೧೪೦ ಅಂಬಿಕಾಳಸಗ್ರಂಥಮಾಲೆ. (ಸಂಧಿ ೬ ಧುರದೊಳಗನೇಕರಂ ಕೊಲಲು ತನ್ನೊಳೊರೆದು | ಪರಿತರ್ಸ ರುಧಿರಮುನ ನಾ ತೀರ್ಥದಿಂ ತೊಳವ | ಪರಿಯೋಎನಿಪ್ಪಂತೆ ಖಡ್ಡ ವಾತಿರ್ಥದೊಳು ಮುಳುಗಲದಕಂದುತೊಡಗೀ || ಧರೆಯೊಳಗೆ ಖಡ್ಗ ತೀರ್ಥವೆನಿಪ್ಪ ನಾಮವ | ಕ್ಟರಿಯಾದುದಾದಯ್ಯನೊಡನೆ ಬಂದವರಗಲ | ದಿರಲು ಬಾಹತ್ತರನಿಯೋಗಮಂ ಕೊಟ್ಟ ಸೋಮಯ್ಯನುತ್ಸಾಹದಿಂದಾ || ೬೪ | ನೆರೆಯರ ನಾಡಗ್ರಹಾರದೊಳಗುಳ ಶರ | ಣರು ಕೇಳು ಬಂದಾದಿವಯ್ಯನಂ ಕಂಡು ಭ ! ಕರನಿಧಿಯೆ ! ಶಿವಸಮಯ ಶರಧಿಗೆ ಶಶಾಂಕನಾದೆಯೆಲಾ ! ಎನುತ್ತೆ ಹೊಗ ಧರೆಯರಿಯೆ ಗಣಪರ್ವವಂ ನೆರೆದು ಮಾಡಿ ಭಾ | (ಳೇ || ಸುರಜಲಕ್ರೀಡೆಗಳ ನಾಡಿ ಕಣ್ಣೆ ಸವ ದೇ | ವರದೇವನಂಬಿಟ್ಟು ಹೋಗಲಾರದೆ ಪುರಗಳಂಮಾಡಿ ಸುಖಮಿರ್ದರೂ 11 ೬೫ || ಹಗಹೋಯ್ತು ತಂನರಕೆಯಾಯ್ತು ಸೋಮಯ್ಯತಂ ! ದೆಗೆ ಮಾಣದೀಸಕಲ ಮಾದಂಗಭೋಗಂಗ | ಳೊಗೆದವೆಲ್ಲಾ ಜನಂ ಭಕ್ತರಾಗಲು ತೊಡಗಿತಲ್ಲಿ ಶಿವಪುರವಾದವೂ || ಜಗದೊಳೆನ್ನಿಂದೆ ಕೃತಕೃತ್ಯರಿಲ್ಲೆಂಬ ನಂ | ಬುಗೆಯಿಂದ ತನ್ನ ಪದ್ಮಾವತೀದೇವಿಸಹಿ | ತಗಲದುತ್ಸವಿಸುತಿಪ್ಪಾದಿಮನಜಸಂಸುಳಿಯತೊಡಗಿತ್ತಿಳೆಯೊಳೂ | ೬೬ ! ಅತ್ತ ಸೌರಾಷ್ಟ್ರದೊಳಗಾದಯ್ಯ ತಡೆದನೆಂ | ದತ್ಯುನ್ನ೪ಸ ಜನನಿಪಿತ ರಿದ್ದೆಡೆಗೆ ತನ್ನ | ಚಿಕ್ಕಬಪ್ಪಮಾನಿಸರಂ ಸುಖಾಸನವಕಳುಹಿಸತಿತಂದೆತಾಯಾ || ಅತ್ತೆ ಮಾವಂದಿರೊಳಗಾದೆಲ್ಲರಂ ಬರಿಸಿ | ಚಿತ್ತಜಾರಿಯ ನಿಬಂಧಕ್ಕೆ ಹುಲಿಗೆರೆಗೆ ದೊರೆ | ವೆತ್ತ ಮುಖ್ಯರವಾಡಿನಡೆಸಿಹರುಷಂಬಡಿಸಿ ಸುಖಮಿರ್ದನಾದಯ್ಯನೂ | ೬೬ |
ಪುಟ:ಆದಿಶೆಟ್ಟಿಪುರಾಣವು.djvu/೧೬೨
ಗೋಚರ