ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೦ ಯವನ ಯಾಮಿನೀ ವಿನೋದ, ಎಂಬ ನ್ನು ತಂದು ಹಾಕಿದಾಗೋ ನೀನು ಮೊಂಡುತನ ಮಡದೆ, ಅದನ್ನು ಬೇಗ ತಿಂದುಬಿಡು ! ಇದರಿಂದ ನಿನ್ನ ರೋಗವು ಗುಣವಾಗಿದೆ ಎಂದು ಬೇಸಾಯ ಗಾರನು ನಿನ್ನ ಜೀವವನ್ನು ಉಳಿಸುವನು. ಆದಕಾರಣ ನಿನಗೆ ಸುಖವುಂ ಟಾಗುವುದೆಂದು ಹೇಳಿತು. ಹೀಗೆ ಕತೆಯು ತನ್ನ ಪ್ರಯತ್ನವನ್ನು ಸಫಲನಾಗಿ ಮಾಡಿ ಕೊಂಡುದರಿದ ಎತ್ತು ಹೆದರಿ ನನಗೇನು ಬರವುದೊ ಎಂದು ಗಡಗಡನೆ ನಡುಗುತ್ತಾ ಇದ್ದಿತು. ಇದೆಲ್ಲವನ್ನು ನೋಡುತ್ತಿದ್ದ ಯಜಮಾನನು ಆತ್ಮರಕರವಾದ ಈ ಸಂಗತಿಯನ್ನು ಚೆನ್ನಾಗಿ ಲಾಲಿಸಿ ಕೇಳಿ ಘಟ್ಟಿಯಾಗಿ ನಕ್ಕನು. ಆಗ ಆತನ ಹೆಂಡತಿಯು, ಪ್ರಿಯನೇ ! ನೀನು ನಗುವುದಕ್ಕೆ ಕಾರಣವೇನು, ನನಗೆ ಹೇಳಿದರೆ ನಿನ್ನ ಜೊತೆಯ ಕ್ಲಿಯೇ ನಾನು, ಚೆನ್ನಾಗಿ ನಗುತ್ತಿದ್ದೆನಲ್ಲಾ ಎಂದು ಕೇಳಿದಳು. ಅದಕ್ಕೆ ಯಜಮಾನನು ಪ್ರಿಯಳೇ ! ನಾನು ನಗುವುದನ್ನು ನೋಡಿ ನೀನು ತೃಪ್ತಿ ಹೊಂದ ಬೇಕೆಂದು ನುಡಿದನು. ವತಿಯೇ ! ಹಾಗಲ್ಲ ವಿಷಯವು ತಿಳಿಯದೆ ನಗುವುದು ಹೇಗೆ ? ಖಂಡಿತವಾಗಿಯೂ ಈಗ ನಕ್ಕುದುದಕ್ಕೆ ಕಾರಣವನ್ನು ಹೇಳ ಬೇಕೆಂದು ಕೇಳಿದಳು. ಆಹಾ ನನ್ನು ಎತ್ತೂ ಕತೆಯ, ಆಡಿ ಕೊಂಡ ಮಾತುಗಳನ್ನು ಕೇಳಿ ನಕ್ಕೆನು, ಇನ್ನು ಮಾತ್ರ ) ನಿನಗೆ ಹೇಳ ಬಲ್ಲೆನು. ಅಲ್ಲದೆ ಮತ್ತೇನನ್ನು ಹೇಳಲಾರೆನು. ಏಕೆಂದರೆ ಅದೆ ಇವು ರಹಸ್ಯವಾದುದು, ಆರಹಸ್ಯವನ್ನು ಹೇಳಿದರೆ ನನ್ನ ನಾ ಣವೇ ಹೋಗುವುದೆಂದು ಹೇಳಲು, ಗಂಡನು ! ಹೆಂಡತಿಗೆ ಹೇಳದಿರುವ ರಹ ಸ್ವವೂ ಉಂಟೆ ! ನನ್ನನ್ನು ನೀನು ಪರಿಹಾಸ್ಯ ಮಾಡುತ್ತಿರುವೆ, ಆಹಾ ! ಆಕ ಎತ್ತುಗಳು ಮಾತನಾಡಿದ ಸಂಗತಿಯನ್ನು ನನಗೆ ಹೇಳಿದರೆ ಸರಿ, ಇಲ್ಲವಾದರೆ ಭಗವಂತನ ಸಾಕ್ಷಿಯಾಗಿಯೂ, ನಾನು ಇನ್ನು ಮೇಲೆ ನಿನ್ನ ಪ್ರತಿದಾತ್ರಳಾದ ಹೆಂಡತಿಯಾಗಿರೆನೆಂದು ಹೆಂಡತಿಯು ಹೇಳಿದಳು. ಹೀಗಹೇಳಿ ಅವಳು ಅಲ್ಲಿಂದ ಹೊರಟು ಬಿರಬಿರನೆ ಮನೆಯನ್ನು ಹೊಕ್ಕು ಒಂದಾನೊಂದು ಕಡೆಯಲ್ಲಿ ಕುಳಿತು ಕೊಂಡು, ರಾತ್ರಿ ಯೆಲ್ಲಾ ಅಳುತ್ತಲೆ ಇದ್ದಳು. ಗಂಡನಾದರೆ, ಒಂಟಿಯಾಗಿ ಬಿದ್ದಿದ್ದು. ಮರುದಿನ ಮನೆಗೆ ಬಂದನು. ಆದರೂ ಅವಳು ಎಂದಿನಂತೆ ಅಳುತ್ತಲೆ ಇದ್ದಳು. ಇದನ್ನು ನೋಡಿ ಗಂಡನು ಹೀಗೆ ಹಟಹಿಡಿದು ಅಳುವುದಕ್ಕೆ ನಿನಗೇನು ಕೇಡು ಬಂದಿದೆ ? ನೀನು ಕೇಳತಕ ವಿಷಯವು ಹೇಳುವುದಕ್ಕಾಗದ ರಹ