ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಅ 11
-16-
ಯಃ ಸ್ನಾಯೂಃ ಪ್ರವಿಜಾನಾತಿ ಬಾಹ್ಯಾಶ್ಚಾಭ್ಯಂತರಾಸ್ತಧಾ | ಸ ಗೂಢಂ ಶಲ್ಯ ಮಾಹರ್ತು೦ ದೇಹಾಚ್ಛಕ್ನೋತಿ ದೇಹಿನಾಂ || (ಸು. 333-34)
ಸ್ನಾಯು (ನರಗಳು) 4 ವಿಧ; (1) ಹಾಸಿ ಅಧವಾ ಚಾಚಿಕೊಂಡಿರುವಂಧವು, (2) ದುಂಡಾಗಿರುವಂಧವು, (3) ಸ್ಥೂಲವಾಗಿರುವಂಧವು, ಮತ್ತು (4) ಛಿದ್ರಯುಕ್ತವಾ ದಂಧವು, ಕೈಕಾಲುಗಳೆಂಬ ಶಾಖೆಗಳಲ್ಲಿಯೂ ಸರ್ವ ಸಂದುಗಳಲ್ಲಿಯೂ ಇರುವವು 1ನೇ ಜಾತಿಯವು; ಕಂಡರೆಗಳೆಲ್ಲಾ 2ನೇ ಜಾತಿಯವು; ಆಮಾಶಯ ಪಕ್ವಾಶಯಗಳ ಸಮೀಪ ಪ್ರಾಂತಗಳಲ್ಲಿ ಮತ್ತು ಮೂತ್ರಾಶಯದಲ್ಲಿರುವಂಧವು 4ನೇ ಜಾತಿಯವು; ಪಕ್ಕಗಳಲ್ಲಿಯೂ, ಎದೆಯ ಲ್ಲಿಯೂ, ಬೆನ್ನಿನಲ್ಲಿಯೂ, ಶಿರಸ್ಸಿನಲ್ಲಿಯೂ ಇರುವಂಧವು 3ನೇ ಜಾತಿಯವು, ಆಗಿರುತ್ತವೆ. ಮನುಷ್ಯರು ಬಹು ಹಗ್ಗದ ಕಟ್ಟುಗಳಿಂದ ಹಲಿಗೆಗಳನ್ನು ಸರಿಯಾಗಿ ಜೋಡಿಸಿ ಬಿಗಿದು ಮಾಡಿದ ಹಡಗು ಹ್ಯಾಗೆ ಭಾರ ಸಹಿಸುವ ಸಾಮರ್ಧ್ಯವುಳ್ಳದ್ದಾಗಿರುತ್ತದೆ, ಹಾಗೆಯೇ ಈ ಶರೀರದಲ್ಲಿ ಇರುವ ಸಂದುಗಳು ಬಹು ನರಗಳಿಂದ ಬಿಗಿಯಲ್ಪಟ್ಟಿರುವದರಿಂದ, ಮನಷ್ಯರು ಭಾರವನ್ನು ಸಹಿಸ ಸಮರ್ಥರಾಗಿದ್ದಾರೆ ಈ ನರಗಳಿಗೆ ಕೆಡಕು ಬಂದಲ್ಲಿ ಮರಣ ಉಂಟಾದ ಹಾಗೆ, ಎಲುಬುಗಳಿಗಾಗಲಿ, ಮಾಂಸಖಂಡಗಳಿಗಾಗಲಿ, ಸಿರಾನಾಳಗಳಿಗಾಗಲಿ, ಸಂದುಗಳಿಗಾಗಲಿ, ಕೆಡಕು ಬಂದಲ್ಲಿ ಆಗಲಿಕ್ಕಿಲ್ಲ. ಯಾವನು ಒಳಗೂ ಹೊರಗೂ ಇರತಕ್ಕ ನರಗಳನ್ನು ಚನ್ನಾಗಿ ಬಲ್ಲನೋ ಅವನು ಮನುಷ್ಯರ ಶರೀರದೊಳಗೆ ಅಡಗಿರುವ ಶಲ್ಯವನ್ನು ಹೊರಗೆ ತೆಗೆದುಬಿಡಲಿಕ್ಕೆ ಶಕ್ತಿಯುಳ್ಳವನಾಗುತ್ತಾನೆ.
