ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

0 11 -12-

        ಹಲ್ಲುಗಳು ಬೀಳುವದು ಪುನಃ ಹುಟ್ಟುವದು, ಎರಡನೇ ಬಿದ್ದರೆ ಪುನಃ ಹುಟ್ಟದಿರುವದು, ಅಂಗೈ ಅಂಗಾಲುಗಳಲ್ಲಿ ರೋಮ ಹುಟ್ಟದಿರುವದು, ಇದೆಲ್ಲಾ ಸ್ವಾಭಾವಿಕ (ಅಂದರೆ ಈಶ್ವರನ ಮಹಿಮೆ)

20.           ಸಾರ್ಧತ್ರಿವ್ಯಾಮಾನ್ಯಂತ್ರಾಣಿ ಪುಂಸಾಂ ಸ್ತ್ರೀಣಾಮರ್ಧವ್ಯಾಮ ಕರುಳುಗಳು ಹೀನಾನಿ } (ಸು. 329.)
              ಕರುಳುಗಳು ಗಂಡಸರಲ್ಲಿ ಮೂರುವರೆ ಮಾರು ಉದ್ದವಾಗಿಯೂ, ಹೆಂಗಸರಲ್ಲಿ ಅರ್ಧ ಮಾರು ಕಡಿಮೆಯಾಗಿಯೂ ಇರುತ್ತವೆ
  
21           ಷೋಡಶ ಕಂಡರಾಃ | ತಾಸಾಂ ಚತಸ್ರಃ ಪಾದಯೊಸ್ತಾವತ್ಯೋ ಹಸ್ತ
             ಗ್ರೀವಾಪೃಷ್ಠೇಷು | ತತ್ರ ಹಸ್ತಪಾದಗತಾನಾಂ ಕಂಡರಾಣಾಂ ನಖಾಃ
ಕಂಡರೆಗಳ      ಪ್ರರೋಹಾಃ | ಗ್ರೀವಾ ಹೃದಯ ಸಿಬಂಧಿನೀನಾಮಧೋಭಾಗಗತಾ 
   ಸ್ಥಾನ       ನಾಂ ಮೇಢ್ರಂ ಶ್ರೋಣಿ ಪೃಷ್ಠ ನಿಬಂಧಿನೀನಾಮಧೋಭಾಗಗತಾನಾಂ
             ಬಿಂಬಃ | ಮೂರ್ಧೋರು ವಕ್ಶೋ5ಕ್ಷಿ ಪಿಂಡಾದೀನಾಂ ಚ | (ಸು. 330.) 
         ಕಂಡರೆಗಳು 16. ಅವುಗಳೊಳಗೆ 4 ಪಾದಗಳಲ್ಲಿಯೂ, 4 ಹಸ್ತಗಳಲ್ಲಿ ಯೂ, 4 ಕೂರ ಳಲ್ಲಿ ಯೂ, 4 ಬೆನ್ನಿನಲ್ಲಿಯೂ ಇರುತ್ತವೆ. ಅವುಗಳಲ್ಲಿ ಹಸ್ತಪಾದಗಳೊಳಗೆ ಹೋದ ಕಂಡರೆ ಗಳಿಗೆ ಉಗುರುಗಳು ಅಂಕುರಗಳು, ಕುತ್ತಿಗೆಯನ್ನೂ ಹೃದಯವನ್ನೂ ಕಟ್ಟಿ ಕೆಳಗೆ ಹೋದವು ಗಳಿಗೆ ಮೇಢ್ರವು; ಮತ್ತು ಸೊಂಟವನ್ನೂ ಬೆನ್ನನ್ನೂ ಕಟ್ಟಿ ಕೆಳಗೆ ಹೋದವುಗಳಿಗೆ ಬಿಂಬವು (ಅಂಡು) ಮತ್ತು ತಲೆ, ತೊಡೆ, ಎದೆ, ಕಣ್ಣು, ಇವುಗಳ ಪಿಂಡಗಳು ಮುಂತಾದವುಗಳ ಗೋಪಿ ಸಹ.
         ಷರಾ ಧಾವಪ್ರಕಾರದ ಟೀಕೆಯ ಅಭಿಪ್ರಾಯವು ಈ ಅರ್ಥವನ್ನು ಬಲಪಡಿಸುತ್ತಿದೆ ಆದರೆ ಸಬಂಧನಸಂಗ್ರಹ ವ್ಯಾಖ್ಯಾನದಲ್ಲಿ 'ಅಕ್ಷಿ' ಎಂಬಲ್ಲಿ 'ಅಂಸ' ಎಂಬ ಪಾರ ಇಟ್ಟು ಕುತ್ತಿಗೆಯಿಂದ ಮೇಲೆ ಹೋದ ಕಂಡರೆಗಳಿಗೆ ಮಸ್ತಕದ ಮಂಡಲವು ಅ೦ಕುರ, ಪಾದಗಳಿಂದ ಮೇಲೆ ಹೋದ ಕಂಡರೆಗಳಿಗೆ ತೊಡೆಯ ಮಂಡಲವು ಅಂಕುರ, ವೆಸ್ನಿ ಸಿಂದ ಮೇಲೆ ಹೋದ ಕಂಡರೆಗಳಿಗೆ ಎದೆ ಮಂಡಲವು ಸ್ತನಮಂಡಲ ಸಹ, ಅಂಕುರ, ಕೈಗಳಿಂದ ಮೇಲೆ ಹೋದ ಕಂಡರೆಗಳಿಗೆ ತೋಳಿನ ಬುಡ ಅಂಕುರ, ಎಂತ ಅರ್ಥ ಬರೆಯಲ್ಪಟ್ಟಿದೆ 
          
         ಮಹತ್ಯಃ ಸ್ವಾಯವಃ ಪ್ರೋಕ್ತಾಃ ಕಂಡರಾಃ | (ಭಾ. ಪ್ರ. 33 ) 
     ದೊಡ್ಡ ನರಗಳಿಗೆ (ಸ್ನಾಯು) ಕಂಡರೆ ಎಂತ ಹೆಸರು. 
22.     ಕಂಡರೆಗಳ     ಪ್ರಸಾರಣಾಕುಂಚನಯೋರಂಗಾನಾಂ ಕಂಡರಾ ಮತಾಃ |
       ಉಪಯೋಗ                                (ಶಾ. 16.)
    ಅಂಗಗಳನ್ನು ಮಡಚುವದಕ್ಕೂ ಚಾಚುವದಕ್ಕೂ, ಕಂಡರೆಗಳು ಉಪಯೋಗವುಳ್ಳವು


23.            ಸಂಧಯಸ್ತುದ್ವಿವಿಧಾಶ್ಚೇಷ್ಟಾವಂತಃ ಸ್ಥಿರಾಶ್ಚ |

ಎಲುಬುಗಳ ಸಂದು ಶಾಖಾಸು ಹನ್ವೋಃ ಕಛ್ಯಾಂಚ ಚೇಷ್ಟಾವಂತಸ್ತು ಸಂಧಯಃ | . ಗಳಲ್ಲಿ ಸ್ಥಿರ, ಚರ ಶೇಷಾಸ್ತು ಸಂಧಯಸ್ಸರ್ವೇ ವಿಜ್ನೀಯಾ ಹಿ ಸ್ಥಿರಾ ಬುಧೈಃ || (ಸು. 332.) ಎಂಬ ಎರಡು ವಿಧ

           ಎಲುಬುಗಳ ಸಂದುಗಳು ಸ್ಥಿರವಾದವು ಎಂತಲೂ ಅಲ್ಲಾಡತಕ್ಕವು ಎಂತಲೂ, ಎರಡು