ವಿಷಯಕ್ಕೆ ಹೋಗು

ಪುಟ:ಆದಿಶೆಟ್ಟಿಪುರಾಣವು.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ix ತಾಯಿತು, ಅಷ್ಟರಲ್ಲಿ-ಹುಡುಕಾಡಿದರೆ ಸಿಗದಂಧ ಬಳ್ಳಿಯು ತಾನಾಗಿಯೇ ಕೈ ದೊಡಕಿ ತಂಒಂತ-ಬೆಂಗಳೂರಲ್ಲಿರುವಂಥ ಚೀಫ್ ಕೋರ್ಟ್ ಡೆಪ್ಪಿ ರಜಿಸ್ಟಾರ್ ವೇ, ಬಿ, ಬಸ ವಾರಾಧ್ಯರುಗಳ, ನಮ್ಮ ಯೋಗವು ಈಶಸಂಕಲ್ಪದಿಂದ ಕೂಡಿತು, ಅವರುಗಳು ತಾವು ಮೈಸೂರು ಡಿಸ್ಟ್ರಿಕ್ಕು ಮಂಡ್ಯದ ತಾಲೂಕು ಸರ್ವಮಾನ್ಯ ಬೇಲೂರು ಗ್ರಾಮದಲ್ಲಿ ರುಪ ವೇ, ಪುಟ್ಟಸ್ವಾಮಿಗಳು ಸಂಗ್ರಹಿಸಿಟ್ಟ () ತಾಳವೋಲೆ ಗ್ರಂಥವನ್ನು , ಮತ್ತು ಶ್ರೀಮನ್ನಿ ರಂಜನ ಜಗದ್ಗುರು ಮುರಘರಾಜೇಂದ್ರ ಮಹಾಸ್ವಾಮಿಗಳ ಸಂಸ್ಥಾನದ ಬೃಹನ್ಮಠದಲ್ಲಿದ್ದ ಗ್ರ೦ಧಭಾಂಡಾರದೊಳಗಿಂದ (ಸ) ತಾಳ ವೋಲೆ ಗ್ರಂಥವನ್ನು ಸರಿ ನೋಡಿ ಪ್ರಚುರಗೊಳಿಸಲು ತಯಾರಾದ ಗ್ರಂಥಗಳನ್ನು ರಾ. ರಾ. ಬೆಳ್ಳುಳ್ಳಿ ರಾಮ ಸ್ಪನವರು ಬಹು ದಿವಸದಿಂದ ಸಂಗ್ರಹಿಸಿಟ್ಟ ಕೈ ಬರಹದ ಮೂಲ ಪುಸ್ತಕದ (ವಾ) ನಕಲನ್ನೂ ಮತ್ತು ಹುಬ್ಬಳ್ಳಿ ತಾಲೂಕ ಮಲ್ಲಿಗವಾಡ ಗ್ರಾಮದ ವೇ| ಮತಪತಿ ವೀರ ಯ್ಯನವರು ಸಂಗ್ರಹಿಸಿದ ಮೂಲ ಪುಸ್ತಕದ (") ನಕಲನ್ನೂ ಮತ್ತೂ ಸಹಾಯವಾ ಗಿಟ್ಟು ಕೊಂಡು, ಪರಿಷ್ಕರಿಸಿದರು, ಶ್ರೀಮದ್ರಾಘವೇಶ್ವರನ ಕಾಲಕ್ಕೂ ಈಗಿನ ಕಾಲ ಕ್ಯ ಮಹದಂತರವಿದ್ದು, ಈಗಿನ ಸುಧಾರಿಸಿದ ದೇಶಕಾಲ ಸಾಮಾಜಿಕ ಪರಿಸ್ಥಿತಿಗೆ ಸರಿಯಾಗಿ, ಮೂಲಗ್ರಂಥದಲ್ಲಿದ್ದ ೫ ನೇ ಸಂಧಿಯೊಳಗಿನ ೭-೮ ಅನವಶ್ಯಕವಾದ ಶ್ಲೋಕಗಳನ್ನು ಬಿಟ್ಟಿರುತ್ತದೆ. * ಗುರ್ತುಹಾಕಿದ ೬೭ ಶ್ಲೋಕಗಳು (ಸ) ಪ್ರತಿ ಯಲ್ಲಿ + ಗುರ್ತು ಹಾಕಿದ ೫ ಶ್ಲೋಕಗಳು (ವಾ) ಪ್ರತಿಯಲ್ಲಿ ಹೆಚ್ಚಿಗಿದ್ದು ಉಳಿದವು ಗಳಲ್ಲಿ ಇಲ್ಲಾ, (ವಾ) ಮತ್ತು (7) ಪ್ರತಿಗಳಲ್ಲಿ ಮಾತ್ರ c« ಇದು ಸಮಸ್ತ ಕಮಳಾ ಧವ • • • • ” ಅಂತಾ ಇದ್ದ ವಚನವನ್ನು ಗ್ರಂಥಾರಂಭದಲ್ಲಿ ಕೊಟ್ಟಿರುತ್ತದೆ. ಮತ್ತು ಮೂಲಪ್ರತಿಗಳು ಶಿಕ್ಕರೆ ಕವಿವಾಣಿಯನ್ನೇ ಶೇರಿಸುವದುಕ್ತವಾದ್ದರಿಂದ ೫ ನೇ ಸಂಧಿ ೮ ನೇ ಮತ್ತು ೬ ನೇ ಸಂಧಿ ೬೯ ನೇ ಶ್ಲೋಕಗಳಲ್ಲಿ ಬಹಳೇ ಅಕ್ಷರಗಳು ಹಾರಿಹೋದ ಸ್ಥಳದಲ್ಲಿ * * * * ಈ ಗುರ್ತುಗಳನ್ನು ಹಾಕಿ ಶ್ಲೋಕ ಭರ್ತಿಮಾಡಿರು ತದೆ. ಈ ನಾಲ್ಕು ಪ್ರತಿಗಳನ್ನು ಸರಿಯಾಗಿಟ್ಟು ಕೊಂಡು ಅರ್ಧಗಾಂಭೀರ್ಯದ ಕಡೆಗೂ ಛಂದಸ್ಸಿನ ಕಡೆಗೂ ಲಕ್ಷ ಕೊಟ್ಟು ಅಗತ್ಯವಾದ ಒಂದರ್ಧ ಅಕ್ಷರಗಳನ್ನು ಸತಃ ಹಾಕಿ ತಿದ್ದಿರುತ್ತದೆ. ಈ ಗ್ರಂಥದಲ್ಲಿ ಶ್ರೀ ಆದಿಶೆಟ್ಟಿಗಳವರ ಭಕ್ತಿ ಮಹಿಮೆಯೇ ಪ್ರಾಧಾನ್ಯ ವಾಗಿದ್ದು, ಶ್ರೀ ರಾಘವೇಶ್ವರ ಕವಿಗಳೆಂದುಕ್ತವಾದ cc ಸೋಮನಾಧಚರಿತ್ರ ” ಅ೦ ತಾ ಕೊಟ್ಟ ಹೆಸರನ್ನು ಕಾಯಮವಾಗಿಟ್ಟು ಈ ಗ್ರಂಥಕ್ಕೆ « ಸೋಮನಾಥಚರಿತ್ರ ರೂ ಪವಾಗಿರುವ ಆದಿಶೆಟ್ಟಿ ಪುರಾಣಂ ?' ಅಂತಾ ಹೆಸರನ್ನು ಕೊಟ್ಟಿರುತ್ತದೆ.