ವಿಷಯಕ್ಕೆ ಹೋಗು

ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥಗಳ ಓ4 ಬಾರೆಲಿಲ್ಲ, ಮತ್ತು ನನಗೆ ಆಶ್ಚರ್ಯವುಂಟಾಗುವಂತೆ ಅವುಗಳೆಲ್ಲವೂ ಸು ತಿಕೊಂಡು, ನಾನಿರುವ ಮರದ ಬುಡಕ್ಕೆ ಬಂದು ಅತ್ಯಂತ ಕ್ರೂರದೃಸಿತ ಯಿಂದ ನನ್ನನ್ನು ನೋಡುತ್ತಾ ಬಹಳವಾಗಿ ಘರ್ಜಿಸಿದುದರಿಂದ, ನಾನು ಹೆದರಿ, ಬಿಲ್ಲನ್ನೂ ಬಾಣವನ್ನು ಕೆಳಗೆ ಹಾಕಿದನು. ಹೀಗೆ ನಾನು ಭ ಯಪಡುತ್ತಿದ್ದುದಕ್ಕೆ ಸರಿಯಾಗಿ ಒಂದಾನೊಂದು ಮದ್ದಾನೆಯು ಆ ಮರದ ಬಳಿಗೆ ಬಂದು ತನ್ನ ಸೊಂಡಲಿನಿಂದ ಮರದ ಬುಡವನ್ನು ಸುತ್ತಿಕೊಂಡು, ಬಲವಾಗಿ ಅದನ್ನು ಕಿತ್ತು ಉರುಳಿಸಿತು. ನಾನು ಕೆಳಗೆ ಬಿದ್ದೆನು. ಆಗ ಆ ಮನೆಯು ನನ್ನ ಬಳಿಗೆ ಬಂದು ತನ್ನ ಸೊಂಡಲಿನಿಂ ದೆತ್ತಿ ತನ್ನ ಬೆನ್ನಿನಮೇಲೆ ಕುಳ್ಳಿರಿಸಿಕೊಂಡಿತು. ಆ ಕಾಲದಲ್ಲಿ ನನ್ನ ಬ ಆಯಲ್ಲಿ ಬಾಣಗಳಿದ್ದರೂ, ನಾನು ಸತ್ಯವನೆಂದು ತಿಳಿದುಕೊಂಡಿದ್ದನು. ಆದರೆ ಆನೆಯು ನನ್ನನ್ನು ಒಂದಾನೊಂದು ಸ್ಥಳಕ್ಕೆ ಕರೆದುಕೊಂಡುಹೋ ಗಿ, ಅಪ್ಲಿಯೇ ಬಿಟ್ಟು, ತಾನು ಮಾತ್ರ ಹೊರಟುಹೋಯಿತು. ಆಕಾಲ ದಲ್ಲಿ ನನ್ನ ಸ್ಥಿತಿಯೇನಾಗಿದ್ದಿತೆಂಬುದನ್ನು ನೀವು ನಿಮ್ಮಗಳ ಶಕ್ತಾನು ಸಾರ ತಿಳಿದುಕೊಳ್ಳಬಹುದು, ನಾನು ಬಹಳ ಹೊತ್ತಿನವರೆಗೂ, ಮ ರ್ಛಾಕಾಂತನಂತೆ ಬೋರಲು ಬಿದ್ದುಕೊಂಡಿದ್ದು, ಆನೆಗಳೆಲ್ಲವೂ, ಬಹುದೂರಕ್ಕೆ ಹೊರಟುಹೋದವೆಂಬುದನ್ನು ತಿಳಿದು, ಬಳಿಕ ಎದ್ದು ಕು ಆತುಕೊಂಡನು. ಆಗ ಹುಲಿಗಳು ತಿಂದುಹಾಕಿದ ಮನುಷ್ಯರ ಮಳೆ ಗಳಿಂದಲೂ, ಆನೆಗಳ ದಂತದಿಂದಲೂ, ಹುಲಿಯ ಉಗುರುಗಳಿಂದಲೂ, ಕೂಡಿದ ಒಂದಾನೊಂದು ಪರ್ವತದ ಶಿಖರದಲ್ಲಿರುವಂತೆ ನನಗೆ ತೋರಿತು. ಆ ಸ್ಥಳವನ್ನು ನಾನು ನೋಡಿದ ಕೂಡಲೆ, ಇಂತಹ ಸ್ಥಳದಲ್ಲಿ ನಾನು ಮಾಡಬೇಕಾದ ಕೆಲಸವೇನೂ ಇಲ್ಲವೆಂದು ತಿಳಿದುಕೊಂಡು, ಅಲ್ಲಿಂದ ಹೊ ರಟು, ಒಂದು ಹಗಲೂ, ಒಂದು ರಾತ್ರಿಯ, ಪ್ರಯಾಣಮಾಡಿ ನಿರ್ಭಯ ದಿಂದ ನನ್ನ ಯಜಮಾನನ ಬಳಿಗೆ ಬಂದನು. ಹಾಗೆ ಹೊರಟು ಬರುವಾಗ, ಪಟ್ಟಣಕ್ಕೆ ಬರುವ ಮಾರ್ಗವು, ನನಗನುಕೂಲವಾಗಿಯೇ ಇದ್ದಿತು. ನನ್ನನ್ನು ನೋಡಿದ ಕೂಡಲೆ, ಯ ಜಮಾನು, ಓ ನಿಂದುಬಾದನೇ ! ನಿನಗೇನುತೊಂದರೆಯುಂಟಾಯಿತು ? ಈಗ ತಪ್ಪಿಸಿಕೊಂಡು ಬಂದೆ ? ಅರಣ್ಯದಲ್ಲಿ ಆನೆಗಳು, ನಿನ್ನನ್ನು ಸುಮ್ಮನೆ