ವಿಷಯಕ್ಕೆ ಹೋಗು

ಪುಟ:ಆದಿಶೆಟ್ಟಿಪುರಾಣವು.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

viii ಈ ಪುರದ ವಿಸ್ತಾರವು, ಅಮಾನುಷ ಕೃತ್ಯಗಳಾಗಿ ತೋರುವ ಭವ್ಯವಾದ ಕಟ್ಟ ಡಗಳು ಸರಿಯಾಗಿಯೇ ಪೂಜ್ಯ ಪೂಜಕ ಭಾವವನ್ನು ವ್ಯಕ್ತಪಡಿಸದಿರಲಿಲ್ಲ. « ಗೂಳೆಬಿ ದ್ದರೆ ಆಳಿಗೊಂದುಕಲ್ಲು ' ಯೆಂಬಂತೆ ದೇಶಕಾಲ ಪರಿಸ್ಥಿತಿಗೆ ಸರಿಯಾಗಿ ಎಷ್ಟೋ ದೇವಾಲಯಗಳು, ಧರ್ಮಛತ್ರಗಳು, ತೀರ್ಧಗಳು, ನೆಲಸಮವಾಗುತ್ತ ನಡೆದಿದ್ದು, « ಹೂ ಮಾರುತ್ತಲಿದ್ದ ಸ್ಥಳಗಳಲ್ಲಿ ಹುಲ್ಲು ಮಾರುತ್ತಲಿದೆಂಬಂತೆ ” ದುರುಪಯೋಗವಾ ಗುತ್ತಿರುವದನ್ನು ಕಂಡು ಮನಸ್ಸು ಖತಿಗೊಂಡಿತು, ಕ್ಷಣಹೊತ್ತಿನ ಮೇಲೆ ಘಡಿಯಾ ರದೊಳಗೆ ಲೋಲಾಡತಕ್ಕ ಆಂದೋಲಕದಂತೆ ಒಂದು ಮಗ್ಗಲು ಆನಂದವು ಮತ್ತೊಂ ದು ಮಗ್ಗ ದುಃಖವು ನಿಸರ್ಗದತ್ತವಾದವುಗಳಿದ್ದು ಆ ಜಗದೀಶನಲೀಲೆಯನ್ನು ಶಾಂತವಾಗಿ ಸಹಿಸಬೇಕಾಗುತ್ತದೆಂದು ಸಮಾಧಾನಮಾಡಿಕೊಳ್ಳಬೇಕಾಯಿತು. - ಇಂಥೀ ಚರಿತ್ರವನ್ನು ಸಕಲವೀರಶೈವರಿಗೆ, ಅದರಲ್ಲಿ ವಿಶೇಷವಾಗಿ ಶ್ರೀ ಪಲಿಕ ರಪುರಾಧೀಶಸೋಮೇಶಪ್ರತಿಷ್ಠಾಪನಾಚಾರ್ಯ ಶ್ರೀ ಆದಯ್ಯಗಳ ಸಾಂಪ್ರದಾಯ ಕರಾದ ಆದಿವಾಣಿಜ್ಯ (ಆದಿಪಂಚಮ) ರೆಂಬ ವೀರಶೈವ ಉಪಪಂಗಡದವರಿಗೆ ಉತ್ತೇ ಜನಪರವಾಗಿ ರಾ. ಸಾ. ಶೆಟ್ಟಿ ನೂರಂದಪ್ಪನವರು, ಮಹಾಜನ ರೇವಪ್ಪನವರು, ಬೆಳ್ಳು ಜೈ ರಾಮಪ್ಪನವರು, ಸುಗಂಧಿ ರೇವಪ್ಪನವರು, ಗೊಟ್ಟಿ ಶಿದ್ದಲಿಂಗಪ್ಪನವರು, ಅಥಣಿ ತಾಲೂಕ ಬಾಡಗಿ ನ್ಯಾಮಗವಡರಾದ ತಿ. ರಾ. ರಾ. ಶಿದಮಲ್ಲ ಸ್ಪನವರು ಮೊದಲಾದ ಭಕ್ತವೃಂದರ ಕೈನೆರಿವಿನಿಂದ ಕ, ಅಥಣಿ ಗ್ರಾಮದ ಶ್ರೀ ಮೋಟಗಿ ವೀರಕ್ತಮರಾಧ್ಯ ಕ್ಷರಾದ ಶ್ರೀ ಮುರಿಗೇಂದ್ರಸ್ವಾಮಿಗಳು, ಗುಂತಗಲ್ಲ ಶಿಖಾಮಣಿಮರದ ವೇ, ಎರು ಪಾಕ್ಷ ಶಾಸ್ತ್ರಿಗಳ ಮತ್ತು ಶ್ರೀ ಮಜ್ಜಗದ್ಗುರು ತೋಂಟದ ಮಹಾಸ್ವಾಮಿಗಳ ಆಸ್ಥಾನ ಪಂಡಿತರಾದ ವೇ. ಕಲ್ಲಪ್ಪಶಾಸ್ತ್ರಿಗಳ ಮುಖಾಂತರದಿಂದ ಶ್ರೀ ಆದಿಶೆಟ್ಟಿಗಳ ಭಕ್ತಿತತಿ ಯನ್ನು ಶಕೆ ೧೮೧೫ ನೇ ವಿಜಯನಾಮ ಸಂವತ್ಸರದ ಕಾರ್ತಿಕ ಮಾಸದಲ್ಲಿ ವಿಶದವಾ ಗಿ ಕೃತಿಪಡಿಸಿ, ಕಲ್ಯಾಣಪುರದ ಶ್ರೀ ಬಸವೇಶನು ವೀರಶೈವ ಮತಸ್ಥಾಪಕನೆಂಬ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಿ, ಇವತ್ತಿಗೆ ೧೦೦ ವರ್ಷಕ್ಕೆ ಮಿಕ್ಕಿದ ವಯ ಸ್ಥರಾದ ಮತ್ತು ಸರ್ತಿಸಂಪನ್ನ ರಾದ ಈ ಶ್ರೀರ್ಮ ಮಹಾಸ್ವಾಮಿಗಳು ತಮ್ಮ ಇರುವಿಕೆಯಲ್ಲಿ ಒಂದಾವರ್ತಿ ಪ್ರಚುರಗೊಳಿಸಬೇಕೆಂದ ಆಕಾಂಕ್ಷೆಯನ್ನು ತೃಪ್ತಿಗೊಳಿ ಸಬೇಕೆಂದು ಈ ಕಾರ್ಯವನ್ನು ಕೈಕೊಂಡೆನು, ಕ್ಷಿತಿಜವನ್ನು ಕಂಡು ಹಿಡಿಯಹೋದಹಾ ಗೆಲ್ಲ ಅದು ಮುಂದಕ್ಕೆ ನಿಸಿಟಿ ಹೋಗುವಂತೆ ನನಗೆ ಬೇಕಾಗಿರುವ ಸಾಹಿತ್ಯ ಎಲ್ಲದ ಕಿಂದ ನನ್ನ ವಿಚಾರ ತರಂಗಗಳು ಯಾವ ಧಡಕ್ಕೆ ಅಪ್ಪಳಿಸುವವೋ ಏನೋ ಯಂಬಂ