ಸ್ನಾಯವೋ ಬಂಧನಂ ಪ್ರೋಕ್ತಾ ದೇಹೇ ಮಾಂಸಾಸ್ಥಿಮೇದಸಾಂ | (ಶಾ. 16.) ನರಗಳು ದೇಹದಲ್ಲಿ ಮಾಂಸ, ಎಲುಬು ಮತ್ತು ಮೇದಸ್ಸಿಗೆ ಕಟ್ಟಾಗಿರುತ್ತವೆ.
28. ಪಂಚ ಪೇಶೀ ಶತಾನಿ ಭವಂತಿ | ತಾಸಾಂ ಚತ್ವಾರಿಶತಾನಿ ಶಾಖಾಸು | ಕೋಷ್ಠೇ ಷಟ್‌ಷಷ್ಠಿ | ಗ್ರೀವಾಂ ಪ್ರತ್ಯರ್ಧ್ವಂ ಚತುಸ್ತ್ರಿಂಶತ್ | ಏಕೈಕಸ್ಯಾಂ ತು ಪಾದಾಂಗುಲ್ಯಾಂ | ತಿಸ್ರಪ್ರಸ್ತಾಃ ಪಂಚದಶ | ದಶಪ್ರಪದೇ | ಪಾದೋಪರಿ ಕೂರ್ಚಸನ್ನಿವಿಷ್ಟಾಸ್ತಾವತ್ಯ ಏವ | ದಶಗುಲ್ಫತಲಯೋಃ | ಗುಲ್ಫ ಜಾನ್ವಂತರೇ ವಿಂಶತಿಃ | ಪಂಚ ಜಾ ನುನಿ | ವಿಂಶತಿರೂರೌ | ದಶವಬ್ಕಣೇ | ಶತಮೇವಮೇತಸ್ಮಿನ್ ಸಕ್ಥ್ನಿ ಭವಂತಿ | ಏತೇನೇತರ ಸಕ್ತಿ ಬಾಹೂ ಚ ವ್ಯಾಖ್ಯಾತೌ | ತಿಸ್ರಃ ಪಾಯೌ | ಏಕಾಮೇಢ್ರೇ | ಸೇವನ್ಯಾಂ ಚಾಪರಾ | ದ್ವೇವೃಷಣಯೋಃ| ಸ್ಛಿಚೋಃ ಪಂಚಪಂಚ | ದ್ವೇವಸ್ತಿ ಶಿರಸಿ | ಪಂಚೋದರೇ | ನಾಭ್ಯಾಮೇ
ಮಾಂಸಖಂಡಗಳ ಸಂಖ್ಯೆ ವ ಸ್ಥಾನ
ಕಾ | ಪೃಷ್ಠೋರ್ಧ್ವ ಸನ್ನಿವಿಷ್ಟಾಃ ಪಂಚಪಂಚ, ದೀರ್ಘಾ | ಷಟ್ ಪಾರ್ಶ್ವಯೋಃ | ದಶವಕ್ಷಸಿ | ಅಕ್ಷತಾಂಸೌಪ್ರತಿ ಸಮಂತಾತ್ ಸಪ್ತ | ದ್ವೇ ಹೃದಯಾಮಾಶಯಯೋಃ | ಷಟ್ ಯಕೃತ್ ಪ್ಲೇಹೋಂಡುಕೇ ಷು | ಗ್ರೀವಾಯಾಂ ಚತಸ್ರಃ | ಅಷ್ಟೌ ಹನ್ವೋಃ | ಏಕಕಾಕಾಕಲಕ ಗಲಯೋಃ | ದ್ವೇ ತಾಲುನಿ | ಏಕಾ ಜಿಹ್ವಾಯಾಂ | ಓಷ್ಠಯೋರ್ದ್ವೇ |