ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

by ಯವನ ಯಾಮಿನೀ ವಿನೋದ ಎಂಬ, ಹೇಳದೆ ಅಲ್ಲಿಂದ ಹೊರಟುಹೋಗುತ್ತಿರುವಾಗ ಒಂದಾನೊಂದು ರಾತ್ರಿ ಕಳ್ಳರು ಆತನನ್ನು ಹೊಡೆದು ಬಟ್ಟೆಗಳನ್ನು ಕಿತ್ತುಕೊಂಡುಹೋದರೆಂಬ ವರ್ತಮಾನವನ್ನು ಕೇಳಿ, ನಾನುಹೋಗಿ ಗ ವಾಗಿ ಆತನನ್ನು ಮನೆಗೆ ಕರೆದುಕೊಂಡು ಬಂದು, ಕೈಲಾದ ಸಹಾಯವನ್ನು ಮಾಡುತ್ತಿದ್ದನು. ಕೈರಕನ ಆರನೆಯ ತಮ್ಮನ ಕಥೆ. ವಹರಜಾದಿಯು ಸುಲ್ತಾನನ್ನು ಕುರಿತು, ಮರಳಿ ಆ ರಕ ನಿಂತೆಂದನಂದು ನುಡಿಯತೊಡಗಿದಳು, ನನ್ನ ಆರನೆಯ ಅಣ್ಣನಾದ ಸಾಕುಬಾಕು, ಮೊದಲು ತನ್ನ ಪಾಲಿಗೆ ಬಂದ ಧನವನ್ನು ಜೋಕೆಯಿಂದ ವೃದ್ಧಿಪಡಿಸುತ್ತಿದ್ದರೂ, ಕೊನೆಗೆ ಅದ್ಯಹೀನನಾಗಿ ಅದನ್ನು ಹಾಳು ಮಾಡಿಕೊಂಡು, ದರಿದ ನಾಗಿ ಬಹು ಉಪಾಯದಿಂದ ದೊಡ್ಡ ಮನುಷ್ಯರ ಮನೆಯ ಆಳುಗಳಸಂಗಡ, ಪರಿಚಾರಕರ ಜೊತೆಯಲ್ಲಿಯೂ, ಸ್ನೇಹ ವನ್ನು ಬೆಳಸಿ, ಅವರವಲಕ ಯಜಮಾನನನ್ನು ತೃಪ್ತಿಪಡಿಸಿ, ಆತನಿಂದ ಬಿಕ್ಷವನ್ನೆತ್ತಿಕೊಂಡುಬಂದು, ಜೀವನಮಾಡುತ್ತಾ ಇದ್ದನು. ಹೀಗಿರು ವಿ ಸಾಕುಬಕನು ಓಂವಾನಿಂದುದಿನ, ಬೀದಿಯಲ್ಲಿ ಗುಪ್ತಾ ಒಂದಾನೊಂದು ದೊಡ್ಡ ಮನೆಯ ಹಜಾರದಲ್ಲಿ, ಬಹುಮಂದಿಗೇರಿ, ಕೆಲಸ ಮಾಡುತ್ತಿರುವದನ್ನು ಕಂಡು, ಅಲ್ಲಿಗೆ ಹೋಗಿ ಒಬ್ಬ ಮನುಷ್ಯನನ್ನು ಕುರಿತು, ಅಯಾ ! ಇದು ಯಾರದನೆಯೆಂದು ಕೇಳಿದನು. ಅದಕ್ಕೆ ಆತನು, ಅಯಾ ! ನೀನು ಈ ಊರಿಗೆ ಹೊಸಬನೋ ! ಈಗತಾನೆ, ಈ ಊರಿಗೆ ಬಂದಂತೆ ತೋರುವುದು. ಈ ಊರಿನಲ್ಲಿ ವಾಸಮಾಡುತ್ತಿರು ವರು ಯಾರುತಾನೆ ಈ ಮನೆಯನ್ನು ನೋಡಿದಕೂಡಲೆ, ಇದು ದೊಡ್ಡ ಸೈಯ್ಯದನ ಮನಯೆಂದು ತಿಳಿದುಕೊಳ್ಳಲಾರರು ! ಹೀಗಿರುವರಿ ನೀನು ನನ್ನನ್ನು ಕೇಳುತ್ತಿರುವೆಯಲ್ಲಾ! ಎನಲು, ದೊಡ್ಡ ಸೈಯ್ಯದನ್ನು, ಬಹು ಧರ್ಮಿರೆಂದು ಕೇಳಿದ್ದುದರಿಂದ ಆತನನ್ನು ಕುರಿತು, ಅಯಾ! ನನಗೇನಾದರೂ ಧರವನ್ನು ಕೊಡಿಸುವೆಯಾ ಎಂದು ಕೇಳಲು, ಅರ್ಯ ! ನೀನು ಒಳಗೆ ಹೋಗಿ ಯಜಮಾನರನ್ನು ಕಂಡು ಬೇಡಿಕೊಂಡುದೆ ಆದರೆ ಅವರು ನಿನ್ನನ್ನು ಸಂತೋಷಪಡಿಸುವರೆಂದು ಹೇಳಿದನು. ಆಗ ಸಾಕು ಬಾಕನು ತನಗೆ ಮರಾದೆಯಿಂದ ಉತ್ತರವನ್ನು ಹೇಳಿದ ಮನುಷ್ಯನನ್ನು