ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿಯನ್ ನೈಟ್ಸ್ ಕಥೆಗಳು, ೩೯ ಸೌಂದರವತಿ ನೀನು ದಮಾಸಿನಲ್ಲಿದ್ದಂತೆ ತೋರುವುದು ಶುದ್ಧ ಭಾ yಂತಿಯೇ ಹೊರತು ಮತ್ತೇನೂ ಅಲ್ಲವೆಂದಳು. ಆಗ ಬದಲೋದೀನನು ಭಕಫಕನೆ ನಗುತ್ತಾ, ಆಹಾ ! ನನ್ನ ಮುದ್ದಿನ ಮುದ್ದೆಯೋ ! ? ನಿನ್ನ ಭಾ y೦ತಿಯು ನನಗೆ ಸಂತೋಷವನ್ನುಂಟುಮಾಡುತ್ತಿದೆ. ಹಾಗಾದರೆ ಕಳು. ನಾನು ವಿವಾಹದ ದಿನದಲ್ಲಿ ಇಲ್ಲಿ ಮಲಗಿದ್ದಂತೆಯೇ ಅಂಗಿ ಮರಾಯಿ ಗಳನ್ನು ಹಾಕಿಕೊಂಡು, ಬೆಳಗಿನ ಜಾವದಲ್ಲಿ ದಮಾಸ್ಕಸ್ ನಗರದ ಬಾಗಿಲ " ಮಲಗಿರಲು, ಅಸ್ಥಿದವರೆಲ್ಲರೂ ನನ್ನನ್ನು ನೋಡಿ ಹುಚ್ಚನೆಂದು ಪರಿಹಸ ಮಾಡುತ್ತಿದ್ದರು. ಆಗ ನಾನು ಒಬ್ಬ ಮಿಠಾಯಿ ಅಂಗಡಿಯವನ ಬಳಿಗೆ ಹೋಗಿ ಸೇರಿಕೊಂಡೆನು. ಆತನು ನನ್ನನ್ನು ಮಗನಾಗಿ ಸ್ವೀಕರಿ ಸಿದನು. ಆತನು ಸಹೋದಮೇಲೆ ನಾನೇ ಅಂಗಡಿಯನ್ನು ನಡೆಸುತ್ತಾ ಇದ್ದನು. ಹೀಗಿರುವ ನನ್ನನ್ನು ಕೊಲ್ಕವದಕ್ಕೆ ಉದ್ಯುಕ್ತರಾದ ರಾ! ಎನಲು ಹಾ ! ನಾ ಣಕಾಂತನಾ ! ಹಾಗಾಗುವುದಕ್ಕೆ ಕಾರಣ ವೇನು ? ನೀನೇನಾದರೂ ತಪ್ಪು ಮಾಡಿರಬಹುದು, ಎನಲು, ಅದು ಅತ್ಯಲ್ಪ ವಾದುದು, ಅಪಹಾಸ್ಯಕರವಾದುದು, ನಿಂದಾಸ್ಪದವಾದುದು, ಮಿಠಾಯಿ ಯಲ್ಲಿ ಮೆಣಸನ್ನು ಹಾಕದೆ ಮಾರಿದೆನೆಂದು, ನನ್ನನ್ನು ಕೊಲ್ಲುವುದಕ್ಕೆ ಉದ್ಯುಕ್ತರಾದರಯ್ಯಾ! ಎನಲು ಇದಕ್ಕಾಗಿ, ನಿನ್ನಲ್ಲಿ ಇಂತಹ ಅನ್ಯಾಯ ವನ್ನು ಹೇಗೆ ಮಾಡಿದರೆಂದು, ಸೌಂದರವತಿಯು ನಗುತ್ತಾ ಕೇಳಿದಳು. k | ಅಯ್ಯೋ ! ಇಷ್ಮೆ ಇಲ್ಲ. ನನ್ನ ಅಂಗಡಿಯ ಸಾಮಾನುಗಳನ್ನು ಹಾಳುಮಾಡಿ, ನನ್ನನ್ನು ಪೆಟ್ಟಿಗೆಯಲ್ಲಿ ಹಾಕಿದ್ದು, ಕೊನೆಗೆ ಗಲ್ಲಿಗೆ ಹಾಕು ವುದಕ್ಕೆ ಉದ್ಯುಕ್ತರಾದರು. ಇದೆಲ್ಲವೂ ನನಗೆ ಜ್ಞಾಪಕವಿರುವದಲ್ಲ ! ಬಹುಶಃ ಸವಿರಬಹುದು ಏನಾದರೂ ಆಗಲಿ ನಮ್ಮಿಬ್ಬರನ್ನೂ ಒಟ್ಟು ಗಡಿಸಿದ, ಭಗವಂತನಿಗೆ ವಂದನೆಗಳನ್ನು ಸಮರ್ಪಿಸುವೆನೆಂದು ಹೇಳಿದ, ಕೂಡಲೆ ಬೆಳಗಾದುದರಿಂದ ಸಹರಜಾದಿ ಕಥೆಯನ್ನು ನಿಲ್ಲಿಸಲು, ಇಂತಹ ವಿನೋಚಕರವಾದ ಕಥೆಯನ್ನು ಹೇಳದುದರಿಂದ, ತಾನಂದಭರಿತಂಗಿ, ಆ ಕಥೆಯನ್ನು ಪೂರ್ತಿಯಾಗಿ ಕೇಳುವವರೆಗೂ, ಸುಲಾನಿಯನ್ನು ಕೊಲ್ಲಕೂಡದೆಂದು ಆಜ್ಞೆ ಮಾಡಿ ದೊರೆಯು ಹೊರಟುಹೋದನು.