್ಥನಂತೆ ಕಾಣುತ್ತೀಯ,