________________
ಯವನ ಯಾಮಿನೀ ವಿನೋದ ಎಂಬ, ನನಗೆ ದುಃಖಜಾಲವನ್ನು ತಂದೊಡ್ಡುತ್ತಿರುವುವಲ್ಲಾ ! ಎಂದು ಹೇಳಲು, ನನ್ನ ಸ್ನೇಹಿತರಲ್ಲಿ ಕೆಲವರು ವೀಣಾನಾದವನ್ನು ಮಾಡಿದುದರಿಂದ, ಆಕೆ ಸ್ವಸ್ಥಳಾಗಿ ಸ್ವಲ್ಪ ಹೊತ್ತು ಇದ್ದು ನಿಶ್ಯಬ್ದವಾಗಿರುವಂತೆ, ನಮ್ಮ ಗಳಿಗೆ ಆಜ್ಞಾಪಿಸಿ ಎಲ್ಲರನ್ನು ಹೊರಕ್ಕೆ ಕಳುಹಿಸಿ, ನನ್ನನ್ನು ಮಾತ್ರ ತನ್ನ ಹಾಸಿಗೆಯ ಪಕ್ಕದಲ್ಲಿ ಕುಳ್ಳಿರಿಸಿಕೊಂಡು, ರಾತ್ರಿಯೆಲ್ಲ ವ್ಯಸನದಿಂದ ಕಣ್ಣೀರನ್ನು ಸುರಿಸುತ್, ರಾಜಕುಮಾರನ ಹೆಸರನ್ನು ಉಚ್ಚರಿಸಿ ಹಾ | ದೈವವೇ! ಪಾ' ®ಪಿಯನೆಂದು ನಾನುಮೊಹಿಸಿದ ಪುರುಷನನ್ನು ತೊರೆದು, ಕಲವರ ಕೈಯ್ಯಲ್ಲಿ ಸಿಕ್ಕಿ ನರಳುವಂತೆ ಮಾಡಿದೆಯಾ! ಎಂದು ನಾನಾತರದಿಂದ ಪ್ರಲಾಪಿಸುತ ಹೊತ್ತು ಕಳೆಯುತ್ತಿದ್ದಳು. ಮರು ದಿನ ಬೆಳಗಾದಮೇಲೆ ಆಕೆ ಸ್ವಲ್ಪಮಟ್ಟಿಗೆ ಸ್ವಸ್ಥಳಾಗಿದ್ದುದರಿಂದ, ನಾವು ಆಕೆಯನ್ನು ಅಂತಃಪುರಕ್ಕೆ ಕರೆದುಕೊಂಡುಹೋದವು, ಕೂದಲೆ ಕಲೀಫ. ರಿಂದ ಆಜ್ಞರಾದ, ವೈದ್ಯರು ಬಂದು ಆಕೆಯ ರೋಗಕಾರಣವನ್ನು ತಿಳಿದುಕೊಳ್ಳಲಾರದೆ, ಚಿಕಿತ್ಸೆ ಮಾಡಿದುದರಿಂದ ರೋಗವು ಬಲವಾಗಿ ಹೆಚ್ಚಿ ತು, ಕಲೀಫರೂಸಹ ಬಂದು ನೋಡಿಕೊಂಡು ಹೋದರು. ನಂತರ ಆಕೆಯು ಸ್ವಲ್ಪ ಸಮಾಧಾನವನ್ನು ಹೊಂದಿದವಳಾಗಿ, ರಾಜಕುಮಾರನ ವರ್ತಮಾನವನ್ನು ತಿಳಿದುಕೊಂಡುಬರುವಂತೆ ನನ್ನನ್ನು ಕಳುಹಿಸಿದಳು ಎನಲು, ಇರ್ಬ ತೆಹರನು, ರಾಜಪುತ್ರನ ವಿದ್ಯಮಾನವನ್ನು ಹೇಳಿದನಲ್ಲಾ! ಆತನ ವರ್ತಮಾನವನ್ನು ತಿಳಿದುಕೊಳ್ಳಬೇಕೆಂದು ರಾಣಿಯು ಹೇಗೆ ಕುತೂಹಲದಿಂದ ಕರಗುತ್ತಿರುವ, ಹಾಗಯ ರಾಜಪುತನು ಬಹು ಕುತೂಹಲಯುಕ್ತನಾಗಿ ನರಳುತ್ತಿರುವನು, ಮುಖ್ಯ ವಾಗಿ ನೀನು ಮಾಡಬೇಕಾಗಿರುವ ಕಾರ್ಯ ಒಂದುಂಟು. ಆಕಯನು, ಸಮಾಧಾನಪಡಿಸಿ ಮೋಹವನ್ನು ಅಣಗಿಸಿಕೊಳ್ಳುವಂತೆ ಮಾಡು. ಒಂದು ವೇಳೆ ಅಕಸ್ಮಾತ್ತಾಗಿ ಕಲೀಸರ ಎದುರಿಗೆ ತನ್ನ ಮೂಹದ ಮಾತುಗಳನ್ನು ಆಡಿದರೆ, ನಮ್ಮೆಲ್ಲರಿಗೂ ಪ್ರವಾದವುಂಟಾಗದೆ ಇರದು ಎನಲು, ದಾದಿಯು ಅಯ್ಯಾ ! ಆಕೆಯ ಮೋಹದಿಂದ ಮಹಾ ಪ್ರವಾದವುಂಟಾಗುವದೆಂಬ ಭಯದಿಂದ ನಾನು ಪದೇ ಪದೇ ಸಮಾಧಾನವನ್ನು ಹೇಳುತ್ತಿರುವೆನು ಆದರೆ ನೀನು ಈ ಮಾತನ್ನು ಹೇಳಿರುವೆಯೆಂದು ತಿಳಿಸಿದರೆ ಆಕೆಗೆಂದಿಗೂ