ವಿಷಯಕ್ಕೆ ಹೋಗು

ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

160 ಯವನ ಯಾಮಿನೀ ವಿನೋದ ವಂಶ, ಇನ್ನು ರಾಜನಿಗೆ ತಿಳಿಯಪಡಿಸಿ, ಆತನಪ್ಪಣೆಯನ್ನು ಪಡೆದು ಸಮಯ ನುಸಾರವಾಗಿ ನನ್ನನ್ನು ಆತನ ಬಳಿಗೆ ಕರೆದುಕೊಂಡು ಹೋದರು. ನಾನು ಆತನನ್ನು ನೋಡಿದಕೂಡಲೇ ವರಮಾನಂದಯುಕ್ತನಾಗಿ, ದಲಿನಂತ ಸಾಷ್ಟಾಂಗ ಪ್ರಣಾಮವನ್ನು ಮಾಡಿದನು. ಆತನು ಅತ್ಯಂತ ವಿಶ್ವಾಸದಿಂದ ನನ್ನನ್ನು ಆಲಿಂಗಿಸಿಕೊಂಡು, ತನ್ನ ಅರ್ಧಾಸನದಲ್ಲಿ ಕು ಇರಿಸಿಕೊಂಡು, ಅಯಾ ! ಮಿತ್ರನಾದ ಸಿಂದುಬಾದನೇ, ನೀನು ನಮ್ಮ ರಾಜ್ಯದಿಂದ ಹೋದಮೇಲೆ ಸುಖವಾಗಿದ್ದೆಯಾ ? ನಿನ್ನ ಕುಟುಂಬದವರು ಕ್ಷೇಮದಿಂದಿರುವರೇ ? ರಾಜಾಧಿರಾಜನಾದ ಕರೀಫನು ಆರೋಗ್ಯವಂತನಾ ಗಿರುವನೇ ? ಆಹಾ ! ಬಹು ದಿನಗಳಿಂದಲೂ, ಅಗಲಿದ್ದ ನಿನ್ನನ್ನು ನೋಡಿ ದುದರಿಂದ ಈ ದಿನವೇ ಸುದಿನವೆಂದು ನಾನು ಭಾವಿಸುವೆನೆಂದು ಹೇಳಿ, ನನ್ನನ್ನು ಪುನಹ ಆಲಿಂಗಿಸಿಕೊಂಡನು. ನಂತರ ನಾನು ಆತನಿಗೆ ಪ್ರತಿ ವಂದನೆಗಳನ್ನು ಮಾಡಿ, ಕಲೀಫರು ಕೊಟ್ಟು ಕಳುಹಿಸಿದ್ದ, ಮರ್ಯಾ ದೆಗಳನ್ನು ಒಪ್ಪಿಸಿದನು. ಆತನು ಅದನ್ನು ಸಂತೋಷದಿಂದ ಪರಿಗ್ರಹಿ ಸಿದನು. ಆದರೆ ತಾನು ಕಳುಹಿಸಿದ ಬಹುಮಾನಗಳಿಗಿಂತ ಅತ್ಯುತ್ತಮ ವಾದ ವಸ್ತ್ರಗಳು, ನಾಣ್ಯಗಳು, ರತ್ನಗಳು, ಆಭರಣಗಳಿಂದ ಕೂಡಿದ ಆ ಬಹುಮಾನದ ಪದಾರ್ಥಗಳನ್ನು ಆತನು ನೋಡಿ ಆನಂದ ವರವಶನಾಗಿ, ಬಳಕ ಕಾಗದವನ್ನೊಡೆದು ಓದಲಾರಂಭಿಸಿದನು. ಕಲೀಫನು ಬರೆದು ಕಳುಹಿಸಿದ ಕಾಗದದ ವಿವರ, ಮಹಾಸಮಾ* ವೈಭವ ಸಂಪನ್ನನಾದ, ಸನ್ಮಾರ್ಗ ಸಂದರ್ಶ ಕನಾದ, ಪೂರ್ವಿಕರಾದ ಭಗವದ್ಭಕ್ತರ ಆಶೀರ್ವಾದದಿಂದ ಮುನ್ನತ ಪದವಿಯನ್ನು ಪಡೆದು ಮೆರೆಯುತ್ತಿರುವ, ಅಬ್ದುಲ್ಲಾ ಹರ್ರೋ ಅಲರಾ ದನು ಬರೆದುಕೊಂಡ ವಿಜ್ಞಾಪನೆ. ತಾವು ಬರೆದುಕಳುಹಿದ ಪತ್ರವನ್ನು ನಾವು ಮಹದಾನಂದ ಭರಿತರಾಗಿ, ಪರಿಗ್ರಹಿಸಿದವರಾಗಿ, ಉತ್ತ ರ ವಾದ ಬುದ್ಧಿಚಾತುರ್ಯಗಳಿಗೆ ಮಾತೃಸ್ಥಾನವಾದ ನಮ್ಮ ರಾಜ್ಯಸಭೆ ಈ "ದ, ಈ ವಿಜ್ಞವನಾಪತ್ರಿಕೆಯನ್ನು ಕಳುಹಿಸಿರುವೆವು. ಇದನ್ನು