ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 11 - ಆ 11 ಹಾಗೆಯೇ ಎದೆ ಕೋಲಸ್ಥಿಗೆ ಇ‍ತ್ತಟು, ಏಳೇಳು ಮೃದ್ವಸ್ಟಿ ಕೂಡಿರುವದರಿಂದ ಒಂದು ಪಕ್ಷ ಒಂದೇ, ಇನ್ನೊಂದು ಪಕ್ಷ 8, ಮತ್ತೊಂದು ಪಕ್ಷ 15 ಎಂತ ಎಣಿಸಲಿಕ್ಕೆ ಕಾರಣವೆಂತ ಕಾಣುತ್ತದೆ ಇವೇ ಮೊದಲಾದ ಕಾರಣಗಳಿಂದ ಎಲುಬುಗಳ ಗಣನೆಗಳಲ್ಲಿ ವ್ಯತ್ಯಾಸಗಳು ಕಾಣುವವು ಪಾಶ್ಕಾತ್ಯ ವೈದ್ಯರೊಳಗಿನ್ನೊಬ್ಬರ ಪ್ರಸ್ತಕದಲ್ಲಿ ಸಹ ಈ ಶರೀ ರದ ಒಟ್ಟು ಎಲುಬುಗಳ ಸಂಖೈಯು 2೦೦ ಎಂತ ಕಾಣಸಿಯದೆ (ಸಂ 24 ನೋಡು )

 17.       ಏತಾನಿ ಪಂಚವಿಧಾನಿ ಭವಂತಿ | ತದ್ಯಧಾ |
           ಕಪಾಲ ರುಚಕ ತರುಣ ವಲಯ ಸಲಕ ಸಂಜ್ಞಾನಿ | ತೇಷಾಂ ಬಾನು 
ಎಲುಬುಗಳ    ನಿತಂಬಾಂಸ ಗಂಡ ತಾಲು ಶಂಖ ಶಿರಸ್ಸು ಕಪಾಲಾನಿ | ದಶನಾಸ್ತು

ರಚನಾಭೇಡದ ರುಚಕಾಸಿ | ಘ್ರಾಣ ಕರ್ಣ ಗ್ರೀವಾಕ್ಷಿ ಕೋಷೇಷು ತರುಣಾನಿ |

   ಗಳು     ಪಾಣಿ ಪಾದ ಪಾರ್ಶ್ವ ಪೃಷ್ಠೋದರೋರಸ್ಸು ವಲಯಾನಿ | ಶೇಷಾಣಿ
           ನಲಕಸಂಜ್ಞಾನಿ | (ಸು. 331 )  
  
   ಎಲುಬುಗಳು 5 ವಿಧ. ಕಪಾಲ, ರುಚಕ, ತರುಣ, ನಲಯ, ನಲಿಕ ಎಂತ. ಅವುಗಳಲ್ಲಿ ಮೊಣಗಂಟು, ಅಂಡು, ಹೆಗಲು, ದವಡೆ, ಕಾಲು, ಕೆನ್ನ, ತಲೆ, ಇವುಗಳ ಎಲುಬುಗಳು ಕಪಾಲ ಗಳೆಂತಲೂ, ಹಲ್ಲುಗಳು ರುಚಕಗಳು (ರುಚಿಪ್ರದಗಳು) ಎಂತಲೂ, ಮೂಗು, ಕಿವಿ, ಕುತ್ತಿಗೆ ಕಣ್ಣಿನ ಚೀಲ, ಇವುಗಳಲ್ಲಿರುವವು ತರುಣಗಳು (ಮೃದು) ಎಂತಲೂ, ಹಸ್ತ, ಪಾದ, ಪಕ್ಕ, ಬೆನ್ನು, ಹೊಟ್ಟೆ, ಎದೆ, ಇವುಗಳ ಎಲುಬುಗಳು ವಲಯ(ಒಳೆ)ಗಳು ಎಂತಲೂ. ಉಳಿದವು ನಳಕ (ನಳಿಗೆ)ಗಳು ಎಂತಲೂ ವಿಭಕ್ತವಾಗಿವೆ


 18.       ಆಭ್ಯಂತರಗತೈ: ಸಾರೈರ್ಯಧಾ ತಿಷ್ಟಂತಿ ಭೂರುಹಾಃ |  
           ಅಸ್ಟಿಸಾರೈಸ್ತಧಾದೇಹಾ ದ್ರಿಯಂತೇ ದೇಹಿನಾಂ ಧ್ರುವಂ ||  
 ಒಲಬುಗಳ   ತಸ್ಮಾಚ್ಚಿರಎಸಷೀ ತ್ವಬ್ ಮಾಂಸೇಷು ಶರೀರಿಣಾಂ |  
 ಪ್ರಯೊಜನ   ಆಸ್ಥೀನಿ ನ ನಶ್ಯಂತಿ ಸಾರಾಣ್ತಾನಿ ದೇಹಿನಾಂ ||
           ಮಾಂಸಾನ್ಯತ್ರ ನಿಬದ್ದಾನಿ ಸಿರಾಭಿಃ ಸ್ನಾಯುಭಿಸ್ತಧಾ |
           ಅಸ್ದೀನ್ಯಾಲಂಬನಂ ಕೃತ್ವಾ ನ ಶೀರ್ರ್ಯಂತೇ ಪತಂತಿ ವಾ || (ಸು 331-32 )
    ಮರಗಳು ಒಳಗಿನ ತಿರಳುಗಳ ಬಲದಿಂದ ಹ್ಯಾಗೆ ನಿಂತಿರುತ್ತವೋ, ಹಾಗೆಯೇ ಪ್ರಾಣಿ ಗಳ ದೇಹಗಳು ಎಲುಬೆಂಬ ತಿರಳುಗಳಿಂದ ಗಟ್ಟಿಯಾಗಿ ಆಧರಿಸಲ್ಪಟ್ಟಿರುತ್ತವೆ. ಆದ್ದರಿಂದ ಪ್ರಾಣಿಗಳ ಚರ್ಮ-ಮಾಂಸಗಳು ಸ್ವಲ್ಪ ಕಾಲದಲ್ಲಿಯೇ ನಾಶವಾದಾಗ್ಯೂ, ಎಲುಬುಗಳು ನಾಶವಾಗುವದಿಲ್ಲ. ಇವು ದೇಹಧಾರಿಗಳ ತಿರುಳಾಗಿರುತ್ತವೆ. ಇವುಗಳಲ್ಲಿ ಮಾಂಸಗಳನ್ನು ನರಗಳಿಂದಲೂ ನಾಳಗಳಿಂದಲೂ ಕಟ್ಟಿರುವದರಿಂದ, ಎಲುಬುಗಳು ಕಡಿದುಹೋಗದೆ ಮತ್ತು ಬೀಳದೆ ಆಧರಿಸಿಕೊಂಡು ಇರುತ್ತವೆ.


 19.            ದಂತಾನಾಂ ಪತನಂ ಜನ್ಮ ಪುನಃ ಪಾತೇತ್ವಸೆಂಭವಃ | 
ದಂತಪತನ ಮತ್ತು    ತಲೇಷ್ವನುದ್ಭವೋ ಲೋಮ್ನಾಮೇತತ್ಸರ್ವಮಂ ಸ್ವಭಾವತಃ ||  
ತಲಗಳಲ್ಲ ರೋಮ    (ಭಾ ಪ್ರ. 35.)
ಹುಟ್ಟದಿರೋಣ