ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ಪರೀಕ್ಷೆ ನೋಡಿದಮೇಲೆ ತನ್ನ ತಮ್ಮನಲ್ಲಿ ಮೊದಲಿಗಿಂತಲೂ ಹೆಚ್ಚಾಗಿ ವಾತ್ಮವನ್ನು ತೋರಿಸುತ್ತಾ ಅತ್ಯಂತ ದಯಾಪರನಾಗಿ ಆತನಿಗೆ ಸ್ವಲ್ಪ ರಾಜ್ಯವನ್ನು ಕೊಟ್ಟು ರಾಜ್ಯಸುಖವನ್ನು ಅನುಭವಿಸುವಂತೆ ಮೂಡಬೇಕೆಂದು ಯೋಚಿಸಿ ಟಾರ್ಟರಿ ಯೆಂಬ ದೇಶವನ್ನು ಕೊಟ್ಟನು. ಕೂಡಲೇ ಸಂತೋಷದಿಂದ ನಲಿದಾಡುತ್ತಾ ಅಣ್ಣನಿಂದಪ್ಪಣೆಯನ್ನು ಪಡೆದು ಸಹಜವನನು ಆ ರಾಜ್ಯವನ್ನು ಸ್ವಾಧೀನವಡಿಕೊಂಡು, ರಾಜ ಧಾನಿಯಾದ ಸಾವರ್ಕಂಡ್ ಪಟ್ಟಣದಲ್ಲಿ ಸುಖದಿಂದ ರಾಜ್ಯವನ್ನಾಳುತ್ತಾ ಇದನು. ಹೀಗೆ ಆ ಅಣ್ಣತಮ್ಮಂದಿರು ಹತ್ತುವರ್ಷಗಳ ಕಾಲ ಪ್ರತ್ಯೇ ಕವಾಗಿ ರಾಜ್ಯವನ್ನಾಳುತ್ತಿದ್ದುದನ್ನು ನೋಡಿ ಸಹರಿಯರನು ತನ್ನ ತಮ್ಮನಾದ ಮಹಜವನನ್ನು ನೋಡಬೇಕೆಂದು ಅಪೇಕ್ಷಿಸಿ ಆತನನ್ನು ತನ್ನೂರಿಗೆ ಕರೆದುಕೊಂಡುಬರುವಂತೆ ತನ್ನ ಕಡೆಯವನಾದ ಒಬ್ಬರಾಯ ಭಾರಿಯನ್ನು ಕಳುಹಿಸಬೇಕೆಂದು ಯೋಚಿಸಿ, ಆ ರಾಯಭಾರಿಗೆ ತಕ್ಕ ಉಪಕರಣಗಳನ್ನು ನಿಮೂಡಿ ಕೊಡುವಂತೆ ತನ್ನ ಮಂತ್ರಿ ಗ ಹೇಳ ಆತನ ಯೋಗ್ಯತೆಗೆ ತಕ್ಕ ಪರಿವಾರಸಹಿತನಾಗಿ ಹೊರಟು ತನ್ನ ತಮ್ಮನ ನ್ನು ಕರೆದುಕೊಂಡುಬರುವಂತೆ ರಾಯಭಾರಿಯನ್ನು ಕಳುಹಿಸಿದನು. ಆರಾಯಭಾರಿಯು, ವೇಗದಿಂದ ಪ್ರಯಾಣಮೂಡಿ ಸಾವರ್ಕಂಡ್ ರಾಜಧಾನಿಗೆ ಸಮೀಪವಾಗಿ ನಡೆತರುತ್ತಿರುವುದನ್ನು ಕೇಳಿ ಸಹಜವನನು ತನ್ನ ಪ್ರಧಾನಮಂತ್ರಿಗಳಿಂದೊಡಗೂಡಿ, ಆತನನ್ನು ಇದಿರ್ಗೊಳ್ಳುವುದಕ್ಕೆ ಬಂದಿರುವ ವರ್ತಮನವನ್ನು ಕೇಳಿ ಈ ರಾಯಭಾರಿಯು, ತನಗೆ ಗೌರ ವವನ್ನೀಯುವುದಕ್ಕಾಗಿ ಅತ್ಯಂತ ಅಮೂಲ್ಯವಾಗಿ ರಮಣೀಯವಾಗಿರು ವ ಉಡುಪನ್ನು ಧರಿಸಿಕೊಂಡು ಬಂದಿರುವರೆಂದು ಪರಮನಂದಭರಿತನಾಗಿ ಆ ಟಾರ್ಟರಿ ರಾಜನನ್ನು ಬರಮಾಡಿಕೊಂಡು ತನ್ನ ಬಳಿಯಲ್ಲಿ ಮುರ್ಯ ದೆಯಿಂದ ಕುಳ್ಳಿರಿಸಿಕೊಂಡನು. ಆಕ್ಷಣವೇ ಸಹಜವನನು ತನ್ನ ಅಣ್ಣ ನಾದ ಚಕ್ರವರ್ತಿ ಷಹರಿಯರಿನ ಕ್ಷೇಮುಲಾಭವನ್ನು ಕುರಿತು ಪ್ರಶ್ನೆ ಮೂ ಡಲು ಮಂತ್ರಿಯು ಸಂತೋಷದಿಂದ ಆತನ ಕ್ಷೇಮಲಾಭವನ್ನು ತಿಳಿಸಿ ತಾನು ರಾಯಭಾರಿಯಾಗಿ ಬಂದಿರುವ ವರ್ತಮನವನ್ನು ಹೇಳಿದನು. ಅದನ್ನು ಕೇಳಿ ಸಹಜವನನು ಪರಮಸಂತೋಷವನ್ನು ಹೊಂದಿ ಜವಾಗಿ ಅಯಾ! ಬುದ್ಧಿಶಾಲಿಯಾದ ಮಂತ್ರಿ ನನ್ನ ಅಣ್ಣಂದಿರಾದನುಲ್ಲಾ -